ಕೃಷಿ ವಿಜ್ಞಾನಕೆಂದ್ರ, ಹುಲಕೋಟಿಯಲ್ಲಿ ದೇಸಿ ಕೋರ್ಸಿನ 4ನೇ ತಂಡದ ಉದ್ಘಾಟನೆ

ಕೃಷಿ ವಿಜ್ಞಾನಕೆಂದ್ರ, ಹುಲಕೋಟಿಯಲ್ಲಿ ದೇಸಿ ಕೋರ್ಸಿನ 4ನೇ ತಂಡದ ಉದ್ಘಾಟನೆ Inauguration of the 4th batch of Desi Course at Krishi Vigyan Kendra, Hulakoti

ಹುಲಕೋಟಿ 19 : ಐ.ಸಿ.ಎ.ಆರ್‌-ಕೆ.ಎಚ್‌.ಪಾಟೀಲ ಕೃಷಿ ವಿಜ್ಞಾನಕೇಂದ್ರ, ಹುಲಕೋಟಿ, ಸಮೇತಿ-ಉತ್ತರ, ಕೃಷಿ ವಿಶ್ವವಿದ್ಯಾಲಯ, ಧಾರವಾಡ, ಕೃಷಿ ಇಲಾಖೆ, ಗದಗ ಹಾಗೂ ಮ್ಯಾನೇಜ್, ಹೈದರಾಬಾದ ಇವರ ಸಂಯುಕ್ತಾಶ್ರಯದಲ್ಲಿ ನಡೆಯುವ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣೆಯಲ್ಲಿ ಡಿಪ್ಲೋಮಾ ಕೋರ್ಸಿನ ಉದ್ಘಾಟನಾ ಸಮಾರಂಭವು ದಿನಾಂಕ: 19-02-2026 ರಂದುಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೃಷಿ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಪಿ.ಎಲ್‌.ಪಾಟೀಲ ಅವರು, ಶಿಬಿರಾರ್ಥಿಗಳು ದೇಸಿ ಕೋರ್ಸಿನಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಕೃಷಿಯಲ್ಲಿನ ವಿವಿಧ ತಾಂತ್ರಿಕತೆಗಳನ್ನು ರೈತರಿಗೆ ಮುಟ್ಟುವಂತೆಕಾರ್ಯ ನಿರ್ವಹಿಸಬೇಕು ಎಂದುಕರೆ ನೀಡಿದರು. ಅಲ್ಲದೇ ಪರಿಕರ ಮಾರಾಟಗಾರರು ಕೇವಲ ಲಾಭಕ್ಕೆ ವಹಿವಾಟು ಮಾಡದೇ, ಕೃಷಿಕರ ಏಳ್ಗೆಗಾಗಿಯೂ ಶ್ರಮ ವಹಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಸ್ತರಣಾ ನಿರ್ದೇಶಕರಾದಡಾ. ಎಮ್‌.ವಿ.ಮಂಜುನಾಥ ಇವರುರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಪರಿಕರ ಮಾರಾಟಗಾರರ ಜವಾಬ್ದಾರಿ ಬಹಳ ಮುಖ್ಯ. ದೇಸಿ ತರಬೇತಿಯು ಇಂತಹ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಲು ನೆರವಾಗುತ್ತದೆ, ಇದರಿಂದ ಕೃಷಿ ಪರಿಕರ ಮಾರಾಟಗಾರರು ಕೃಷಿ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಹಾಗೂ ರೈತರ ನಡುವೆಕೊಂಡಿಯಂತೆ ಕಾರ್ಯನಿರ್ವಹಿಸಬೇಕು ಎಂದು ಅಭಿಪ್ರಾಯ ಪಟ್ಟರು ಹಾಗೂ ದೇಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರವನ್ನು ಶ್ಲಾಘಿಸಿದರು. 

         ಮುಖ್ಯಅತಿಥಿ ಸ್ಥಾನ ವಹಿಸಿ ಮಾತನಾಡಿದ ಸಮೇತಿ-ಉತ್ತರ, ಕೃಷಿ ವಿಶ್ವವಿದ್ಯಾಲಯದ ಸಂಯೋಜಕರಾದ ಡಾ.ಎಸ್‌.ಎನ್‌.ಜಾಧವ್ ಇವರು ದೇಸಿ ತರಬೇತಿಯಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಹಲವಾರು ಕೃಷಿ ಸಂಭಂಧಿತ ವಿಷಯಗಳ ಕುರಿತು ಬೋಧನೆ ನೀಡಲಾಗುವುದು ಹಾಗೂ ವಿವಿಧ ಕೃಷಿ ತಾಕುಗಳಿಗೆ ಕ್ಷೇತ್ರ ಭೇಟಿಗಳನ್ನು ಏರಿ​‍್ಡಸಲಾಗುವುದು.ಎಲ್ಲಾ ಶಿಬಿರಾರ್ಥಿಗಳು ತಮ್ಮ ತನು-ಮನ-ಧನವನ್ನು ಅರ​‍್ಿಸಿ ತರಬೇತಿಯಲ್ಲಿ ಭಾಗವಹಿಸಬೇಕು ಎಂದು ಮಾಹಿತಿ ನೀಡಿದರು. ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿಯ ಮುಖ್ಯಸ್ಥರಾದಡಾ. ಸುಧಾ ವ್ಹಿ. ಮಂಕಣಿಇವರು ಕೃಷಿ ವಿಜ್ಞಾನಕೇಂದ್ರ, ಹುಲಕೋಟಿಯು ಕಳೆದ ಮೂರು ವರ್ಷಗಳಿಂದ ಯಶಸ್ವಿಯಾಗಿ ದೇಸಿ ತರಬೇತಿಯನ್ನು ಹಮ್ಮಿಕೊಂಡಿದ್ದು, ಇಂದು ಉದ್ಘಾಟನೆಯಾಗಿರುವ ತರಬೇತಿ ಕಾರ್ಯಕ್ರಮಕ್ಕೆ ಅಗತ್ಯವಿರುವಎಲ್ಲಾ ಸೌಲಭ್ಯಗಳನ್ನು ಕೃಷಿ ವಿಜ್ಞಾನ ಕೇಂದ್ರದಿಂದ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಕೃಷಿ ಪರಿಕರ ಮಾರಾಟಗಾರರು, ತಮ್ಮ ಸಮಯವನ್ನು ವಿನಿಯೋಗಿಸಿ ಪ್ರಸ್ತುತ ತರಬೇತಿಯಲ್ಲಿ ಆಸಕ್ತಿ ವಹಿಸಿ ಪಾಲ್ಗೊಳ್ಳುವಂತೆ ಕರೆ ನೀಡಿದರು.