‘ಸ್ಫೇರಿಕಲ್ ಟ್ರಿಗನೊಮೆಟ್ರಿ ಮತ್ತು ಸಂಡಯಲ್ಸ್‌’ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟನೆ

‘ಸ್ಫೇರಿಕಲ್ ಟ್ರಿಗನೊಮೆಟ್ರಿ ಮತ್ತು ಸಂಡಯಲ್ಸ್‌’ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟನೆ Inauguration of a one-day workshop on the topic of ‘Spherical Trigonometry and Sundials’

ವಿಜಯಪುರ 05:  ಭಾರತದ ಶ್ರೇಷ್ಠ ಮಹಿಳಾ ವಿಜ್ಞಾನಿಗಳ ಪಟ್ಟಿಯಲ್ಲಿ ನಮ್ಮ ವಿವಿ ವಿದ್ಯಾರ್ಥಿನಿಯರ ಹೆಸರು ಸೇರಲಿ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಹೇಳಿದರು. ನಗರದ ಕರ್ನಾಟಕ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ ಭಾಸ್ಕರಾಚಾರ್ಯ ಅಧ್ಯಯನ ಪೀಠದ ಅಡಿಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಹಿ2026 ಅಂಗವಾಗಿ ಗುರುವಾರ ಆಯೋಜಿಸಿದ್ದ ಗಣಿತಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಎನ್‌ಇಪಿ ಸ್ನಾತಕ ಅಧ್ಯಯನ ವಿಭಾಗದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ‘ಸ್ಫೇರಿಕಲ್ ಟ್ರಿಗನೊಮೆಟ್ರಿ ಮತ್ತು ಸಂಡಯಲ್ಸ್‌’ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. 

ವಿಜ್ಞಾನ ದಿನವನ್ನು ಅತ್ಯಂತ ವಿಶಿಷ್ಟ ರೀತಿಯಲ್ಲಿ ಆಚರಿಸುವ ಹಿನ್ನೆಲೆಯಲ್ಲಿ ನಮ್ಮ ವಿಶ್ವವಿದ್ಯಾನಿಲಯದಲ್ಲಿ ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ಆಹಾರ ಮೇಳ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಿ ವೈಭವದಿಂದ ಆಚರಿಸಲಾಗುತ್ತಿದೆ. ನಮ್ಮ ಭಾರತದ ಶ್ರೇಷ್ಠ ಮಹಿಳಾ ವಿಜ್ಞಾನಿಗಳಾದ ಶಕುಂತಲಾ ದೇವಿ, ಕಲ್ಪನಾ ಚಾವ್ಲಾ, ಮೇರಿ ಕ್ಯೂರಿ ಅವರಂತಹ ವಿಜ್ಞಾನಿಗಳ ಪಟ್ಟಿಯಲ್ಲಿ ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ಹೆಸರು ಕೂಡ ಸೇರಲಿ ಎಂದು ಅವರು ಹಾರೈಸಿದರು. 

ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿವಿ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಹಲವು ಸೂಚನೆಗಳನ್ನು ತಿಳಿಸಿ, ರಸಪ್ರಶ್ನೇ ಕಾರ್ಯಕ್ರಮವನ್ನು ನಡೆಸಿಕೊಟ್ಟರು.   ಇದೇ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸಹಾಯಕ ಶಿಕ್ಷಕ ವಿಜಯಕುಮಾರ್ ಕೆ, ಮಾತನಾಡಿ, ‘ಸ್ಫೇರಿಕಲ್ ಟ್ರಿಗನೊಮೆಟ್ರಿ ಮತ್ತು ಸಂಡಯಲ್ಸ್‌’ ವಿಷಯದ ಕುರಿತು ಸಮಗ್ರವಾಗಿ ವಿದ್ಯಾರ್ಥಿಗಳಿಗೆ ವಿಷಯವನ್ನು ಪ್ರಸ್ತಾಪಿಸಿದರು.  

ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ವಿದ್ಯಾರ್ಥಿನಿಯರು, ಪ್ರಾದ್ಯಾಪಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ಮತ್ತಿತರಿದ್ದರು. ಕಾರ್ಯಕ್ರಮದಲ್ಲಿ ಅಕ್ಷತಾ ಕುಲಕರ್ಣಿ ಪ್ರಾರ್ಥಿಸಿದರು. ಸ್ನಾತಕ ಅಧ್ಯಯನ ವಿಭಾಗದ ವಿಶೇಷಾಧಿಕಾರಿ ಪ್ರೊ.ಸಕ್ಪಾಲ್ ಹೂವಣ್ಣ ಅಧ್ಯಕ್ಷೀಯ ನುಡಿಗಳನ್ನಾಡಿದರು.  ಕಾವೇರಿ ತೇರದಾಳ ಸ್ವಾಗತಿಸಿದರು. ಮಧುಶ್ರೀ ನಾಟೀಕಾರ ನಿರೂಪಿಸಿದರು. ಸುಪ್ರೀಯಾ ಕೋರವಾರ ವಂದಿಸಿದರು.