ಧಾರ್ಮಿಕ ಕಾರ್ಯಗಳಲ್ಲಿ ಮಹತ್ವದ ಪಾತ್ರ : ಶಿವಸಿದ್ದೇಶ್ವರ ಸ್ವಾಮೀಜಿ
Important role in religious activities: Shivasiddheshwara Swamiji
ಕಂಪ್ಲಿ 07: ವಿಜಯನಗರದ ಅರಸರು ಸಾದಾ ಪೂಜಿಸುತ್ತಿದ್ದ ಎಮ್ಮಿಗನೂರಿನ ಹಂಪಿ ಸಾವಿರ ದೇವರ ಮಹಾಂತರ ಮಠವು ಸಮಾಜೋದ್ಧಾರ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದೆ ಎಂದು ತುಮಕೂರು ಸಿದ್ಧಗಂಗಾ ಮಠದ ಪರಮಪೂಜ್ಯ ಶಿವಸಿದ್ದೇಶ್ವರ ಮಹಾ ಸ್ವಾಮೀಜಿ ತಿಳಿಸಿದರು. ಅವರು ಅನ್ಯ ಕಾರ್ಯನಿಮಿತ್ತ ಬೇರೆ ಊರಿಗೆ ತೆರಳುವ ಮುನ್ನ ಎಮ್ಮಿಗನೂರು ಗ್ರಾಮದ ಹಂಪಿ ಸಾವಿರ ದೇವರು ಮಹಾಂತರ ಮಠಕ್ಕೆ ಪ್ರಥಮ ಬಾರಿಗೆ ಭೇಟಿ ನೀಡಿ ಮಠದ ಹಿರಿಯ ಲಿಂಗೈಕ್ಯ ಸಿದ್ಧಲಿಂಗ ಮಹಾಂತ ಶಿವಾಚಾರ್ಯ ಕತೃ ಗದ್ದುಗೆಗೆ ಪೂಜೆಯನ್ನು ಸಲ್ಲಿಸಿ ಆಶೀರ್ವಾದ ಪಡೆದ ನಂತರ ಸಕಲ ಸದ್ಭಕ್ತರಿಗೆ ಶುಭ ಆಶೀರ್ವಚನ ನೀಡಿದರು. ಎಮ್ಮಿಗನೂರಿನ ಮಠಕ್ಕೆ ಚಾರಿತ್ರಿಕ, ಧಾರ್ಮಿಕ, ಸಾಮಾಜಿಕ ಹಿನ್ನೆಲೆಯಿದೆ. ಇಂತ ಪವಿತ್ರ ಮಠಕ್ಕೆ ಶ್ರೀಗಳಾಗಿರುವ ವಾಮದೇವ ಮಹಾಂತ ಶಿವಾಚಾರ್ಯರು ಶ್ರೀಮಠದ ಪೀಠಾಧಿಪತಿಗಳಾಗಿರುವುದು ಇಲ್ಲಿನ ಭಕ್ತರ ಸುದೈವ. ಹೀಗಾಗಿ ಶ್ರೀಮಠ ಬಹುಬೇಗ ಜನ ಮಾನಸದಲ್ಲಿ ಉಳಿದಿದೆ ಎಂದು ಶ್ಲಾಘಿಸಿದರು. ಎಮ್ಮಿಗನೂರು ಹಂಪಿ ಸಾವಿರ ದೇವರು ಮಠದಲ್ಲಿ ಬೆಳೆದ ಮಕ್ಕಳು ರಾಜ್ಯ, ಅಂತರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ತಾನಸೇನ್ ಖ್ಯಾತಿಯ ಜ್ಞಾನೇಶ, ರಾಜು ಎಮ್ಮಿಗನೂರು ಇತರರು ಬಹಳ ದೊಡ್ಡ ಹೆಸರನ್ನು ಮಾಡಿದ್ದಾರೆ. ಅದೇ ರೀತಿ ಸಾಮಾಜಿಕ ಸೇವೆಯಲ್ಲಿಯೂ ಸಾಧನೆ ಮಾಡಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿಯೂ ಮಹತ್ವದ ಕೆಲಸ ಮಾಡಿದ ಭಕ್ತರು ಇಲ್ಲಿದ್ದಾರೆ. ಮಠದಲ್ಲಿ ಪ್ರತಿವರ್ಷವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವ. ಸಾಧು, ಸಂತರು, ಶರಣರ ಪುರಾಣಗಳನ್ನು ಏರಿ್ಡಸುವ ಮೂಲಕ ಭಕ್ತರ ಮನದಲ್ಲಿ ವಾಮದೇವ ಶ್ರೀಗಳು ತುಂಬಿ ಸಮಾಜದ ಮುಖ್ಯವಾಹಿನಿಗೆ ತಂದಿದ್ದಾರೆ ಎಂದರು. ಶ್ರೀಮಠದ ಪೀಠಾಧಿಪತಿಗಳಾದ ವಾಮದೇವ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಸಿದ್ಧಗಂಗಾ ಮಠದ ಶ್ರೀಗಳು ಇಡೀ ದೇಶದಲ್ಲಿ ಹೆಸರು ಮಾಡಿದವರು. ನಡೆದಾಡುವ ದೇವರೆಂದು ಪ್ರಖ್ಯಾತಿಯನ್ನು ಗಳಿಸಿದವರು. ಕೋಟ್ಯಾಂತರ ಭಕ್ತರ ಮನೆ ಮನಗಳಲ್ಲಿ ನೆಲೆಯಾಗಿ ನಿಂತವರು. ತಪೋನಿಷ್ಠೆಯುಳ್ಳವರು. ಶರಣರ ಮಾರ್ಗದಲ್ಲಿ ಬಹುದೊಡ್ಡ ಹೆಸರು ಮಾಡಿದ ಸಿದ್ಧಗಂಗಾ ಶಿವಕುಮಾರ ಶ್ರೀಗಳ ಬದುಕು ನಮಗೆಲ್ಲಾ ಮಾದರಿ. ಇಂದಿನ ಶಿವಸಿದ್ದೇಶ್ವರ ಸ್ವಾಮೀಜಿ ನಮ್ಮ ಮಠಕ್ಕೆ ಅನೀರೀಕ್ಷಿತವಾಗಿ ಆಗಮಿಸಿ ಹರಸಿದ್ದು ನಮ್ಮ ಗೌರವ ಹೆಚ್ಚಿಸಿತು ಎಂದರು. ಈ ಸಂದರ್ಭದಲ್ಲಿ ಸಿರುಗುಪ್ಪದ ಬಸವಭೂಷಣ ಶ್ರೀಗಳು, ಶಿವ ಬಸವ ಸ್ವಾಮೀಜಿ, ಮುಖಂಡರಾದ ಬಿ.ಸದಾಶಿವಪ್ಪ, ಬೇರ್ಗಿ ಮಹೇಶಹೌಡ, ಬಜಾರು ಬಸವನಗೌಡ, ಎಳ್ಳಾರ್ತಿ ರಾಘವೇಂದ್ರ ರೆಡ್ಡಿ, ಕೆ.ಎಂ.ಘನಮಠದಯ್ಯ ಸ್ವಾಮಿ, ಸೂಗೂರು ಎಸ್.ಎಂ.ಉಮೇಶ ಸ್ವಾಮಿ, ಸಜ್ಜನ ಬಸವರಾಜ, ಬಸವನಗೌಡ, ಜಡೇಶ್ ಘಂಟೆ, ವಿ.ಮಲ್ಲಿಕಾರ್ಜೂನ ಸೇರಿದಂತೆ ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 