ನೂತನ ಪೆಟ್ರೋಲಿಯಂ ಪಂಪ್ ಉದ್ಘಾಟನೆ
Inauguration of new petroleum pump
ನೂತನ ಪೆಟ್ರೋಲಿಯಂ ಪಂಪ್ ಉದ್ಘಾಟನೆ
ಕಾಗವಾಡ 05: ಮತಕ್ಷೇತ್ರದ ಮದಭಾವಿಯ ಯುವ ಮುಖಂಡ ರಾಮು ಮುರಗೆಪ್ಪಾ ಮಗದುಮ್ಮ ಮಾಲೀಕತ್ವದಲ್ಲಿ ಜಂಬಗಿ ಗ್ರಾಮದಲ್ಲಿ ನೂತನವಾಗಿ ಪ್ರಾರಂಭಿಸಿರುವ ಭಾರತ ಪೆಟ್ರೋಲಿಯಂನ ಸಿದ್ದೇಶ್ವರ ಪೆಟ್ರೋಲಿಯಂ ಪಂಪ್‌ನ ಉದ್ಘಾಟನೆಯನ್ನು ಕವಲಗುಡ್ಡ-ಹಣಮಾಪುರ ಸಿದ್ಧಾಶ್ರಮದ ಪ.ಪೂ. ಶ್ರೀ ಅಮರೇಶ್ವರ ಮಹಾರಾಜರು, ಮೈಶಾಳದ ಶ್ರೀ ಶಿವಾಚಾರ್ಯ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಮಾಜಿ ಸಚಿವರು ಹಾಗೂ ಅಥಣಿ ಶುಗರ್ಸ್ ಕಾರ್ಖಾನೆಯ ಅಧ್ಯಕ್ಷ ಶ್ರೀಮಂತ ಪಾಟೀಲ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಶ್ರೀಮಂತ ಪಾಟೀಲ ಅವರು, ಜಂಬಗಿ ಗ್ರಾಮದಲ್ಲಿ ನೂತನವಾಗಿ ಪ್ರಾರಂಭಿಸಿರುವ ನಿಮ್ಮ ಪೆಟ್ರೋಲ್ ಪಂಪ್ ಉದ್ಯಮವು ಯಶಸ್ವಿ ಪಥದಲ್ಲಿ ಸಾಗಲಿ ಎಂದು ಶುಭ ಕೋರಿ, ಸಾರ್ವಜನಿಕರು ಈ ಪೆಟ್ರೋಲ್ ಪಂಪ್‌ನ ಲಾಭ ಪಡೆದುಕೊಳ್ಳಬೇಕೆಂದರು. ಈ ಸಮಯದಲ್ಲಿ ಸ್ಥಳೀಯ ಗಣ್ಯರು, ಮುಖಂಡರು, ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ಕಾರ್ಯಕರ್ತರು, ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 