ಶ್ರೀರಾಮ ಮಂದಿರ ದೇವಸ್ಥಾನ ಉದ್ಘಾಟನೆ, ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪಣೆ

Inauguration of Sri Rama Mandir Temple, installation of Lord Rama's idol

ಶ್ರೀರಾಮ ಮಂದಿರ ದೇವಸ್ಥಾನ ಉದ್ಘಾಟನೆ, ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪಣೆ

ಬೀಳಗಿ, 05 : ಶ್ರೀರಾಮ ಮಂದಿರ ದೇವಸ್ಥಾನ ಉದ್ಘಾಟನೆ ಹಾಗೂ ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪಣೆ, ಉಚಿತ ಸಾಮೂಹಿಕ ವಿವಾಹಗಳು ದಿ. 7 ರಂದು ಜರುಗಲಿವೆ ಎಂದು ಶ್ರೀರಾಮ ಮಂದಿರ ದೇವಸ್ಥಾನ ಸಮಿತಿಯ ಅಧ್ಯಕ್ಷ ಹನಮಂತ ದೊಡಮನಿ ತಿಳಿಸಿದರು. 

ಬೀಳಗಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ-218ಕ್ಕೆ ಹೊಂದಿಕೊಂಡಿರುವ ನೂತನ ಶ್ರೀ ರಾಮ ಮಂದಿರ ದೇವಸ್ಥಾನ ಆವರಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು. 

   ಫೆ.7ರಂದು ಗೋವಿನದಿನ್ನಿ ಮಾರುತೇಶ್ವರ ದೇವಸ್ಥಾನದಿಂದ ಕುಂಭಮೇಳ, ಮುತ್ತೈದೆಯರ ಆರತಿ, ವಿವಿಧ ವಾದ್ಯ  ವೈಭವಗಳೊಂದಿಗೆ ಮೆರವಣಿಗೆ ಆರಂಭಗೊಂಡು ಕನಕ  ವೃತ್ತದಿಂದ ಶ್ರೀರಾಮ ಮಂದಿರ ದೇವಸ್ಥಾನ ತಲುಪುವುದು ಎಂದರು. 

ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳು ಶ್ರೀರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸುವರು. ಆನೇಗುಂದಿಯ ಶ್ರೀಕೃಷ್ಣ ದೇವರಾಯ ಅರಸರು ನೇತೃತ್ವ, ಶ್ರೀರಾಮ ಮಂದಿರ ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷ ಚಾಮರಾಜ ದೇಸಾಯಿ ಘನ ಅಧ್ಯಕ್ಷತೆ, ಶ್ರೀರಾಮ ಮಂದಿರ ದೇವಸ್ಥಾನ ಸಮಿತಿ ಅಧ್ಯಕ್ಷ ಹನಮಂತ ದೊಡಮನಿ ಅಧ್ಯಕ್ಷತೆ ವಹಿಸುವರೆಂದು ತಿಳಿಸಿದರು. 

 ಗೋಕಾಕದ ವಿಶ್ವಾದಿರಾಜ ತೀರ್ಥ ಸ್ವಾಮಿಗಳು, ಗಿರಿಸಾಗರದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ಅಕ್ಕಲಕೋಟದ ಪಾಂಡುರಂಗ ಮಹಾರಾಜರು, ಮನ್ನಿಕೇರಿಯ ವಿಜಯ ಸಿದ್ಧೇಶ್ವರ ಸ್ವಾಮಿಗಳು, ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮಿಗಳು, ಹುಚ್ಚಪ್ಪಯ್ಯನ ಮಠದ ಸಿದ್ದಯ್ಯ ಸ್ವಾಮಿಗಳು, ನಾಗರಾಳದ ಶೇಷಪ್ಪಯ್ಯ ಸ್ವಾಮಿಗಳು, ಆಲೂರ ರಾಮಸ್ವಾಮಿ ಮಹಾರಾಜರು, ತೆಗ್ಗಿಯ ವಿದ್ಯಾನಂದ ಸ್ವಾಮಿಗಳು, ಬೀರಕಬ್ಬಿಯ ವೀರತಯ್ಯ ಹಿರೇಮಠ ಸಾನ್ನಿಧ್ಯ ವಹಿಸುವರು. 

  ಸಣ್ಣ ನೀರಾವರಿ ಮತ್ತು ತಂತ್ರಜ್ಞಾನ ಸಚಿವ ಎನ್‌. ಎಸ್‌. ಭೋಜರಾಜ ಶ್ರೀರಾಮ ಮಂದಿರ ಉದ್ಘಾಟಿಸುವರು.  ಜಿಲ್ಲಾ ಉಸ್ತುವಾರಿ ಸಚಿವ ಆರ್‌. ಬಿ. ತಿಮ್ಮಾಪೂರ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಜೆ. ಟಿ. ಪಾಟೀಲ ಮಾರುತಿ ಮಂದಿರ ಉದ್ಘಾಟಿಸುವರು. ಮಾಜಿ ಸಚಿವ ಮುರುಗೇಶ ನಿರಾಣಿ ನವಗ್ರಹ ಮಂದಿರ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಸ್‌. ಆರ್‌. ಪಾಟೀಲ, ಸಂಸದರಾದ ಪಿ. ಸಿ. ಗದ್ದಿಗೌಡರ, ನಾರಾಯಣಸಾ ಬಾಂಡಗೆ ಸೇರಿದಂತೆ ಜಿಲ್ಲೆಯ ಶಾಸಕರು ಮತ್ತು ಗಣ್ಯರು ಆಗಮಿಸುವರೆಂದು ತಿಳಿಸಿದರು. 

  ಪತ್ರಿಕಾ ಗೋಷ್ಠಿಯಲ್ಲಿ ಹನಮಂತ ಬಡಿಗೇರ, ಹನಮಂತ ಜಲ್ಲಿ, ಶ್ರೀಕಾಂತ ಸಂದಿಮನಿ, ಭೀಮಪ್ಪ ಬುಡ್ಡೊಗೋಳ, ಅರ್ಜುನ ಟಕ್ಕಳಕಿ, ಭೀಮಣ್ಣ ಹರದೋಳಿ, ಸಿದ್ದನಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಶಿವನಗೌಡ ಪಾಟೀಲ, ಶಿವಶಂಕರಗೌಡ ಪಾಟೀಲ, ದ್ಯಾಮಣ್ಣ ಬಿರಾದಾರ, ಸೋಮಲಿಂಗಪ್ಪ ಬಟಕುರ್ಕಿ, ರವಿ ದೊಡಮನಿ, ಅಕ್ಷಯ ನಾಯ್ಕರ, ಪ್ರಕಾಶ ಅರಮನಿ ಮತ್ತಿತರಿದ್ದರು.