ಜೈನ್ ಧರ್ಮದಲ್ಲಿ ಮೋಕ್ಷ ಸಿಕ್ಕರೆ ಪುಣ್ಯ ದೊರಕುತ್ತದೆ: ಶ್ರೀ. ಸಿದ್ಧಸೇನ ಮಹಾರಾಜರು
In Jainism, if one attains salvation, one attains merit: Shri. Siddhasena Maharaja
ಜೈನ್ ಧರ್ಮದಲ್ಲಿ ಮೋಕ್ಷ ಸಿಕ್ಕರೆ ಪುಣ್ಯ ದೊರಕುತ್ತದೆ: ಶ್ರೀ. ಸಿದ್ಧಸೇನ ಮಹಾರಾಜರು
ರಾಯಬಾಗ 02: ಜೈನ್ ಧರ್ಮದಲ್ಲಿ ಮೋಕ್ಷ ಸಿಕ್ಕರೆ ಪುಣ್ಯ ದೊರಕುತ್ತದೆ ಎಂದು ಪ.ಪೂ 108 ಡಾ. ಶ್ರೀ. ಸಿದ್ಧಸೇನ ಮುನಿ ಮಹಾರಾಜರು ಹೇಳಿದರು. ತಾಲೂಕಿನ ನಸಲಾಪೂರ ಗ್ರಾಮದಲ್ಲಿ ಪಾವನ ವರ್ಷಾಯೊಗದ ನಿಮಿತ್ಯ ಪ.ಪೂ ಬಾಲಾಚಾರ್ಯ 108 ಡಾ.ಸಿದ್ದಸೇನ ಮುನಿ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಭ. ಪಾರ್ಶ್ವನಾಥರ ನಿರ್ವಾಣ ಕಲ್ಯಾಣಕದ ನಿಮಿತ್ಯ ಭ. ಶಾಂತಿನಾಥ ಜಿನ ಮಂದಿರದಲ್ಲಿ " ಪಾರ್ಶ್ವನಾಥ ವಿಧಾನ ಕಾರ್ಯಕ್ರಮ" ಉದ್ದೇಶಿಸಿ ಮಾತನಾಡಿದರು. ಜೈನ ಧರ್ಮದ ಮೂಲ ತತ್ವವಾದ ಅಹಿಂಸಾ ಪರೋಮೋ ಧರ್ಮದ ಕುರಿತು ಜಗತ್ತಿಗೆ ಸಾರಿದರು. ತ್ಯಾಗ ಹಾಗೂ ಆಜನ್ಮ ಬ್ರಹ್ಮಚಾರ್ಯ ದಿಂದ ಸಮ್ಯಕ್ ಜ್ಞಾನದ ಪ್ರಾಪ್ತಿ. ಸಮ್ಮೇದ ಶಿಖರಜಿಯಲ್ಲಿ ಶ್ರಾವಣ ಶುದ್ಧ ದಶಮಿಯಂದು ಮೋಕ್ಷ ಪ್ರಾಪ್ತಿಯಾಯಿತು. ಜೈನ್ ಧರ್ಮ ಶ್ರೇಷ್ಠವಾದದ್ದು, ಮೋಕ್ಷ ಪಡೆಯುವವರೆಗೆ ಸುಖ ಸಿಗುವುದಿಲ್ಲ ಎಂದು ಹೇಳಿದರು. ಬೆಳಿಗ್ಗೆ 6 ಗಂಟೆಗೆ ಜೈನ್ ಸಮುದಾಯದ ಯುವಕರಿಂದ ಭಗವಾನರಿಗೆ ಅಭಿಷೇಕ ಕಾರ್ಯಕ್ರಮ ಜರುಗಿತು. ಬೆಳಿಗ್ಗೆ 10 ಗಂಟೆಗೆ ಭ.ಪಾರ್ಶ್ವನಾಥ ನಿರ್ವಾಣದ ಕಲ್ಯಾಣಕದ ನಿಮಿತ್ತ ಪಾರ್ಶ್ವನಾಥ ವಿಧಾನ ಕಾರ್ಯಕ್ರಮ ನಡೆಯಿತು. ನಂತರ ನಸಲಾಪುರ ಗ್ರಾಮದ ಪ್ರಮುಖ ಬೀದಿಗಳಿಂದ ಮೆರವಣಿಗೆ ಮಾಡಿ ಮಹಾವೀರ ದಿಗಂಭರ ಜೈನ್ ಮಂದಿರದಲ್ಲಿ 23 ಕೆ ಜಿ ಲಡ್ಡು ವಿತರಿಸಲಾಯಿತು. ಲಡ್ಡು ಸಮರೆ್ಣ ಸವಾಲನ್ನು ಶಾನಕ್ಕಾ ಪಾಟೀಲ, ಹೊನ್ನಮ್ಮ ಸಮಾಜೆ, ಸುಕುಮಾರ ಪರಮಾಜೆ ಪಡೆದರು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಕ ಶ್ರಾವಕಿರು ಉಪಸ್ಥಿತರಿದ್ದರು.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 