ನಿಪ್ಪಾಣಿಯಲ್ಲಿ ಅಂಬೇಡ್ಕರ್ ಭವನ, ಪ್ರವಾಸಿ ಮಂದಿರ, ವಾಣಿಜ್ಯ ತೆರಿಗೆ ಕಟ್ಟಡ ಉದ್ಘಾಟನೆ ಕೋವಿಡ್-19 ತಡೆಗೆ ಕೈಜೋಡಿಸಿ: ಡಿಸಿಎಂ ಕಾರಜೋಳ ಮನವಿ

ಬೆಳಗಾವಿ : ಕೋವಿಡ್-19 ಹಿನ್ನೆಲೆಯಲ್ಲಿ ಸಕರ್ಾರಕ್ಕೆ ಆದಾಯ ಬರುತ್ತಿಲ್ಲ ಆದಾಗ್ಯೂ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಜನರಿಗೆ ಆಗಿರುವ ನಷ್ಟ ತುಂಬಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ. ಮುಂಬರುವ ದಿನಗಳಲ್ಲಿ ಸಕರ್ಾರ ಅನೇಕ ಅಭಿವೃದ್ಧಿ ಕೆಲಸ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ, ಸಮಾಜ ಕಲ್ಯಾಣ ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವರಾದ ಗೋವಿಂದ ಕಾರಜೋಳ ಹೇಳಿದರು.

ಲೋಕೋಪಯೋಗಿ ಇಲಾಖೆಯಿಂದ ನಿಪ್ಪಾಣಿ ಪಟ್ಟಣದಲ್ಲಿ ನೂತನವಾಗಿ ನಿಮರ್ಿಸಿರುವ ಪ್ರವಾಸಿ ಮಂದಿರ, ವಾಣಿಜ್ಯ ತೆರಿಗೆ ಇಲಾಖೆಯ ಕಟ್ಟಡ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿಮರ್ಿಸಿರುವ ಡಾ. ಬಿ.ಆರ್.ಅಂಬೇಡ್ಕರ್ ಭವನ ಶನಿವಾರ(ಜು.11) ಉದ್ಘಾಟಿಸಿ ಅವರು ಮಾತನಾಡಿದರು. ಅನೇಕ ಅಭಿವೃದ್ಧಿ ಕಾರ್ಯಕ್ರಮ ಮಾಡುವ ಉದ್ದೇಶ ಸಕರ್ಾರ ಹೊಂದಿತ್ತು. ಆದರೆ ಕೋವಿಡ್-19 ಹಿನ್ನೆಲೆಯಲ್ಲಿ ಸಕರ್ಾರಕ್ಕೆ ಆಥರ್ಿಕ ಹೊಡೆತ ಬಿದ್ದಿದೆ. ಆದರೂ ಕೋವಿಡ್-19 ಜತೆಯಲ್ಲಿಯೇ ಅನೇಕ ಅಭಿವೃದ್ಧಿ ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಜಾರಿಗೊಳಿಸುತ್ತಿವೆ.

ರಾಜ್ಯದಲ್ಲಿ ಪ್ರವಾಹದಿಂದ 35 ಸಾವಿರ ಕೋಟಿ ಹಾನಿ ಆಗಿದೆ ನಷ್ಟವನ್ನು ತುಂಬಲು ಸಕರ್ಾರ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಕೇಂದ್ರ ಸಕರ್ಾರವು ಘೋಷಣೆ ಮಾಡಿರುವ ಆತ್ಮನಿರ್ಭರ ಭಾರತ ಯೋಜನೆಯಲ್ಲಿ ಸಣ್ಣ ಕೈಗಾರಿಕೆಗಳು, ವ್ಯಾಪಾರಿಗಳಿಗೆ ಉತ್ತೇಜನ ನೀಡುವ ಗುರಿ ಹೊಂದಲಾಗಿದೆ. ಚಾಲಕರು, ಅಗಸರು, ಕ್ಷೌರಿಕರಿಗೆ ಹಾಗೂ ಅನೇಕ ವರ್ಗದ ಕಾಮರ್ಿಕರಿಗೆ, ರೈತರಿಗೆ 5 ಸಾವಿರ ಸಹಾಯ ಹಣ ನೀಡುವ ಯೋಜನೆ ಸಕರ್ಾರ ಜಾರಿಗೆ ತಂದಿದೆ. ಪ್ರಾಥಮಿಕ, ಪ್ರೌಢಶಾಲಾ ಕಟ್ಟಡಗಳು ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

ಸಮಾಜ ಕಲ್ಯಾಣ ಇಲಾಖೆ ಬಡ ಮಕ್ಕಳಿಗಾಗಿ 824 ವಸತಿ ಶಾಲೆಗಳು ರಾಜ್ಯಾದ್ಯಂತ ನಡೆಸುತ್ತಿದ್ದು, ವಸತಿ ಶಾಲೆಗಳಿಂದ 4 ಲಕ್ಷ ಬಡ ಮಕ್ಕಳಿಗೆ ಅನುಕೂಲ ಆಗಲಿದೆ. ಕನರ್ಾಟಕ ಸಕರ್ಾರ ಶಿಕ್ಷಣದಲ್ಲಿ ಮಾಡಿದ ಕ್ರಾಂತಿ ದೇಶದಲ್ಲಿ ಬೇರೆ ಯಾವ ಸಕರ್ಾರವು ಮಾಡಿಲ್ಲ. ಸಂಕಷ್ಟದಲ್ಲಿ ಸಕರ್ಾರ ಕೆಲಸ ಮಾಡುತ್ತಿದ್ದು, ಇಂತಹ ಸಂದರ್ಭದಲ್ಲಿ ಯಾರೂ ರಾಜಕೀಯ ಮಾಡದೇ ಕೋವಿಡ್-19 ತಡೆಯಲು ಎಲ್ಲರೂ ಕೈಜೋಡಿಸಬೇಕು ಎಂದು ಉಪ ಮುಖ್ಯಮಂತ್ರಿ, ಸಮಾಜ ಕಲ್ಯಾಣ ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವರಾದ ಗೋವಿಂದ ಕಾರಜೋಳ ಅವರು ಮನವಿ ಮಾಡಿಕೊಂಡರು.

ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಮಾತನಾಡಿ, ನಿಪ್ಪಾಣಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಆಗುತ್ತಿದ್ದು, ಅಂಬೇಡ್ಕರ್ ಭವನ ನಿಮರ್ಾಣ ಆಗಿರುವದರಿಂದ ದಲಿತರ ಕಲ್ಯಾಣ ಕಾರ್ಯಕ್ರಮಗಳಿಗೆ ಅನುಕೂಲ ಆಗಲಿದೆ. ಸಾರಿಗೆ ಇಲಾಖೆಯಿಂದ ನಿಪ್ಪಾಣಿ ಕ್ಷೇತ್ರದಲ್ಲಿ ಬೇಕಾಗುವ ಸೌಲಭ್ಯ ಒದಗಿಸಲು ಸಕರ್ಾರ ಸಿದ್ದ ವಿದೆ ಎಂದರು. ಕೋವಿಡ್ -19 ಹಿನ್ನಲೆಯಲ್ಲಿ ಸಾರಿಗೆ ಇಲಾಖೆಗೆ ಕೋಟ್ಯಂತರ ರೂಪಾಯಿ  ಹಾನಿ ಆಗಿದೆ. ಬಸ್ ಗಳಲ್ಲಿ ಜನರು ಪ್ರಯಾಣಿಸಲು  ಹಿಂದೇಟು ಹಾಕುತ್ತಿದ್ದಾರೆ, ಇಲಾಖೆ ಹಾನಿಯಲ್ಲಿ ಇದ್ದರು ಸಹ ಸಾರಿಗೆ ಇಲಾಖೆಯಲ್ಲಿಯ ನೌಕರರಿಗೆ ಸಂಬಳ ಕಡಿತ ಗೊಳಿಸದೆ ನೌಕರರಿಗೆ ಸಂಬಳ ಮುಟ್ಟಿಸುವ ಕೆಲಸ ಸಕರ್ಾರ ಮಾಡುತ್ತಿದೆ ಎಂದು ಹೇಳಿದರು. ನಿಪ್ಪಾಣಿ ಹೊಸದಾಗಿ ತಾಲೂಕು ಎಂದು ಘೋಷಣೆ ಆಗಿದೆ. ಹಿನ್ನೆಲೆಯಲ್ಲಿ ತಾಲೂಕಿಗೆ ಬೇಕಾಗುವ ಎಲ್ಲಾ ಇಲಾಖೆಯ ಕಚೇರಿಗಳನ್ನು ಸ್ಥಾಪಿಸಲು ಪ್ರಾಮಾಣಿಕ ಕೆಲಸ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಹೇಳಿದರು.

