ಮೀಡಿಯಾ ಕ್ಲಬ್ ಅಧ್ಯಕ್ಷ-ಗೌರವಾಧ್ಯಕ್ಷರ ಪದಗ್ರಹಣ
Inauguration of Media Club President-Honorary President
ಕೊಪ್ಪಳ 17: ಕೊಪ್ಪಳ ಮೀಡಿಯಾ ಕ್ಲಬ್ನಲ್ಲಿ ನೂತನ ಅಧ್ಯಕ್ಷ ಹಾಗೂ ಗೌರವಾಧ್ಯಕ್ಷರ ಪದಗ್ರಹಣ ಹಾಗೂ ನೂತನ ಸದಸ್ಯರ ಸೇರೆ್ಡ ಸಭೆ ಶುಕ್ರವಾರ ಜರುಗಿತು. ಕ್ಲಬ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ದೇವು ನಾಗನೂರು, ಗೌರವಾಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ ಕರುಗಲ್ ಅವರನ್ನು ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇನ್ನು ನಿರ್ಗಮಿತ ಅಧ್ಯಕ್ಷ ರವೀಂದ್ರ ವಿ.ಕೆ., ನಿರ್ಗಮಿತ ಗೌರವಾಧ್ಯಕ್ಷ ಪ್ರಕಾಶ ಕಂದಕೂರು ಅವರನ್ನು ಸನ್ಮಾನಿಸಲಾಯಿತು.ಸಭೆಯಲ್ಲಿ ನೂತನ ಅಧ್ಯಕ್ಷರಾದ ದೇವು ನಾಗನೂರು ಹಾಗೂ ಗೌರವಾಧ್ಯಕ್ಷ ಬಸವರಾಜ ಕರುಗಲ್ ಅವರು ಮಾತನಾಡಿ, ಕ್ಲಬ್ನಲ್ಲಿ ಈ ಹಿಂದೆ ಕೈಗೊಂಡ ಕಾರ್ಯ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗುವುದಲ್ಲದೇ ಕ್ಲಬ್ನ ಸದಸ್ಯರ ಹಿತಾಸಕ್ತಿಯನ್ನು ಕಾಪಾಡುವ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದರು.
ಕ್ಲಬ್ ನೂತನ ಸದಸ್ಯರಾಗಿ ಸೇರೆ್ಡಯಾದ ಕುಬೇರ ಮಜ್ಜಗಿ, ರಮೇಶ ಅವರನ್ನು ಸ್ವಾಗತಿಸಲಾಯಿತು. ಕ್ಲಬ್ನಲ್ಲಿ ಹಲವು ಸದಸ್ಯರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಸಭೆಯಲ್ಲಿ ಉಪಾಧ್ಯಕ್ಷ ಮುಕ್ಕಣ್ಣ ಕತ್ತಿ, ಕಾರ್ಯದರ್ಶಿ ದತ್ತು ಕಮ್ಮಾರ, ಖಜಾಂಚಿ ಅನಿಲ್ ಬಾಚನಹಳ್ಳಿಹಾಗೂ ಕ್ಲಬ್ ಸದಸ್ಯರಾದ ಸೋಮರಡ್ಡಿ ಅಳವಂಡಿ, ಬಸವರಾಜ ಶೀಲವಂತರ, ಸುಬ್ಬಾರಾವ್ ಪಟವಾರಿ, ನಾಭಿರಾಜ ದಸ್ತೇನವರ, ಮಾರುತಿ ಕಟ್ಟಿಮನಿ, ಶ್ರೀಕಾಂತ ಅಕ್ಕಿ, ಹುಸೇನ ಪಾಷಾ, ದೊಡ್ಡೇಶ ಯಲಿಗಾರ, ವಿಠ್ಠಲ ದುತ್ತರಗಿ, ಸಂತೋಷ ದೇಶಪಾಂಡೆ, ಪ್ರಮೋದ ಕುಲಕರ್ಣಿ, ಬಸವರಾಜ ಕರ್ಕಿಹಳ್ಳಿ, ರವೀಂದ್ರ ವಿ.ಕೆ, ವಿನಾಯಕ, ಸಮೀರ ಪಾಟೀಲ್, ಶರಣಬಸವ ಹುಲಿಹೈದರ್, ಮಂಜುನಾಥ ಗಂಗಾವತಿ, ಈರಯ್ಯ ಹಿರೇಮಠ ಅವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 