ಮಳೆಯ ಕಾರಣಕ್ಕಾಗಿ ಮಕ್ಕಳಲ್ಲಿ ಶೀತ, ನೆಗಡಿ, ಜ್ವರಗಳ ಸಂಖ್ಯೆ ಹೆಚ್ಚಳ: ಪಾಲಕರಿಗೆ ಆತಂಕ
Increase in colds, flu, and fever among children due to rain: Parents worried
ಮಳೆಯ ಕಾರಣಕ್ಕಾಗಿ ಮಕ್ಕಳಲ್ಲಿ ಶೀತ, ನೆಗಡಿ, ಜ್ವರಗಳ ಸಂಖ್ಯೆ ಹೆಚ್ಚಳ: ಪಾಲಕರಿಗೆ ಆತಂಕ
ಚಿಕ್ಕೋಡಿ 29: ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ ನಿಪ್ಪಾಣಿ ರಾಯಬಾಗ್ ತಾಲೂಕಿನಲ್ಲಿ ಎರಡು-ಮೂರು ವಾರಗಳಿಂದ ನಿರಂತರ ಮಳೆಯಾದ ಕಾರಣ ವಾತಾವರಣ ತಂಪಾಗಿದೆ. ಪರಿಣಾಮ, ಶೀತ, ನೆಗಡಿ, ವೈರಲ್ ಜ್ವರಗಳಂಥ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಮುಖ್ಯವಾಗಿ ಮಕ್ಕಳಲ್ಲಿ ಹೆಚ್ಚಾಗಿ ಜ್ವರ ಕಾಣಿಸಿಕೊಳ್ಳುತ್ತಿದ್ದು, ಪಾಲಕರು ಆತಂಕಗೊಂಡಿದ್ದಾರೆ.
ಕೆಲ ದಿನಗಳಿಂದ ಜ್ವರದಿಂದ ಆಸ್ಪತ್ರೆಗೆ ಬರುವ ಮಕ್ಕಳ ಸಂಖ್ಯೆ ಶೇ 10 ರಿಂದ 20ಕ್ಕೆ ಹೆಚ್ಚಳವಾಗಿದೆ. ತಂಪಿನ ಮಧ್ಯೆ ಬಿಸಿಲು ಬೀಳುತ್ತಿರುವುದರಿಂದ ವಾತಾವರಣದ ಸಮತೋಲನ ತಪ್ಪಿದೆ. ಅನಾರೋಗ್ಯಕ್ಕೀಡು ಮಾಡುವ ವೈರಾಣುಗಳು ಉಲ್ಬಣವಾಗುತ್ತಿವೆ. ಸೇವಿಸುವ ಗಾಳಿ, ನೀರು, ಆಹಾರದಲ್ಲಿ ಅದು ಸೇರಿ ವೈರಲ್ ಜ್ವರ, ಶೀತ ಕಾಣಿಸಿಕೊಳ್ಳುತ್ತಿದೆ ಎಂದು ವೈದ್ಯರು ಹೇಳುತ್ತಾರೆ.
ತಾಲೂಕಿನ ಸಾರ್ವಜನಿಕ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆ ಗಳಲ್ಲಿ ಹೊರ ರೋಗಿಗಳ ವಿಭಾಗದಲ್ಲಿ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳ ಎದುರು ಸಹ ರೋಗಿಗಳು, ಬೆಳಿಗ್ಗೆಯಿಂದ ಸಂಜೆವರೆಗೂ ಸಾಲುಗಟ್ಟಿ ನಿಂತಿರುತ್ತಾರೆ. ಹೀಗಾಗಿ ಎರಡು-ಮೂರು ದಿನ ಮೊದಲೇ ಮುಂಗಡವಾಗಿ ರೋಗಿ ಹೆಸರಲ್ಲಿ ಚೀಟಿಯನ್ನು ಕಾಯ್ದಿರಿಸಲಾಗುತ್ತಿದೆ.
ಎಂಟು ವರ್ಷದ ಮಗಳಿಗೆ ಆರಂಭದಲ್ಲಿ ಶೀತ ಬಂದಿತ್ತು. ನಂತರ ಜ್ವರ ಕಾಣಿಸಿಕೊಂಡು ವಾಂತಿ-ಬೇಧಿಯಾಗಿತ್ತು. ತಕ್ಷಣ ವೈದ್ಯರಿಗೆ ತೋರಿಸಿ ಚಿಕಿತ್ಸೆ ಕೊಡಿಸಿದ್ದೆ. ಇವತ್ತು ಮತ್ತೆ ವಿಪರೀತ ಜ್ವರ ಬಂದಿದೆ. 12 ದಿನವಾದರೂ ಜ್ವರ, ಶೀತ ಕಡಿಮೆಯಾಗುತ್ತಿಲ್ಲ' ಎಂದು ಮಾಂಜರಿ ಗ್ರಾಮದ ಆಸ್ಪತ್ರೆಗೆ ಮಗನನ್ನು ಕರೆದುಕೊಂಡು ಬಂದ ಸವಿತಾ ಶೇಖರ್ ಪಾಟೀಲ್ ತಿಳಿಸಿದರು
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 