ನಮ್ಮ ಕ್ಲಿನಿಕ್ ಆಸ್ಪತ್ರೆ ಉದ್ಘಾಟನೆ : ಸದುಪಯೋಗ ಕರೆ
Inauguration of our clinic hospital : Good utilization call
ನಮ್ಮ ಕ್ಲಿನಿಕ್ ಆಸ್ಪತ್ರೆ ಉದ್ಘಾಟನೆ : ಸದುಪಯೋಗ ಕರೆ
ರಾಣಿಬೆನ್ನೂರು:29 ಅತೀ ಬಡವರು ವಾಸಿಸುವ ಓಣಿಗಳಲ್ಲಿ ಅವರ ಆರೋಗ್ಯವನ್ನು ಕಾಪಾಡುವುದು ಸರ್ಕಾರದ ಆಧ್ಯ ಕರ್ತವ್ಯವಾಗಿದ್ದು, ಈ ದಿಶೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೇಸ್ ಸರ್ಕಾರ ಮಾಡುತ್ತಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಸೋಮವಾರ ನಗರದ ತಳವಾರ ಓಣಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರಸಭೆ, ತಾಲೂಕಾ ಆರೋಗ್ಯ ಅಧಿಕಾರಿಗಳ ಕಚೇರಿ ಇವರ ಸಂಯುಕ್ತಾಶ್ರಯದಲ್ಲಿ 15 ನೇಯ ಹಣಕಾಸು ಯೋಜನೆಯಡಿಯಲ್ಲಿ ನೂತನವಾಗಿ ಆರಂಭಿಸಿರುವ ನಮ್ಮ ಕ್ಲಿನಿಕ್ ಆಸ್ಪತ್ರೆಯ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಈ ಆಸ್ಪತ್ರೆಯಳ್ಲಿ ರೋಗಿಗಳಿಗೆ ಎಲ್ಲ ಸೌಲಭ್ಯವನ್ನು ಒದಗಿಸಲಾಗಿದ್ದು ಬಡವರು ಇದರ ಸದುಪಯೋಗ ಪಡಿಸಿಕೊಂಡು ತಮ್ಮ ಆರ್ಥಿಕ ಹೊರೆಯನ್ನು ಇಳಿಸಿಕೊಳ್ಳಬೇಕು ಎಂದರು.
ನನ್ನ ಶಾಸಕ ಅಧಿಕಾರದ ಅವಧಿಯಲ್ಲಿ 10 ಕೋಟಿ ಅನುದಾನ ದೊರೆಯಲ್ಲಿದ್ದು ಆ ಅನುದಾನವನ್ನು ಶಿಕ್ಷಣ ಮತ್ತು ಜನರ ಆರೋಗ್ಯಕ್ಕೆ ಮಾತ್ರ ವ್ಯಯ ಮಾಡುತ್ತೇನೆ. ಇಗಾಗಲೆ ಶಿಕ್ಷಣ ಪ್ರಗತಿಗೆ ವ್ಯಯ ಮಾಡಿದ್ದು ಇನ್ನು ಮುಂದೆ ಜನರ ಆರೋಗ್ಯ ಸುಧಾರಣಗೆ ಖರ್ಚು ಮಾಡಲಾಗುವುದು. ತಾಲೂಕಿನ ಪ್ರತಿ ಗ್ರಾಮದಲ್ಲಿ ಒಂದರಂತೆ ಪ್ರಯೋಗಾಲಯ (ಲ್ಯಾಬ್) ತೆರೆಯಲಾಗುವುದು. ವೈದ್ಯರು ರೋಗಿಗಳಿಗೆ ಕೆಲವಂದು ಟೆಸ್ಟ್ ಮಾಡಿಸಲು ತಿಳಿಸಿದಾಗ ಹಳ್ಳಿಯ ಬಡವರು ದೂರದ ಪಟ್ಟಣಕ್ಕೆ ಹೋಗಲಾರದೆ ನಿರ್ಲಕ್ಷ ವಹಿಸುವುದು ಉಂಟು. ಹಾಗಾಗದಂತೆ ಸ್ಥಳಿಯವಾಗಿ ದೊರೆಯುವ ಲ್ಯಾಬ್‌ನಲ್ಲಿ ಟೆಸ್ಟ್ ಮಾಡಿಸಲು ಅನುಕೂಲವಾಗುವುದು ಎಂದರು.
