ಕೊಪ್ಪಳದಲ್ಲಿ ಬಿಸಿಯೂಟ ತಯಾರಕರು ಕನಿಷ್ಠ ವೇತನಕ್ಕೆ ಆಗ್ರಹಿಸಿ
In Koppal, hot-clothes manufacturers demand minimum wages
ಕೊಪ್ಪಳದಲ್ಲಿ ಬಿಸಿಯೂಟ ತಯಾರಕರು ಕನಿಷ್ಠ ವೇತನಕ್ಕೆ ಆಗ್ರಹಿಸಿ
ಕೊಪ್ಪಳ 18: ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಒಕ್ಕೂಟ ಕೊಪ್ಪಳ ಘಟಕವು ರಾಜ್ಯ ಸಮಿತಿಯ ಕರೆ ನೀಡಿರುವ ರಾಜ್ಯಮಟ್ಟದ ಹೋರಾಟಕ್ಕೆ ಬೆಂಬಲಿಸಿ, ಕೊಪ್ಪಳ ತಾಲೂಕಿನ ಬಿಸಿಯೂಟ ನೌಕರರು ನಗರದ ಜಿಲ್ಲಾ ಆಡಳಿತ ಭವನದ ಮುಂಭಾಗದಲ್ಲಿ ಬೃಹತ್ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡಿದ್ದ ನೂರಾರು ಬಿಸಿಯೂಟ ನೌಕರರು ಸರ್ಕಾರದ ಮಹಿಳಾ ವಿರೋಧಿ ಧೋರಣೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು. ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಬೇರೆ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ತೀರ ಕಡಿಮೆ ಕೂಲಿಗೆ ಮಹಿಳೆಯರನ್ನು ದುಡಿಸಿ ಕೊಳ್ಳುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಧೋರಣೆಗಳನ್ನು ತೀವ್ರವಾಗಿ ವಿರೋಧಿಸಿದ ನೌಕರರು, ತಮ್ಮ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ಒತ್ತಾಯಿಸಿದರು 6ನೇ ಗ್ಯಾರೆಂಟಿ ಯೋಜನೆಯನ್ನು ಜಾರಿ ಮಾಡಬೇಕು ಅಂದರೆ ಈಗಿರುವ ವೇತನವನ್ನು 6,000 ಗೆ ಹೆಚ್ಚಿಸಬೇಕು.ಕನಿಷ್ಠ ವೇತನ ಜಾರಿಯಾಗಬೇಕು.ಪಿಂಚಣಿ ಯೋಜನೆ ಜಾರಿಯಾಗಬೇಕು, ಕರ್ತವ್ಯನಿರತ ನೌಕರರು ತೀರಿಕೊಂಡಾಗ ಅವರಿಗೆ ತಕ್ಷಣ ಪರಿಹಾರವನ್ನು ನೀಡಬೇಕು. ಗಾಯಗೊಂಡಲ್ಲಿ ಅವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ನಿವೃತ್ತಿಯಾಗುವ ನೌಕರರಿಗಾಗಿ ಸರ್ಕಾರವು ಜಾರಿ ಮಾಡಿರುವ ಇಡುಗಂಟು ರೂಪಾಯಿ 40,000 ಯನ್ನು ಎರಡು ಲಕ್ಷ ರೂಪಾಯಿಗೆ ಹೆಚ್ಚಿಸಬೇಕು. ಶಾಲೆಯ ಜಂಟಿಖಾತೆಯ ವಿಚಾರವಾಗಿ ಸರ್ಕಾರ ಹೊಸದಾಗಿ ಹೊರಡಿಸಿರುವ ಆದೇಶವನ್ನು ರದ್ದುಪಡಿಸಿ, ಮೊದಲಿನಂತೆ ಬಿಸಿಯೂಟ ಮುಖ್ಯ ಅಡಿಗೆಯವರು ಹಾಗೂ ಶಾಲಾ ಮುಖ್ಯ ಉಪಾಧ್ಯಾಯರ ಹೆಸರಲ್ಲಿ ಖಾತೆಯನ್ನು ಮುಂದುವರಿಸಬೇಕು. ಪ್ರತಿ ತಿಂಗಳು 5 ನೇ ತಾರೀಖಿನ ಒಳಗಾಗಿ ವೇತನವನ್ನು ಪಾವತಿಸಬೇಕು. ಬಿಸಿಯೂಟ ನೌಕರರ ಮೇಲೆ ಆಗುತ್ತಿರುವ ದೌರ್ಜನ್ಯ ಕುರಿತಂತೆ ಕ್ರಮವಹಿಸಬೇಕು.ಬೇಸಿಗೆ ಸೂಟಿಯಲ್ಲಿ ಮಾಡಿರುವ ಎರಡು ತಿಂಗಳ ವೇತನವನ್ನು ಪಾವತಿಸಬೇಕು. ಈ ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಸಂಘಟನೆ ಮುಖಂಡರು ಎಚ್ಚರಿಸಿದ್ದಾರೆ. ಹೋರಾಟದ ನೇತೃತ್ವವನ್ನು ಬಸವರಾಜ ಶೀಲವಂತರ,ಮಹಾಂತೇಶ ಕೊತಬಾಳ,ಗಾಳೆಪ್ಪ ಮುಂಗೋಲಿ, ಮಕಬೂಲ್ ರಾಯಚೂರ, ಸಂಜಯದಾಸ್ ಕೌಜಗೇರಿ, ಶೇಕಪ್ಪ ಬೆಟಿಗೇರಿ, ಪುಷ್ಪ ಮೇಸ್ತ್ರಿ ಸುಮಂಗಲ ಕೊತಬಾಳ, ಸುಮಾ ಲಾಚನಕೇರಿ, ಕುಸುಮ ಶಿವಪುರ, ಶರಣಮ್ಮ ಹೊಸ ಬಂಡಿಹರ್ಲಾಪುರ, ಲಲಿತಾ ಬೂದುಗುಂಪಿ , ಪದ್ಮ ಹುಲಿಗಿ, ನೇತ್ರಾವತಿ ಹಾಸಗಲ್ಲ ಮುಂತಾದವರು ವಹಿಸಿದ್ದರು.
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ 