ಕಲಾವಿದ ಡಿ. ಎಂ.ಬಡಿಗೇರ ಅವರ ಚಿತ್ರಕಲಾ ಪ್ರದರ್ಶನ ಉದ್ಘಾಟನೆ
Inauguration of the painting exhibition of artist D. M. Badigera
ಧಾರವಾಡ 07: ಭಾರತೀಯ ಆದಿವಾಸಿಗಳ, ಜನಪದೀಯ ಹಾಗೂ ಪೌರಾಣಿಕ ದಂತಕಥೆಗಳ ವಿಷಯ ವಸ್ತುಗಳನ್ನಾಯ್ದುಕೊಂಡು ತಮ್ಮದೇ ಕಲಾನಿರ್ಮಿತಿ ಸ್ವಾತಂತ್ರ್ಯವನ್ನು ಡಿ.ಎಂ.ಬಡಿಗೇರ ಅವರು ಅಳವಡಿಸಿಕೊಂಡು ಮನೋರಂಜನೀಯವಾಗಿ ಕಲಾಕೃತಿ ರಚನೆ ಮಾಡಿದ್ದಾರೆ ಎಂದು ಚಿಂತಕರು ಹಾಗೂ ಇತಿಹಾಸ ತಜ್ಞರಾದ ಡಾ.ಶಿವಾನಂದ ಶೆಟ್ಟರ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಡಿಸೆಂಬರ್ 5 ರಿಂದ 9 2025ರ ವರೆಗೆ ಸಂಘದ ಚಿತ್ರಕಲಾ ಪ್ರದರ್ಶನ ಸಭಾಭವನದಲ್ಲಿ ಆಯೋಜಿಸಿದ್ದ ಕಲಾವಿದ ಡಿ. ಎಂ.ಬಡಿಗೇರ ಅವರ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಕಲಾವಿದನಿಗೆ ಮುಖ್ಯವಾಗಿ ಇರಬೇಕಾದ ಕಲೆಗೆ ಪ್ರೇರಣೆಯಾಗಿರುವ ವಾಸ್ತವದಅರಿವು, ಅಪಾರವಾದ ಕಲ್ಪನಾ ಸಂಪತ್ತು, ಜೀವನಾನುಭವ ಹಾಗೂ ಅನುಭಾವಗಳನ್ನು ಮೈಗೂಡಿಸಿಕೊಂಡಿರುವ ಹಿರಿಯಕಲಾವಿದ ಬಡಿಗೇರ ಅವರು, ಧಾರವಾಡದ ಸರಕಾರಿಚಿತ್ರಕಲಾ ಮಹಾವಿದ್ಯಾಲಯದ 20 ವರ್ಷಗಳ ಉಪನ್ಯಾಸಕತ್ವದಿಂದ 2014 ರಲ್ಲಿಯೇ ನಿವೃತ್ತರಾಗಿದ್ದರೂ, ಈಗಲೂ ಕೂಡ ಸತತವಾಗಿ ಕಲಾಕೃತಿರಚನೆ ಮಾಡುತ್ತಿದ್ದು, ಕಲಾವಿದನಿಗೆ ನಿವೃತ್ತಿಯಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಕಲಾವಿದನ ಒಳನೋಟಗಳೊಂದಿಗೆ ಬೆಸೆಯುವಗುಣಕಲಾಕೃತಿಗೆ ಬಂದಾಗ ಮಾತ್ರ ಅದು ಒಂದು ಜೀವಂತ ಕೃತಿಯಾಗುತ್ತದೆ.ಇದಕ್ಕೆ ಬೇಕಾದುದು ಬಣ್ಣಗಳ ಹಿಂದಿನ ಭಾವಸಾಮಗ್ರಿ.ಭಾವಇಲ್ಲದಯಾವುದೇ ಕಲಾ ಕೃತಿಯು ಹೂವಿನಂತೆ ಅರಳುವುದಿಲ್ಲ. ಪ್ರತಿಚಿತ್ರಕೃತಿಯೂತನ್ನಲ್ಲಿ ಪ್ರಚೋದಿಸುವ ಭಾವನೆಗಳಿಗೆ ಬದ್ಧವಾಗಿರುವುದರಿಂದಲೇ ಕಲಾಕೃತಿಗಳ ತಾಜಾತನ ಹೆಚ್ಚು ಕಾಲ ಉಳೀದೀತು.ಬಡಿಗೇರಅವರುಕಲಾಕೃತಿ ಬಿಡಿಸಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದರಿಂದಲೇ ಅಷ್ಟು ಪ್ರೀತಿ ಹಾಗೂ ಸಂಬಂಧ ಆ ಕಲಾಕೃತಿಯೊಂದಿಗೆಆಗುತ್ತದೆ.
