ಕಡಣಿ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆ
Inauguration of Kadani Gram Panchayat Building
ಆಲಮೇಲ 27: ತಾಲೂಕಿನ ಕಡಣಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಹೈಟೆಕ್ ಗ್ರಾಮ ಪಂಚಾಯತಿ ಕಟ್ಟಡ ಇಂದು ಸೋಮವಾರ ಬೃಹತ್ತ ಮತ್ತು ಮಾಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು ಕರ್ನಾಟಕ ಸರಕಾರ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ ಬಿ ಪಾಟೀಲ್ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿದರು. ನಾನು ಸ್ಪಷ್ಟವಾಗಿ ಹೇಳುತ್ತೇನೆ ಇನೋ ಮುಂದೆ ನರೇಗಾ ಯೋಜನೆ ಅಡಿಯಲ್ಲಿ ಬರತಕ್ಕಂತ ಕೆಲಸ ಜಿ ರಾಮ್ ಜಿ ಎಂಬ ಯೋಜನೆ ಕೇಂದ್ರ ಸರಕಾರ ತಂದಿರುವುದರಿಂದ ಇನ್ನು ಯಾವುದೇ ಕೆಲಸ ಸ್ಪಷ್ಟವಾಗಿ ಜನರಿಗೆ ತಲುಪುವುದಿಲ್ಲ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಇಂತಹ ಕೆಲಸಗಳನ್ನು ಮಾಡುವುದು ಇನ್ನು ಮುಂದೆ ಅಪರೂಪ ಎಂದು ಹೇಳಿದರು.ಸನ್ 2025-26 ನೇ ಸಾಲಿನ ತಾಲೂಕನ ಪಂಚಾಯಿತಿ ಆನಿರ್ಧಂಧಿತ ಹಾಗೂ ಮಹಾತ್ಮಾ ಗಾಂಧಿ ನರೇಗಾ ಯೋಜನೆ ಅಡಿ ಒಗ್ಗೋಡಿಕೆ ಅನುದಾನದಡಿ ನಿರ್ಮಿಸಲಾಗಿದೆ.
ಇನ್ನು ಮುಂದೆ ಜಿ ರಾಮ್ ಜಿ ಎಂಬ ಯೋಜನೆಯು ಬಂದಿರುವದರಿಂದ ಈ ಕೆಲಸಗಳನ್ನು ನಡೆಯುವುದು ಅತ್ಯಂತ ಕಡಿಮೆ ಎಂದು ನಾನು ಬಯಸುತ್ತೇನೆ ಇದು ಹಳ್ಳಿಯ ಗೋಸ್ಕರವಲ್ಲ ಮಹಾತ್ಮ ಗಾಂಧೀಜಿಯವರು ಒಂದು ಕನಸು ಇತ್ತು ಹಳ್ಳಿಯಿಂದ ದಿಲ್ಲಿಯವರೆಗೆ ಗ್ರಾಮಗಳನ್ನು ಸುಧಾರಣೆ ಮಾಡುವುದು ಆ ಕನಸು ಕನಸಾಗೇ ಉಳಿಯುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ನರೇಗಾ ಯೋಜನೆಗಳಿಂದ ಚರಂಡಿ, ಸಿಸಿ ರಸ್ತೆ. ಮತ್ತು ಈ ಕಟ್ಟಡಗಳನ್ನು ಆಗಿರಬಹುದು ಈ ಹಳ್ಳಿಯಲ್ಲಿ ಅತಿ ಪ್ರಮುಖತೆ ಪಡೆಯುತ್ತದೆ. ಇಂತಹ ಗ್ರಾಮಗಳಲ್ಲಿ ದೊಡ್ಡ ದೊಡ್ಡ ಕಟ್ಟಡಗಳನ್ನು ನಾವು ನೀವು ಎಲ್ಲಾ ಕಂಡಿದ್ದೇವೆ.. ನಿನ್ನ ಮುಂದೆ ನಾವೆಲ್ಲಾ ಹಳ್ಳಿಯ ಜನರು ಎಚ್ಚೆತ್ತುಕೊಳ್ಳಬೇಕು ಈ ಯೋಜನೆಯ ಪಡೆಯಲು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಸಿಂದಗಿ ಶಾಸಕ ಅಶೋಕ್ ಮನಗೂಳಿ. ಮಾತನಾಡಿ ನಾವು ಎಲ್ಲ ಎಚ್ಚೆತ್ತುಕೊಳ್ಳಬೇಕು ಸರಕಾರದ ಕೆಲಸಗಳನ್ನು ಅತ್ಯಂತ ಕಡೆ ಹಳ್ಳಿ ಅಥವಾ ಗ್ರಾಮಗಳಿಗೆ ಸರಕಾರದ ಯೋಜನೆಗಳ ತಲುಪುವ ಕೆಲಸ ಆಗಬೇಕು ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಸಲಿಂಗಪ್ಪ ಎಸ್ ಕತ್ತಿ ಉಪಾಧ್ಯಕ್ಷರಾದ ಸಾವಿತ್ರಿ ಶಡಪ್ಪ ನಾಟಿಕರ್ ಬಸವರಾಜ ತಾವರಗೇರಿ ಭೋಗ ಲಾಳಸಂಗಿ ಅಂಬಿಕಾ ಸಂತೋಷ ಕ್ಷತ್ರಿ. ಶ್ರೀಮತಿ ಮಹಾದೇವಿ ಬಿರಾದರ. ಶ್ರೀಮತಿ ಸುಮಿತ್ರಾ ಅಂಬಣ್ಣ ತಳಕೇರಿ. ಹನುಮಂತ್ರಾಯ ಕಳಸಗೊಂಡ . ಅರುಣ್ ಕುರಿಮನಿ. ಹುಚ್ಚಪ್ಪ.ಅನೇಕ ಗ್ರಾಮ ಪಂಚಾಯಿತಿ ಸದಸ್ಯರು ಈ ಕಾರ್ಯಕ್ರಮದಲ್ಲಿ ಊರಿನ ಹಿರಿಯರು ರಾಜಕೀಯ ಮುಖಂಡರು ಮಹಿಳೆಯರು ಶಾಲೆ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ವರದಿ. ಉಮೇಶ್ ಕಟಬರ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 