ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜೀನೀಯರ್ಸ್ ಪದಾಧಿಕಾರಿಗಳ ಪದಗ್ರಹಣ
Inauguration of the office bearers of the Association of Consulting Civil Engineers
ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜೀನೀಯರ್ಸ್ ಪದಾಧಿಕಾರಿಗಳ ಪದಗ್ರಹಣ
ಧಾರವಾಡ 16: ಸಮಾಜದಲ್ಲಿನ ಜನರ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಸೇವೆ ಒದಗಿಸುವ ನೈಪುಣ್ಯತೆ ಬೆಳೆಸಿಕೊಳ್ಳಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಅವರು ಇಂಜನೀಯರಗಳಿಗೆ ಕರೆ ನೀಡಿದರು. ಮಂಗಳವಾರ ನಗರದ ಆಲೂರ ವೆಂಕಟರಾವ್ ಸಭಾಭವನದಲ್ಲಿ ಹುಬ್ಬಳ್ಳಿಯ ಕೋಟಿ ಸ್ಟೀಲ್ 600ಆ, ಕೋಳಿವಾಡ ಮಾರ್ಬಲ್ಸ್ ಆ್ಯಂಡ್ ಗ್ರಾನೈಟ್ಸ್ ಮತ್ತು ಧಾರವಾಡದ ಪ್ರಭು ಸಿರಾಮಿಕ್ಸ್ ಆ್ಯಂಡ್ ಗ್ರಾನೈಟ್ಸ್ ಪ್ರಾಯೋಜಕತ್ವದಲ್ಲಿ ಜರುಗಿದ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜೀನೀಯರ್ಸ್, ಧಾರವಾಡ ಸೆಂಟರ್‌ನ 2025-2027 ನೇಯ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಪ್ರಸ್ತುತ ವಾಸಿಸಲು ಮನೆ ಇಲ್ಲದ ಅನೇಕ ಕುಟುಂಬಗಳಿವೆ. ಅಂಥವರಿಗೆ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಬೇಕಿದೆ. ಅಲ್ಲದೇ ರಸ್ತೆ, ಕಟ್ಟಡ ಇನ್ನಿತರ ನಿರ್ಮಾಣ ಕಾರ್ಯಗಳಲ್ಲಿ ಅಗತ್ಯವಿರುವ ಹೊಸ ತಂತ್ರಜಾನ ತಿಳಿಸುವ ಮತ್ತು ಬಳಸುವತ್ತ ಆದ್ಯತೆ ಕೊಡಬೇಕು. ಈ ಮೂಲಕ ಸಮಾಜಮುಖಿ ವೃತ್ತಿಪರತೆ ಮುಂದುವರೆಸಬೇಕು ಎಂದು ಹೇಳಿದರು. ಇಂಜನೀಯರಗಳು ಎದುರಿಸುತ್ತಿರುವ ಕಾನೂನು ಸಮಸ್ಯೆ ಕುರಿತು ತಾವು ಸದನದಲ್ಲಿ ಪ್ರಸ್ತಾಪಿಸಿದ್ದನ್ನು ನೆನಪಿಸಿದ ಶಾಸಕರು, ಈ ಕುರಿತು ನಗರಾಭಿವೃದ್ಧಿ ಸಚಿವರನ್ನು ಎಸಿಸಿಇ ಪದಾಧಿಕಾರಿಗಳ ಜೊತೆ ಭೇಟಿ ಮಾಡಿ ಚರ್ಚಿಸುವುದಾಗಿ ಭರವಸೆ ನೀಡಿದರು.
ಅನುಸ್ಥಾಪನ ಅಧಿಕಾರಿಯಾಗಿ ಭಾಗವಹಿಸಿದ್ದ ಎಸಿಸಿಇ (ಇಂಡಿಯಾ) ಪ್ರಧಾನ ಕಾರ್ಯದರ್ಶಿ ಮತ್ತು ಚುನಾಯಿತ ಅಧ್ಯಕ್ಷ ಇಂ.ರಾಜೇಂದ್ರ ಕಲಬಾವಿ ಮಾತನಾಡಿ, ಆಸಕ್ತಿವಹಿಸಿ ಕೆಲಸ ನಿರ್ವಹಿಸುವ ಮೂಲಕ ವೃತ್ತಿ ಗೌರವ ಉಳಿಸಿಕೊಳ್ಳಬೇಕು. ಇದಕ್ಕಾಗಿ ಸದಾ ಹೊಸತನ ಹುಡುಕುವ ತವಕ ಇಂಜನೀಯರಗಳಲ್ಲಿ ಇರಬೇಕು ಎಂದ ಅವರು, ಇಂಜನೀಯರಗಳ ಹಿತದೃಷ್ಠಿಯಿಂದ ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು. ನೂತನ ಚೇರಮನ್ ಇಂ.ಬಸವರಾಜ ಖಣದಾಳಿ, ಕಾರ್ಯದರ್ಶಿ ಇಂ. ವಿಜಯಕುಮಾರ ಶಿರಗುಪ್ಪಿ, ಖಜಾಂಚಿ, ಇಂ.ಮಹಮ್ಮದ ಅಬ್ಯಾಳ, ಆಡಳಿತ ಮಂಡಳಿಯ ಸದಸ್ಯರಾದ ಇಂ. ಸಂತೋಷ ಅಂಚಟಗೇರಿ,ಇಂ. ಪ್ರಭುಪ್ರಸಾದ ಮತ್ತು ಇಂ.ದೇವರಾಜ ಕಂಬಳಿ ಅವರ ಪದಗ್ರಹಣ ಮಾಡಿದರು.
ಹಿರಿಯ ಇಂಜನೀಯರ ಜಗದೀಶ ನಂದಿ, ಎಸಿಸಿಇ(ಲೋಕಲ್ ಸೆಂಟರ್) ಅಧ್ಯಕ್ಷ ಸುನೀಲ ಬಾಗೇವಾಡಿ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಅಸೋಶಿಯೇಶನ್‌ದ ಮಾಜಿ ಚೇರಮನ್‌ರನ್ನು ಗೌರವಿಸಲಾಯಿತು. ಸ್ವಾತಿ ಸುಲಾಖೆ ಪ್ರಾರ್ಥಿಸಿದರು. ನಾಗರಾಜ ತಿಗಡಿ ಸ್ವಾಗತಿಸಿದರು. ಎಸ್.ಆರ್.ರಾನೋಜಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಜಯೇಂದ್ರ ಪಾಟೀಲ ನಿರೂಪಿಸಿದರು.ಕಬೀರ ನದಾಫ್ ಮತ್ತು ಸಿದ್ಧನಗೌಡ ಪಾಟೀಲ ಪರಿಚಯಿಸಿದರು.ಎ.ಸಿ.ತಹಶೀಲದಾರ ವಂದಿಸಿದರು. ಧಾರವಾಡ ಮತ್ತು ಹುಬ್ಬಳ್ಳಿಯ ಇಂಜೀನೀಯರ್‌ಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 