ಸಾಮಾನ್ಯ ಜನತೆಯ ಗ್ರಹಿಕೆಗೆ ನಿಲುಕುವಂತ ಹರೀತಿಯಲ್ಲಿ ಒಂದು, ಎರಡು ಅಥವಾ ಎರಡಕ್ಕಿಂತ ಹೆಚ್ಚು ಮಾನವ ರೂಪುಗಳನ್ನು ಒಳಗೊಂಡ ಸಂವಹನೆಗೆ ಸುಲಭವಾದ ರೀತಿಯ ಕಥನ ನೆಲೆಯ ಚಿತ್ರಗಳನ್ನು ಚಿತ್ರಿಸಿದ್ದಾರೆ. ಸಾಮಾಜಿಕ ಜೀವನದ, ದೈನಂದಿನ ಬದುಕಿನ ಹಲವು ಸಾಮಾನ್ಯ ಮುಖಗಳನ್ನು, ಅಲೆಮಾರಿ ಜನಾಂಗಗಳ, ಬುಡಕಟ್ಟುಗಳ ಬದುಕಿನ ದೃಶ್ಯಗಳನ್ನು ಸರಳ ಸಂಯೋಜನೆಯ ನೆಲೆಯಲ್ಲಿಕಲಾಕೃತಿರಚನೆ ಮಾಡಿದ್ದಾರೆ. ಮುನ್ನೆಲೆಯ ಪ್ರಮುಖ ಆಕೃತಿಗಳು ವಾಸ್ತವಕ್ಕೆ ಹತ್ತಿರವಾದರೂ ವಾಸ್ತವವಲ್ಲದ ರೀತಿಯಲ್ಲಿ ಅತೀ ವಾಸ್ತವವಾದದ ಹಲವು ಅಂಶಗಳನ್ನು ಸಮ್ಮಿಲಿತಗೊಳಿಸಿ ಹಿನ್ನೆಲೆಯಲ್ಲಿತಂತ್ರ, ಮೈವಳಿಕೆಗಳನ್ನು ಅಳವಡಿಸಿ ಅಮೂರ್ತೀಕರಿಸುವದು, ಬಹುವರ್ಣಗಳನ್ನು ಬಳಸಿದರೂ ಒಂದು ವರ್ಣವನ್ನು ಮಾತ್ರ ಪ್ರಧಾನವಾಗಿರಿಸಿದ ವರ್ಣಗಾರಿಕೆ, ನೆರಳು ಬೆಳಕುಗಳನ್ನು ಅವಾಸ್ತವ ರೀತಿಯಲ್ಲಿರಿಸಿ ವೈದೃಶ್ಯಗಳನ್ನು ತರುವುದುಇವೆಲ್ಲ ಬಡಿಗೇರಅವರಕೃತಿರಚನಾ ವೈಶಿಷ್ಟ್ಯಗಳಾಗಿವೆ ಎಂದುಡಾ. ಶಿವಾನಂದ ಶೆಟ್ಟರ ಹೇಳಿದರು.
