ಶರಣಬಸವೇಶ್ವರ ಪುರಾಣದಲ್ಲಿ ಹಂತಿ ರಾಶಿ: ಹೊನ್ನ ಬಿತ್ತೆವೋ ಹೊಳಿ ಸಾಲ...

ಶರಣಬಸವೇಶ್ವರ ಪುರಾಣದಲ್ಲಿ ಹಂತಿ ರಾಶಿ: ಹೊನ್ನ ಬಿತ್ತೆವೋ ಹೊಳಿ ಸಾಲ... In Sharanabasaveshwara Purana, the constellation of Hanti: If gold falls, it will be a loan...

ದೇವರಹಿಪ್ಪರಗಿ 03 : ಬೆಳ್ಳನ ಎರಡೆತ್ತು ಬೆಳ್ಳಿಯ ಬಾರಕೋಲುಬಂಗಾರದ ಕಡ್ಡಿ ಬಲಗೈಯಾಗ ಹಿಡಕೊಂಡುಹೊನ್ನ ಬಿತ್ತೆನೇ ಹೊಳಿ ಸಾಲ...’ಹೀಗೆ ಜಾನಪದ ಸೊಗಡಿನ ಹಂತಿ ಪದಗಳನ್ನು ಹಾಡುತ್ತಾ ಶರಣಬಸವೇಶ್ವರರು ಗರಿಕೆಯ ಹೊಲದಲ್ಲಿ ರಾಶಿ ಮಾಡಿದ ಪರಿಯನ್ನು ಸಾರಿದರು.ತಾಲ್ಲೂಕಿನ ಹುಣಶ್ಯಾಳ ಗ್ರಾಮದ ದೇಶಮುಖರ ಮನೆ ಆವರಣದಲ್ಲಿ ಶರಣಬಸವೇಶ್ವರರ ಪುರಾಣ ನಡೆಯುತ್ತಿದೆ. ಮಹಾದಾಸೋಹಿಯ ಕಾಯಕದ ನೆನಪಿಗಾಗಿ ಪುರಾಣದ 17ನೇ ದಿನವಾದ ಸೋಮವಾರ ರಾಶಿಯ ಕಣ ಮಾಡಿ, ನಡುಮೇಟಿ ನಿಲ್ಲಿಸಿ ಹಂತಿ ಮಾಡಿ,ಜೋಡಿ ಎತ್ತುಗಳನ್ನು ಕಟ್ಟಿ ಸಂಭ್ರಮದಿಂದ ರಾಶಿ ಮಾಡಲಾಯಿತು.

ಅಂದು ಶರಣಬಸವೇಶ್ವರರು ಕೃಷಿ ಕೆಲಸಕ್ಕೆ ಬಳಸುತ್ತಿದ್ದಂತಹ ಕುಂಟೆ, ನೇಗಿಲು, ಕುಡ, ಕೂರಿಗೆ, ನೊಗ, ಹಗ್ಗ, ಲೊಗ್ಗರಣೆ, ಬಾರಕೋಲು, ಕುಡುಗೋಲು ಸೇರಿದಂತೆ ವಿವಿಧ ಸಲಕರಣೆಗಳನ್ನು ಪುರಾಣದ ಹಂತಿಯಲ್ಲಿ ಬಳಸಲಾಯಿತು.ಗ್ರಾಮದ ದೇವತೆ ದೇವಸ್ಥಾನದ ಆವರಣದಲ್ಲಿ ಜೋಳದ ಕಣ ನಿರ್ಮಿಸಲಾಯಿತು. ಜೋಳದ ಗೂಡು ಮುರಿದು, ಜೋಳದ ತೆನೆಗಳು ಗುಡ್ಡೆಹಾಕಿದ ಮಾದರಿಯಲ್ಲಿ ಭಕ್ತರು ತಂದಿದ್ದ ಜೋಳದ ಕಾಳುಗಳನ್ನು ಸುರಿಯಲಾಯಿತು. ಅದರಲ್ಲಿ ಜೋಡೆತ್ತುಗಳಿಗೆ ಹಂತಿ ಹೂಡಿ ಕಟ್ಟಿ ಹಲವು ಸುತ್ತುಗಳು ತಿರುಗಿದವು. ಈ ವೇಳೆ ರೈತರು, ಭಕ್ತರು ಹಂತಿ ಪದಗಳನ್ನು ಮನದುಂಬಿ ಹಾಡುತ್ತಾ ಕಣ್ಮರೆಯಾದ ಗ್ರಾಮೀಣ ಸೊಗಡಿನ ಹಂತಿಯ ರಾಶಿಯನ್ನು ಮರುಸೃಷ್ಟಿಸಿದರು.

