ಇಮ್ರಾನ್ ಖಾನ್ ದಂಪತಿಗೆ 17 ವರ್ಷ ಜೈಲು ಶಿಕ್ಷೆ
Imran Khan couple sentenced to 17 years in prison
ಇಸ್ಲಾಮಾಬಾದ್: ತೋಷಖಾನಾ 2 ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ನ್ಯಾಯಾಲಯವು ಶನಿವಾರ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿಗೆ ತಲಾ 17 ವರ್ಷ ಜೈಲು ಶಿಕ್ಷೆ ವಿಧಿಸಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯವು ಈ ತೀರ್ಪು ಪ್ರಕಟಿಸಿದೆ.
2021ರ
ಮೇ ತಿಂಗಳಿನಲ್ಲಿ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾಗಿದ್ದಾಗ ಸೌದಿ ಅರೇಬಿಯಾದ ಯುವರಾಜರಿಂದ ಅತ್ಯಂತ ಬೆಲೆಬಾಳುವ 'ಬಲ್ಗರಿ') ಆಭರಣಗಳ ಸೆಟ್ ಅನ್ನು ಉಡುಗೊರೆಯಾಗಿ ಪಡೆದುಕೊಂಡಿದ್ದರು. ಆದರೆ ಈ ಉಡುಗೊರೆಯನ್ನು ಸರ್ಕಾರಿ ಖಜಾನೆಗೆ (ತೋಷಖಾನಾ) ಒಪ್ಪಿಸುವ ಬದಲಿಗೆ, ಅದರ ಮೂಲ ಬೆಲೆಗಿಂತ ಅತ್ಯಂತ ಕಡಿಮೆ ಮೊತ್ತಕ್ಕೆ ಖರೀದಿಸುವ ಮೂಲಕ ದಂಪತಿಗಳು ಸರ್ಕಾರಕ್ಕೆ ವಂಚಿಸಿದ್ದಾರೆ ಎಂಬ ಆರೋಪ ಇದೀಗ ಸಾಬೀತಾಗಿದೆ.
ಇಮ್ರಾನ್ ಖಾನ್ ಮತ್ತು ಬುಶ್ರಾ ಬೀಬಿ ಅವರಿಗೆ ಪಾಕಿಸ್ತಾನ ದಂಡ ಸಂಹಿತೆಯ ಸೆಕ್ಷನ್ 409 ರ ಅಡಿಯಲ್ಲಿ 'ನಂಬಿಕೆ ದ್ರೋಹ'ಕ್ಕಾಗಿ 10 ವರ್ಷಗಳ ಕಠಿಣ ಕಾರಾಗ್ರಹ ಶಿಕ್ಷೆ ಜೊತೆಗೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ 7 ವರ್ಷ ಸೇರಿದಂತೆ ಒಟ್ಟು 17 ವರ್ಷಗಳ ಶಿಕ್ಷೆ ವಿಧಿಸಿದ್ದು ಇದರೊಂದಿಗೆ ಇಬ್ಬರಿಗೂ ತಲಾ 1.64 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.
2023ರಿಂದ ಇಮ್ರಾನ್ ಖಾನ್ ಜೈಲಿನಲ್ಲಿದ್ದು, ಅವರ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿವೆ. ಈಗಾಗಲೇ 190 ಮಿಲಿಯನ್ ಯುರೋಗಳ ಭ್ರಷ್ಟಾಚಾರ ಪ್ರಕರಣದಲ್ಲಿ 14 ವರ್ಷಗಳ ಶಿಕ್ಷೆ ಅನುಭವಿಸುತ್ತಿದ್ದು ಇದರ ಬೆನ್ನಲ್ಲೇ ಈಗ ಮತ್ತೊಂದು ಶಿಕ್ಷೆ ಅವರಿಗೆ ಎದುರಾಗಿದೆ.
ಇನ್ನೊಂದೆಡೆ, ಈ ತೀರ್ಪನ್ನು ರಾಜಕೀಯ ಪ್ರೇರಿತ ಎಂದು ಕರೆದಿರುವ ಇಮ್ರಾನ್ ಖಾನ್ ಪರ ವಕೀಲರು, ಹೈಕೋರ್ಟ್ನಲ್ಲಿ ಇದನ್ನು ಪ್ರಶ್ನಿಸುವುದಾಗಿ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ವಿಶ್ವಸಂಸ್ಥೆ ಇಮ್ರಾನ್ ಖಾನ್ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಸೂಚಿಸಿತ್ತು ಮತ್ತು ಅವರ ಪುತ್ರರು ಜೈಲಿನಲ್ಲಿ ತಂದೆಯ ಜೀವಕ್ಕೆ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು.
ಮಳೆಯಿಂದ ಕಾರಲಗಾ ಗ್ರಾಮ ಜಲಾವೃತ; ವಿದ್ಯಾರ್ಥಿಗಳ ಪರದಾಟ : ಶಾಲಾ ಕಾಲೇಜುಗಳಿಗೆ ರಜೆ
ಆಲಂದಿಯಲ್ಲಿ ಪ್ರವಾಹ: ಭಾರೀ ಮಳೆಯಿಂದ ಇಂದ್ರಾಯಣಿ ನದಿ ಉಕ್ಕಿ ಹರಿದು ಸೇತುವೆಗಳು ಮುಚ್ಚಲ್ಪಟ್ಟವು; ನದಿತೀರ ಪ್ರದೇಶಗಳು ಜಲಾವೃತ
ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ, ಜೀವ ಬೆದರಿಕೆ, ನ್ಯಾಯಕ್ಕಾಗಿ ಡಿಸಿ, ಎಸ್ಪಿಗೆ ಉಪನ್ಯಾಸಕನ ಮೊರೆ
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ 