ಮುತಗಾದಲ್ಲಿ ಶ್ರೀ ಸಾಯಿಮಂದಿರ ಉದ್ಘಾಟನೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ

ಮುತಗಾದಲ್ಲಿ ಶ್ರೀ ಸಾಯಿಮಂದಿರ ಉದ್ಘಾಟನೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ Inauguration of Sri Sai Mandir and installation of idol in Muthaga


ಮುತಗಾ 29: ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ಸಾಯಿ ನಗರ, ಪೋಲಿಸ್ ಕಾಲನಿಯಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಸಾಯಿ ಮಂದಿರ ಉದ್ಘಾಟನೆ, ವಾಸ್ತುಶಾಂತಿ, ಮುರ್ತಿ ಪ್ರಾಣ ಪ್ರತಿಷ್ಟಾಪನೆ ಹಾಗೂ ಕಳಸಾರೋಹಣ ಸಮಾರಂಭಾ ಡಿಸೆಂಬರ್ 2ರಿಂದ 5ರ ವರೆಗೆ ನಾಲ್ಕು ದಿನಗಳ ಕಾಲ ನಿರಂತರ ಜರಗುವುದು ಎಂದು ಶ್ರೀ ಸಾಯಿ ಟ್ರಸ್ಟನವರು ತಿಳಿಸಿದ್ದಾರೆ. 

ಮಂಗಳವಾರ ದಿ.02 ಮುಂಜಾನೆ 7.00 ಘಂಟೆಗೆ ಮಂದಿರದಲ್ಲಿ ಗೋಮಾತೆಯ ಪ್ರವೇಶ, ಸಂಜೆ 4.00 ಗಂಟೆಗೆ ನಿಲಜಿ ಬಸ್ ಸ್ಟಾಪ್ ದಿಂದ ಸಾಯಿನಗರ( ಪೋಲಿಸ್ ಕಾಲನಿ) ದಲ್ಲಿ ಇರುವ ಶ್ರೀ ಸಾಯಿ ಮಂದಿರ ವರೆಗೆ ಮುತ್ತೈದೆಯರಿಂದ ಕುಂಭ-ಕಳಸ, ವಾದ್ಯ- ವೃಂದಗಳೊಂದಿಗೆ ಮೂರ್ತಿಯ ಮೆರವಣಿಗೆ ಹಾಗೂ ಸಾಯಂಕಾಲ ಮಂದಿರದಲ್ಲಿ ಭಜನಾ ಕಾರ್ಯಕ್ರಮ ನಡೆಯವುದು. 

ಬುಧವಾರ ದಿ. 03 ಹಾಗೂ ಗುರುವಾರ 04 ವರೆಗೆ ಮೂರ್ತಿಯ ಶುದ್ಧಿಕರಣ ಇತ್ಯಾದಿ ಮಾಡಲಾಗುವುದು. ಗುರುವಾರ ಸಂಜೆ ದಿ.04 ರಂದು ಸಂಜೆ ರಾಕ್ಷೊಘ್ನ ಹೋಮ ಹವನ ಇತ್ಯಾದಿ ನಡೆಯುವುದು. ಶುಕ್ರವಾರ 05 ಬೆಳಗ್ಗೆ ಮಂದಿರದಲ್ಲಿ ವಾಸ್ತುಶಾಂತಿ, ಹೋಮ-ಹವನ, ನವಗೃಹ ಪೂಜೆ ಹಾಗೂ ಶ್ರೀ ಸಾಯಿಬಾಬರವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ನಡೆಯುವುದು. ಮದ್ಯಾಹ್ನ 1.00 ಘಂಟೆಯಿಂದ ಮಹಾಪ್ರಸಾದ.ಮುಖ್ಯ ಅತಿಥಿಗಳಾಗಿ ಲಕ್ಷ್ಮೀ. ಆರ್ ಹೆಬ್ಬಾಳಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಅಂಗವಿಕರು, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರು, ಚನ್ನರಾಜ ಹಟ್ಟಿಹೋಳಿ ಶಾಸಕರು ಆಗಮಿಸುವರು. ಮುತಗಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು, ಸಿಬ್ಬಂದ್ದಿ ವರ್ಗ ಹಾಗು ಸ್ಥಳೀಯ ಹಿರಿಯ ನಾಗರಿಕರು ನಿವಾಸಿಗಳು ಉಪಸ್ಥಿತರಿರುವರು.