ಕಣದ ಸುತ್ತಲು ನೇರದಿದ್ದ ಭಕ್ತರು ಹಂತಿಯನ್ನು ನೋಡಿ ಸಂತಸ ಪಟ್ಟರು. ಕೆಲವರು ತಮ್ಮ ಮೊಬೈಲ್ಗಳಲ್ಲಿ ಸೆರೆಹಿಡಿದು, ಗೆಳೆಯರೊಂದಿಗೆ ದೃಶ್ಯಗಳನ್ನು ಹಂಚಿಕೊಂಡರು. ಶಾಲಾ ಮಕ್ಕಳು ಕುತೂಹಲದಿಂದ ನೋಡುತ್ತಾ, ಎತ್ತುಗಳನ್ನು ಹಿಡಿದು ಏನು ಮಾಡುತ್ತಿದ್ದಾರೆ? ಇದು ಎಂತಹ ಆಚರಣೆ ಎಂದು ಪೋಷಕರನ್ನು ಪ್ರಶ್ನಿಸಿದರು.ಹಂತಿ ಹೊಡೆಯುವ ಕಾರ್ಯಕ್ರಮದಲ್ಲಿ ಪ್ರಸಾದ ಸೇವೆಯನ್ನು ಸುಭಾಶ್ಚಂದ್ರ ಪಟ್ಟಣಶೆಟ್ಟಿ, ಶಿವಕುಮಾರ ಹಿರೇಮಠ, ಭೀಮಣ್ಣ ಶೆಂಕ್ರ​‍್ಪ ದಿಡ್ಡಿಮನಿ ಹಾಗೂ ದೇವಿಂದ್ರಯ್ಯ ಹಿರೇಮಠ ಇವರಿಂದ ಪ್ರಸಾದ ಸೇವೆ ಸಲ್ಲಿಸಿದ್ದರು.ಹಂತಿ ಕಾರ್ಯಕ್ರಮದಲ್ಲಿ ಹಾಡಗಳನ್ನು ಹಾಡುತ್ತ ತೆನೆ

ಮುರಿದ ಮುತ್ತೈದ ಮಹಿಳೆಯರಾದ ಬಸಲಿಂಗಮ್ಮ ಹಿರೇಮಠ, ಪ್ರಭಾವತಿ ಕರ್ನಾಳ, ನಾಗಮ್ಮ ಹಿರೇಮಠ, ಪ್ರಭಾವತಿ ಹಿಪ್ಪರಗಿ, ದ್ರಾಕ್ಷಾಯಿಣಿ ಹಿರೇಮಠ, ರಾಜೇಶ್ವರಿ ಹಿರೇಮಠ, ಗಂಗಮ್ಮ ದಿಡ್ಡಿಮನಿ, ರುದ್ರಮ್ಮ ಕೋಟಿಖಾನಿ, ಮಹಾನಂದ ಪಟ್ಟಣಶೆಟ್ಟಿ, ಮಲ್ಲಮ್ಮ ಕೋಟಿಖಾನಿ, ಬೋರಮ್ಮ ಕರ್ನಾಳ, ಸಾವಿತ್ರಿ ಕೋಟಿಖಾನಿ, ಕಮಲಾಕ್ಷಿ ಹಿರೇಮಠ ಸೇರಿದಂತೆ ಹಲವಾರು ಜನ ಮಹಿಳೆಯರು ಇದ್ದರು. ಪ್ರವಚನಕಾರರಾದ ವೇ.ಮೂ.ಮಹಾಂತಯ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಶಿವರಾಜ ದೇಶಮುಖ, ನಾನಾಗೌಡ ಕರ್ನಾಳ, ಶರಣಗೌಡ ಕೋಟಿಖಾನಿ, ಶರಣಪ್ಪ ಹಿಪ್ಪರಗಿ(ಪಡಶೆಟ್ಟಿ), ಅಪ್ಪಸಾಹೇಬ ದೇವರಗುಡಿ, ಶಂಕ್ರ​‍್ಪ ಬಂಗಾರಗುಂಡ, ಗೋಲ್ಲಾಳಪ್ಪ ಪಟ್ಟಣಶೆಟ್ಟಿ, ಶಾಂತಗೌಡ ಕೋಟಿಖಾನಿ, ಗುತ್ತಪ್ಪಗೌಡ ಕೋಟಿಖಾನಿ, ಹುಸೇನ ನಾಗಾವಿ, ಮಹಾಂತಯ್ಯ ಹಿರೇಮಠ, ಸಲಬಣ್ಣ ಬಡಿಗೇರ,ಈರಣ್ಣ ಬಡಿಗೇರ, ಶಶಿ ಪತ್ತಾರ ಸೇರಿದಂತೆ ಗ್ರಾಮದ ಪ್ರಮುಖರು ಗಣ್ಯರು ಹಾಗೂ ಮಹಿಳೆಯರ ಉಪಸ್ಥಿತರಿದ್ದರು.