ಬಳಿಕ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಅವರು, ನಿಪ್ಪಾಣಿ ಒಂದು ಕಡೆ ಮಹಾರಾಷ್ಟ್ರ ಹಾಗೂ ಗೋವಾ ಗಡಿಯನ್ನು ಹೊಂದಿದೆ ಐತಿಹಾಸಿಕ ನಗರವು ಬೆಲ್ಲ, ಮೆಣಸಿನಕಾಯಿ ಹಾಗೂ ತಂಬಾಕು ಹೆಚ್ಚಾಗಿ ಉತ್ಪಾದನೆ ಮಾಡುವ ನಗರವಾಗಿದೆ. ಇಲ್ಲಿನ ಶಾಸಕಿಯಾಗಿ ಹಾಗೂ ಸಚಿವೆಯಾಗಿ ಸಕರ್ಾರದಿಂದ ಅನುದಾನವನ್ನು ತರುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತಕ್ಕೆ ಸಂವಿಧಾನವನ್ನು ಅಪರ್ಿಸಿ ಪುರುಷ ಹಾಗೂ ಮಹಿಳೆಯರಿಗೆ ಸಮಾನವಾದ ಅವಕಾಶ ನೀಡಿದ್ದಕ್ಕಾಗಿ ನಾನು ಇಂದು ಅಂಬೇಡ್ಕರ್ ಅವರ ಕೃಪೆಯಿಂದ ಸಚಿವೆ ಆಗಿದ್ದೇನೆ. ನಮ್ಮ ದೇಶದ ಸಂವಿಧಾನ ಇಡೀ ಜಗತ್ತಿಗೆ ಮಾದರಿ ಆಗಿದೆ. ಅಂಬೇಡ್ಕರ್ ಅವರ ಆದರ್ಶಗಳನ್ನು ಇಟ್ಟುಕೊಂಡು ಎಲ್ಲಾ ಸಮುದಾಯದವರಿಗೂ ಅಗತ್ಯವಿರುವ ಸಹಾಯವನ್ನು ಪ್ರಾಮಾಣಿಕವಾಗಿ ಮಾಡುತ್ತಿದೇನೆ ಎಂದು ಹೇಳಿದರು.

2.5 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿಮರ್ಾಣ  : 2 ಕೋಟಿ ವೇಚ್ಚದಲ್ಲಿ ಪಟ್ಟಣದಲ್ಲಿ ನೂತನವಾಗಿ ಪ್ರವಾಸಿ ಮಂದರಿವನ್ನು ಸುಂದರವಾಗಿ ನಿಮರ್ಾಣ ಮಾಡಲಾಗಿದೆ ಎಂದು ಹೇಳಿದರು. ಮಿನಿ ವಿಧಾನ ಸೌಧ ನಿಮರ್ಾಣ ಮಾಡುವುದಕ್ಕೆ 5 ಎಕರೆ ಜಾಗ ಸಕರ್ಾರಕ್ಕೆ ಕೇಳಿದ್ದೇವೆ. ಅದೇ ರೀತಿ ಪಶು ಆಸ್ಪತ್ರೆಗೆ 2 ಎಕರೆ ಜಾಗ ಕೇಳಿದ್ದೇವೆ. ಮತ್ತು ಬಸ್ ನಿಲ್ದಾಣ ಮೇಲ್ದಜರ್ೆಗೆ ಪ್ರಸ್ತಾಪ ಕಳುಹಿಸಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಅವರು ತಿಳಿಸಿದರು.

ವಿಧಾನ ಪರಿಷತ್ತಿನಲ್ಲಿ