ದರ್ಗಾ ಸಂಕೀರ್ಣದಲ್ಲಿ ನಮ್ಮ ಕ್ಲಿನಿಕ್ ಆಸ್ಪತ್ರೆಯ ಉದ್ಘಾಟನೆ ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ : ಶಾಸಕ ಹಿಟ್ನಾಳ
Inauguration of our clinic hospital in the dargah complex is a top priority for development in the
ಕೊಪ್ಪಳ 22: ಆರೋಗ್ಯವೇ ಭಾಗ್ಯ ಆರೋಗ್ಯ ಕ್ಷೇತ್ರದಲ್ಲಿ ಇನ್ನಷ್ಟು ಸುಧಾರಣೆ ತರಲು ಸಾರ್ವಜನಿಕರಿಗೆ ಅನುಕೂಲತೆ ಸಿಗಲು ಸರ್ಕಾರದ ನಮ್ಮ ಕ್ಲಿನಿಕ್ ಯೋಜನೆ ಅತ್ಯಂತ ಸಹಕಾರಿಯಾಗಿದೆ ,ಸರ್ಕಾರ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಶಾಸಕ ಕೆ ರಾಘವೇಂದ್ರ ಹಿಟ್ನಾಳ ಹೇಳಿದರು. ಅವರು ರವಿವಾರ ಬೆಳಿಗ್ಗೆ ನಗರದ ಧಾರ್ಮಿಕ ಐತಿಹಾಸಿಕ ಪ್ರಸಿದ್ಧ ಪುರಾತನ ಕಾಲದ ಹಿಂದೂ ಮುಸ್ಲಿಮರ ಭಾವೈಕ್ಯತೆಯ ಪ್ರತೀಕ ಹಜರತ್ ರಾಜಾ ಬಾಗ್ ಸವಾರ ದರ್ಗಾದ ವಾಣಿಜ್ಯ ಸಂಕೀರ್ಣ ದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಶೇಷ ಅಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಮಿಸಿದ ನಮ್ಮ ಕ್ಲಿನಿಕ್ ನಗರ ಆಯುಷ್ಮಾನ್ ಆರೋಗ್ಯ ಮಂದಿರದ ಉದ್ಘಾಟನೆ ನೆರವೇರಿಸಿ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಏರಿ್ಡಸಿದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು, ನಮ್ಮ ಕ್ಲಿನಿಕ್ ಆಸ್ಪತ್ರೆಯು ಬಡವರ ಪಾಲಿಗೆ ಸಂಜೀವಿನಿ ಯಾಗಿದೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಿಕೊಂಡ ಅವರು ಜಿಲ್ಲೆಗೆ ಕ್ಯಾನ್ಸರ್ ಕೇರ್ ಆಸ್ಪತ್ರೆ ಕೊಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಬರುವ ಬಜೆಟ್ ಮಂಡನೆಯಲ್ಲಿ ಬಹುಶ ನಮಗೆ ಈ ಆಸ್ಪತ್ರೆ ಸಿಗುವ ವಿಶ್ವಾಸ ಇದೆ ಎಂದರು,
ಮುಸ್ಲಿಂ ಸಮುದಾಯಕ್ಕೆ ನಾಲ್ಕು ವಸತಿ ನಿಲಯ ವಸತಿ ಶಾಲೆಗಳು ಈಗಾಗಲೇ ಆರಂಭಗೊಂಡು ಕಾರ್ಯ ನಿರ್ವಹಿಸುತ್ತಿದೆ ಕೊಪ್ಪಳದಲ್ಲಿ ಎಜುಕೇಶನ್ ಹಬ್ ಎಂಬಂತೆ ಒಂದೇ ಕಡೆಗೆ ಎಲ್ಲಾ ಶಿಕ್ಷಣ ಸಂಸ್ಥೆಗಳು ಪಿಯು ಕಾಲೇಜುಗಳು ಈ ಸಮುದಾಯಕ್ಕೆ ಕೊಡಲು ಈಗಾಗಲೇ ಚಿಂತನ ಮಂಥನ ನಡೆದಿದೆ ಸಮಾಜದ ಮುಖಂಡರಿಗೆ ತಿಳಿಸಲಾಗಿದ್ದು ಬರುವ ದಿನಗಳಲ್ಲಿ ಇದರ ವ್ಯವಸ್ಥೆ ಕೂಡ ಮಾಡಲಾಗುವುದು, ನಗರದಲ್ಲಿ ಈಗಾಗಲೇ ದಿನದ 24 ತಾಸು ಶುದ್ಧ ಕುಡಿಯುವ ನೀರು ಪೂರೈಕೆ ಮತ್ತು ಮನೆ ಮನೆಗೆ ಕುಡಿಯುವ ನೀರು, ಸಮರ್ಕವಾಗಿ ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ, ಸಮಾಜದ ಬಹುದಿನದ ಬೇಡಿಕೆ ಯಾಗಿರುವ ಮುಸ್ಲಿಂ ಶಾದಿ ಮಹಲ್ ಕಟ್ಟಡ ಪೂರ್ಣಗೊಳಿಸಲು ಇನ್ನು ಹೆಚ್ಚಿನ ರೀತಿ ಅನುದಾನ ದೊರಕಿಸಿಕೊಡುವ ಭರವಸೆ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು,ಸಮಾರಂಭದಲ್ಲಿ ಸಂಸದ ಕೆ ರಾಜಶೇಖರ ಮಾತನಾಡಿ ಸಮುದಾಯ ದವರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು ಆರೋಗ್ಯವನ್ನು ಕಾಪಾಡಿ ಕೊಳ್ಳುವುದರ ಜೊತೆಗೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು, ನಗರಸಭೆಯ ಮೂಲಕ ಬಿ, ಖಾತೆ ಪಡೆಯಲು ಅದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು ಈಗಾಗಲೇ ಸಂಬಂಧಿಸಿದ ನಗರಸಭೆಯ ಅಧಿಕಾರಿಗೆ ಸೂಚನೆ ನೀಡಲಾಗಿದೆ ಎಂದರು, ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಯು ಸೂಫಿಯ ಮಸೀದಿ ಪೇಶ್ ಇಮಾಮ್ ಮೌಲಾನ ಮುಫ್ತಿ ಮೊಹಮ್ಮದ್ ನಜೀರ್ ಅಹ್ಮದ್ ಖಾದ್ರಿ ತಸ್ಕಿನಿ ರವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು,
ನಗರಸಭೆಯ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್ ಹಿರಿಯ ನ್ಯಾಯವಾದಿ ಎಸ್ ಆಸಿಫ್ ಅಲಿ, ಪಿಆರ್ ಹೊಸಳ್ಳಿ ವಕೀಲರು, ಸೈಯದ್ ಫೌಂಡೇಶನ್ ಅಧ್ಯಕ್ಷ ಕೆಎಂ ಸೈಯದ್, ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಜಶೇಖರ ಅಡೂರ್ ಮತ್ತು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಲಿಂಗರಾಜ್ ಕಾರ್ಯಕ್ರಮ ಕುರಿತು ಮಾತನಾಡಿದರು ,ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ್ ಉಪಸ್ಥಿತರಿದ್ದು ಹಜರತ್ ರಾಜಾ ಬಾಗ ಸವಾರ್ ದರ್ಗಾ ಆಡಳಿತ ಮಂಡಳಿಯ ಅಧ್ಯಕ್ಷ ಮೌಲಾ ಹುಸೇನ್ ಜಮೆದಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು,ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ಮುಖಂಡ ಬಾಶು ಸಾಬ್ ಖತೀಬ್ , ಇಬ್ರಾಹಿಂ ಅಡ್ಡೆ ವಾಲೆ ಗೌಸ ಸಾಬ ಸರ್ದಾರ್, ಎಂ ಲಾಯಕ್ ಅಲಿ, ಅಂಜುಮನ್ ಕಮಿಟಿ ಅಧ್ಯಕ್ಷ ಎಂ .ಡಿ .ಆಸಿಫ್ ಕರ್ಕಿಹಳ್ಳಿ, ಯೂ ಸೂಫಿ ಯ ಮಸೀದಿ ಕಮಿಟಿ ಅಧ್ಯಕ್ಷ ಸೈಯದ್ ಎಜದಾನಿ ಪಾಷಾ ಖಾದ್ರಿ, ಪೀರಾ ಹುಸೇನ್ ಮುಜಾವರ್, ಎಂ ಮಾನ್ವಿ ಪಾಷಾ, ಮುನೀರ್ ಅಹಮದ್ ಕೋತ್ವಾಲ್ ಅಕ್ಬರ್ ಪಾಷಾ ಪಲ್ಟನ್ ಅಜಿಮುದ್ದೀನ್ ಅತ್ತಾರ್, ಮೆಹಮೂದ್ ಹುಸೇನಿ ಬಲ್ಲೆ, ಹಿರಿಯರಾದ ಎಂ.ಎ. ಮಾಜಿದ್ ಸಿದ್ದಿಕಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದು ದರ್ಗಾ ಆಡಳಿತ ಮಂಡಳಿ ಕಾರ್ಯದರ್ಶಿ ನ್ಯಾಯವಾದಿ ಅಬ್ದುಲ್ ಗನಿ ಅಪ್ಸರ ಸಾಬ್ ರವರು ಆರಂಭದಲ್ಲಿ ಸ್ವಾಗತಿಸಿದರು ,ಕಿಮ್ಸ್ ಸಮಿತಿಯ ಸದಸ್ಯರಾದ ಸಲೀಂ ಅಳವಂಡಿ ರವರು ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 