ನೂತನ ಶಾಲಾ ಕೊಠಡಿ ಉದ್ಘಾಟನೆ
ಯಮಕನಮರಡಿ 4: ಸಮೀಪದ ದಾದಬಾನಹಟ್ಟಿ ಗ್ರಾಮದ ನೂತನ ಪ್ರಾಥಮೀಕ ಶಾಲೆಯ ಕೋಠಡಿಯನ್ನು ದಿ 4 ರಂದು ಸಚಿವರ ಸುಪುತ್ರರಾದ ರಾಹುಲ ಅಣ್ಣಾ ಜಾರಕಿಹೋಳಿರವರು ಉದ್ಘಾಟಿಸಿ ಚಾಲನೆ ನಿಡಿದರು. ಸದರಿ ಶಾಲೆಯನ್ನು ಲೋಕೋಪಯೋಗಿ ಇಲಾಖೆಯ ಅನಿದಾನದಲ್ಲಿ 36 ಲಕ್ಷರೂಗಳ ವೆಚ್ಚದಲ್ಲಿ ಕಟ್ಟಿದ ಶಾಲೆಯನ್ನು ಉದ್ಘಾಟಿಸಿ ಮಾತನಾಡುತ್ತಾ ನಮ್ಮ ತಂದೆಯವರಾದ ಸತೀಶ ಜಾರಕಿಹೊಳಿರವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆ ನಿಡಿ ಪ್ರತಿ ಗ್ರಾಮಗಳಲ್ಲಿ ವಿದ್ಯಾರ್ಥಿಗಳಿಗಾಗಿ ನೂತನ ಕಟ್ಟಡಗಳನ್ನು ತಮ್ಮ ಲೋಕೋಪಯೋಗಿ ಇಲಾಖೆಯ ಅನುದಾನದವನ್ನು ಹಿಂದಿನ ಯಾವ ಶಾಸಕರು ಶಾಲೆಗಳಿಗಾಗಿ ಅನುದಾನ ಕೊಟ್ಟಿಲ್ಲ ಆದರೆ ನಮ್ಮ ತಂದೆಯವರ ವಿದ್ಯಾರ್ಥಿಗಳ ಉಜ್ವಲ ಭವಿಷ್ಯರೂಪಿಸುವ ದೂರದೃಷ್ಠಿಯ ಯೋಜನೆಗಳನ್ನು ಹೊಂದಿದವರಾಗಿದ್ದಾರೆ. ಇಂತಹ ಯೋಜನೆಗಳ ಸದುಪಯೋಗ ಪಡೆದುಕೊಂಡು ಶಿಕ್ಷಕರಾದ ತಾವುಗಳು ಮಕ್ಕಳ ಭವಿಷ್ಯವನ್ನು ರೂಪಿಸಲು ಮುಂದಾಗಬೆಕೆಂದು ಹೆಳಿದರು ಈ ಸಂದರ್ಬದಲ್ಲಿ ಸಚಿವರ ಆಪ್ತ ಸಹಾಯಕರಾದ ರವೀಂದ್ರ ಜಿಂಡ್ರಾಳಿ ಜಂಗ್ಲಿಸಾಬ ನಾಯಿಕ ಹತ್ತರಗಿ ಗ್ರಾ ಪಂ ಅಧ್ಯಕ್ಷ ಬೇಪಾರಿ ಹಾಗೂ ಸಿ ಆರ್ ಸಿ ಯ ಗೋವಿಂದ ಧಿಕ್ಷಿತ್ ಗುತ್ತಿಗೆದಾರರಾದ ಜಕ್ಕಪ್ಪಗೋಳ ಮೈಬೂಬ ಮುಜಾವರ ಶೌಕತ್ ಖಾಜಿ ಹಾಗೂ ಶಿಕ್ಷಕರ ಬಳಗ ಉಪಸ್ಥಿತರಿದ್ದರು.