ಹಿರಿಯಕಲಾವಿದ ಶ್ರೀಮತಿ ಗಾಯತ್ರಿದೇಸಾಯಿ ಮಾತನಾಡುತ್ತಾ, 50, 60 ರ ದಶಕಗಳಲ್ಲಿ ಕಲಾವಿದರ ಚಿತ್ರಕೃತಿಗಳನ್ನು ಪ್ರದರ್ಶಿಸಲು ಸೂಕ್ತ ಗ್ಯಾಲರಿಗಳಿರಲಿಲ್ಲ. ಆದ್ದರಿಂದಕಲಾವಿದರು ಸಮಾಜಕ್ಕೆ ಹೆಚ್ಚೆಚ್ಚು ಪರಿಚಿತರಾಗುತ್ತಿರಲಿಲ್ಲ. ಇತ್ತೀಚೆಗೆಚಿತ್ರಕಲೆಯಲ್ಲಿ ಹೊಸ ಹೊಸ ಆವಿಷ್ಕಾರಗಳಾಗಿವೆ. ಇಲ್ಲಿ ಪ್ರದರ್ಶಿತವಾದ ಬಡಿಗೇರರ ಕೃತಿಗಳು ಕಲಾತ್ಮಕ ಅಂಶಗಳೊಳಗೂಡಿದ್ದು ಉತ್ತಮ ವರ್ಣಸಂಯೋಜನೆಯೊಂದಿಗೆದರ್ಶಕರಿಗೆ ಸೌಂದರಾ್ಯನುಭವ ನೀಡುತ್ತವೆಎಂದರು.
ಮತ್ತೊರ್ವಅತಿಥಿ ಹಿರಿಯಕಲಾವಿದರಾದ ಬಿ.ಮಾರುತಿಅವರು, ಬಡಿಗೇರಅವರು ವೃತ್ತಿನಿರತ ಶ್ರೇಷ್ಠ ಚಿತ್ರಕಲಾವಿದರು.ಅದರೊಂದಿಗೆಕಲಾತ್ಮಕಛಾಯಾಚಿತ್ರತೆಗೆಯುವುದರಲ್ಲೂ ಪರಿಣಿತರು.ಪ್ರಸ್ತುತ ಪ್ರದರ್ಶನದಲ್ಲಿರುವಅವರ ಚಿತ್ರಕೃತಿಗಳು ಮನೋರಂಜನೀಯ ಪರಾಕಾಷ್ಠತೆಯನ್ನು ಸಾರುತ್ತವೆ. ಅವರ ಕೃತಿಗಳ ವಿಮರ್ಶೆಯಾಗಬೇಕುಎಂದು ಹೇಳಿದರು.
ಕ.ವಿ.ವ. ಸಂಘದ ಅಧ್ಯಕ್ಷಚಂದ್ರಕಾಂತ ಬೆಲ್ಲದಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ಡಿ. ಎಂ.ಬಡಿಗೇರಅವರು 45 ವರ್ಷಗಳಿಂದ ಚಿತ್ರಕಲೆಯಲ್ಲಿ ಕೃಷಿ ಮಾಡುತ್ತಿರುವುದರಿಂದಅವರೊಬ್ಬಉತ್ತಮ ಕಲಾವಿದರೆನಿಸಿಕೊಂಡಿದ್ದಾರೆ.ಅವರ ಕಲಾಕೃತಿಗಳು ಜನಮನ್ನಣೆಗಳಿಸಿವೆ ಎಂದರು.
ಧನವಂತ ಹಾಜವಗೋಳ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಶಂಕರ ಕುಂಬಿ, ಡಾ.ಲೋಹಿತ ನಾಯ್ಕರ, ಡಾ.ಪಾರ್ವತಿ ಹಾಲಭಾವಿ, ಎಸ್.ಕೆ.ಪತ್ತಾರ, ಸುರೇಶ ಹಾಲಭಾವಿ ಸೇರಿದಂತೆಚಿತ್ರಕಲಾಸಕ್ತರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 