ದೇವಸ್ಥಾನ ಉದ್ಘಾಟನೆ ಹಾಗೂ ನೂತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ

Inauguration of temple and installation of new idol

ದೇವಸ್ಥಾನ ಉದ್ಘಾಟನೆ ಹಾಗೂ ನೂತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ

ಶಿಗ್ಗಾವಿ 13: ಪಟ್ಟಣದ ಐತಿಹಾಸಿಕ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಇದೆ ಜ 30 ರಿಂದ ಪೆ 7. ರವರೆಗೆ ದೇವಸ್ಥಾನ ಉದ್ಘಾಟನೆ ಹಾಗೂ ನೂತನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಬಿತ್ತಿಪತ್ರವನ್ನು ಸಮಿತಿ ಅಧ್ಯಕ್ಷ ಸುಭಾಸ ಚವ್ಹಾಣ ಅನಾವರಣಗೋಳಿಸಿದರು. 

   ಅಲ್ಲದೇ ಜ. 24 ರಂದು ಮೈಲಾರಲಿಂಗೇಶ್ವರ ದೇವಸ್ಥಾನದ ವಿವಿಧ ಮೂರ್ತಿಗಳ ಪುರ ಪ್ರವೇಶ ಕಾರ್ಯಕ್ರಮ ಪಟ್ಟಣದ ಗಂಗೆಭಾವಿ ದ್ವಾರಭಾಗಿಲಿನಿಂದ ವಿವಿಧ ವಾದ್ಯಗಳ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಸಿ ನಂತರ ದೇವಸ್ಥಾನಕ್ಕೆ ಪುರ ಪ್ರವೇಶವಾಗಲಿವೆ ಎಂದರು. 

   ಈ ಸಂದರ್ಭದಲ್ಲಿ ಮಲ್ಲಯ್ಯ ಹಿರೇಮಠ, ಉಳವಯ್ಯ ಕುಂಬಾರಗೇರಿಮಠ, ಚೇತನಸ್ವಾಮಿ ಸೇರಿದಂತೆ ಸಮಿತಿಯ ಸಂಗಪ್ಪ ಕಂಕನವಾಡ, ಲಿಂಗರಾಜ ಗಾಣಿಗೇರ, ಮಂಜುನಾಥ ಕಟ್ಟಿಮನಿ, ನಿಂಗಪ್ಪ ಇಂಗಳಗಿ, ನಿಂಗಪ್ಪ ಯಲಿಗಾರ, ಮಾಲತೇಶ ಕಂಕನವಾಡ, ನಿಂಗಪ್ಪ ಯಲವಗಿ, ಮಲ್ಲೇಶಪ್ಪ ಅತ್ತಿಗೇರಿ, ಸೋಮಣ್ಣ ಮತ್ತೂರ, ತಿರಕಪ್ಪ ಅಂದಲಗಿ, ಭರತೇಶ ಬಳಿಗಾರ, ಸುರೇಶ ಯಲಿಗಾರ ಹಾಗೂ ಗದಿಗೆಪ್ಪ ಕೊಡ್ಲಿವಾಡ, ಚನ್ನಪ್ಪ ಯಲಿಗಾರ ಸೇರಿದಂತೆ ಭಕ್ತರು, ಸಾರ್ವಜನಿಕರು ಉಪಸ್ಥಿತರಿದ್ದರು