ಈಗಾಗಲೆ ನಗರದ ಇಸ್ಲಾಂಪುರ ಓಣಿ ಮತ್ತು ಮಾರುತಿ ನಗರದಲ್ಲಿ ಇಂದು ತಳವಾರ ಓಣಿಯಲ್ಲಿ ಸೇರಿ 3 ನಮ್ಮ ಕ್ಲಿನಿಕ್ ಆಸ್ಪತ್ರೆಯಲ್ಲಿ ಬಡವರ ಆರೋಗ್ಯ ರಕ್ಷಣೆಯ ಸೇವೆ ಆರಂಭವಾಗಿದೆ. ಇಲ್ಲಿ ನುರಿತ ತಜ್ಞ ವೈದ್ಯರು ಸೇವೆ ಸಲ್ಲಿಸುತ್ತಾರೆ. ಇಲ್ಲಿ ವೈದ್ಯಕೀಯ ಸೇವೆ ಜೊತೆಗೆ ಓಷಧಿಗಳು ಉಚಿತವಾಗಿ ಲಭ್ಯವಿದ್ದು ಇದರ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಕೋಳಿವಾಡ ತಿಳಿಸಿದರು.
ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾಽ ರಾಜು ಶಿರೂರ. ನಗರಸಭೆಯ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಮಲ್ಲಣ್ಣ ಅಂಗಡಿ, ಪ್ರಭಾರಿ ತಾಲೂಕಾ ಆರೋಗ್ಯಾಧಿಕಾರಿ ಡಾಽ ವಿನಾಯಕ, ತಾಲೂಕಾ ತಾಲೂಕಾ ಆರೋಗ್ಯ ನೀರೀಕ್ಷಣಾಧಿಕಾರಿಗಳಾದ ದೇವೇಂದ್ರ್ಪ, ನಾಗರಾಜ ಕುಡಪಲಿ, ನಮ್ಮ ಕ್ಲಿನಿಕ್ ಆಸ್ಪತ್ರೆಯ ವೈದ್ಯ ಡಾಽ ದರ್ಶನ ಬಣಕಾರ ಮಾತನಾಡಿದರು.
ನಗರಸಭೆಯ ಅಧ್ಯಕ್ಷೆ ಚಂಪಕ ರಮೇಶ ಬಿಸಲಳ್ಳಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನಾಗರಾಜ ಪವಾರ, ಸ್ಥಾಯಿ ಸಮಿತಿ ಅಧ್ಯಕ್ಷ ರಾಮಪ್ಪ ಕರಡೆಡಣ್ಣನವರ, ನಗರಯೋಜನ ಪ್ರಾಧಿಕಾರದ ಅಧ್ಯಕ್ಷ ರಾಜಣ್ಣ ಮೋಟಗಿ, ನಗರಸಭೆಯ ಸದಸ್ಯರಾದ ಶಶಿಧರ ಬಸೇನಾಯ್ಕರ, ಚಂದ್ರಕಲಾ ಬಿಷ್ಟಣ್ಣನವರ, ಮಲ್ಲೇಶಪ್ಪ ಮದ್ಲೇರ, ವಾಲ್ಮಿಕಿ ಸಮಾಜದ ತಾಲೂಕಾ ಅಧ್ಯಕ್ಷ ಚಂದ್ರಣ್ಣ ಬೇಡರ, ಗಂಗಾಧರ ಬಣಕಾರ, ಬಸವರಾಜ ಹುಚ್ಚಗೊಂಡರ ಸೇರಿ ಮತ್ತಿತರರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 