ಧಾರವಾಡ 07: ಮತ ಬಿಡಿ, ಜಾತಿ ಬಿಡಿ ಮಾನವತೆಗೆ ಜೀವ ಕೊಡಿ ಎಂಬುದು ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ರವರ ಪ್ರಮುಖ ಚಿಂತನೆಯಾಗಿತ್ತು ಎಲ್ಲಿಯವರೆಗೆ ನಾವು ಮನುವಾದದಿಂದ ಹಾಗೂ ಮಾಕ್ಸರ್್ವಾದದಿಂದ ಹೊರಗೆ ಬರುವದಿಲ್ಲವೊ ಅಲ್ಲಿಯವರೆಗೆ ಡಾ. ಬಿ. ಆರ್. ಅಂಬೇಡ್ಕರ್ವಾದ ಬೆಳೆಯುವದಿಲ್ಲ ಎಂದು ಕನರ್ಾಟಕ ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷ ಡಾ. ಬಿ. ವಿ. ವಸಂತಕುಮಾರ ಹೇಳಿದರು.
ಅವರು ಕನರ್ಾಟಕ ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ ಅಧ್ಯಯನ ಕೇಂದ್ರದಿಂದ ಸಿನೆಟ್ ಹಾಲನಲ್ಲಿ ಏರ್ಪಡಿಸಿದ್ದ ವಿಶ್ವರತ್ನ ಮಹಾಮಾನವತಾವಾದಿ ಡಾ. ಬಿ. ಆರ್. ಅಂಬೇಡ್ಕರ್ರವರ 63ನೇಯ ಮಹಾಪರಿನಿವರ್ಾಣ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ದಲಿತರ ಕಲ್ಯಾಣ ಆಗದ ಹೊರತು ಸಮಗ್ರ ಭಾರತದ ಕಲ್ಯಾಣ ಸಾಧ್ಯವಿಲ್ಲ ಒಂದು ಕಡೆ ಬಹು ಸಂಖ್ಯಾತರಾದ ದಲಿತರನ್ನು ಸಾಮಾಜಿಕವಾಗಿ, ಆಥರ್ಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ನೂರಾರು ವರ್ಷದಿಂದ ಶೋಷಣೆ ಮಾಡುತ್ತಾ ಭಾರತದ ಅಭಿವೃದ್ದಿಯಾಗಬೇಕೆಂದು ನಾವು ಬಯಸಿದರೆ ಅದು ಸಾಧ್ಯವಿಲ್ಲ ದಲಿತರ ಕೈಯಲ್ಲಿ ರಾಜಕೀಯ ಅಧಿಕಾರ ನೀಡಬೇಕು ಅಂದಾಗ ಮಾತ್ರ ಭಾರತದ ಅಭಿವೃದ್ದಿ ಸಾಧ್ಯ, ಭಾರತೀಯ ಸಂವಿಧಾನ ಜಗತ್ತಿನ ಶ್ರೇಷ್ಠ ಸಂವಿಧಾನವಾಗಿದೆ. ಸಂವಿಧಾನದ ಬದಲಾವಣೆ ಜಗತ್ತಿನ ಯಾವ ಶಕ್ತಿಗಳಿಂದಲೂ ಸಾಧ್ಯವಿಲ್ಲ ಆದರೆ ಸಂವಿಧಾನವನ್ನು ಯತಾವತ್ತಾಗಿ ಜಾರಿಗೆ ತರುವುದು ಇಂದಿನ ಅವಶ್ಯಕತೆಯಾಗಿದೆ ಎಂದ ಅವರು ಭಾರತದ ಎಲ್ಲ ಜಾತಿ, ಧರ್ಮದವರ ಕಲ್ಯಾಣಕ್ಕಾಗಿ ಡಾ. ಬಿ. ಆರ್. ಅಂಬೇಡ್ಕರ್ರವರು ಸಂವಿಧಾನ ಬರೆದಿದ್ದಾರೆಯೇ ಹೊರತು ಕೆಲವರ ಕಲ್ಯಾಣಕ್ಕಾಗಿ ಅಲ್ಲ ಅದಕ್ಕಾಗಿಯೇ ಭಾರತೀಯ ಸಂವಿಧಾನ ಶ್ರೇಷ್ಠ ಸಂವಿಧಾನವಾಗಿದೆ ಎಂದರು. ವಿಶ್ವವಿದ್ಯಾಲಯದಿಂದ ಉನ್ನತ ಶಿಕ್ಷಣ ಪಡೆದು ಪದವೀಧರರಾಗಿ ಹೊರ ಹೋಗುವ ವಿದ್ಯಾಥರ್ಿಗಳು ಮಹಾತ್ಮಾ ಗಾಂಧೀಜಿ, ಡಾ. ಬಿ. ಆರ್. ಅಂಬೇಡ್ಕರ್ರವರ ತತ್ವಗಳನ್ನು ತಮ್ಮ ಎದೆಯಲ್ಲಿ ತುಂಬಿಕೊಂಡು ಹೊರ ಹೋಗಬೇಕೆ ಹೊರತು ಜಾತಿಯತೆ, ಅಸಮಾನತೆ, ತಾರತಮ್ಯಗಳನ್ನು ತೆಗೆದುಕೊಂಡು ಹೋಗುವದಲ್ಲ, 1932ರ ಪೂನಾ ಒಪ್ಪಂದದ ಮೂಲಕ ಮಹಾತ್ಮಾ ಗಾಂಧೀಜಿಯ ಪ್ರಾಣ ಉಳಿಸಿದವರು ಬಾಬಾಸಾಹೇಬ ಅಂಬೇಡ್ಕರ್ರವರಾಗಿದ್ದಾರೆ ಎಂದರು.
ಡಾ. ಬಿ. ಆರ್. ಅಂಬೇಡ್ಕರ್ರವರ ಅನೇಕ ಚಿಂತನೆಗಳಿಂದ ಮಹಾತ್ಮಾ ಗಾಂಧೀಜಿಯವರು ಪ್ರಭಾವಿತಗೊಂಡು ಅನೇಕ ಹರಿಜನೋದ್ಧಾರ ಕಾರ್ಯಕ್ರಮಗಳನ್ನು ಮಾಡಿದರು ಡಾ. ಬಿ. ಆರ್. ಅಂಬೇಡ್ಕರ್ರವರು ಸಹ ಮಹಾತ್ಮಾ ಗಾಂಧೀಜಿಯವರ ಅಹಿಂಸಾತ್ಮಕ ಚಿಂತನೆಯಿಂದ ಪ್ರಭಾವಿತರಾಗಿ ಅನೇಕ ಅಹಿಂಸಾತ್ಮಕ ಹೋರಾಟಗಳನ್ನು ಈ ದೇಶದಲ್ಲಿ ಕಟ್ಟಿದರು. ಈ ದೇಶದ ರಾಜಕಾರಣದಲ್ಲಿ ಜಾತಿ ವಿಷದಂತೆ ಬೆರೆತುಕೊಂಡಿದೆ ರಾಷ್ಟ್ರರಾಜಕಾರಣಿ ಡಾ. ಮಲ್ಲಿಕಾಜರ್ುನ ಖಗರ್ೇಜಿಯವರು ಮುಖ್ಯಮಂತ್ರಿಯಾಗಬೇಕಾದ ಸಂದರ್ಭದಲ್ಲಿ ಅವರನ್ನು ದಲಿತ ಮುಖ್ಯಮಂತ್ರಿ ಎಂದು ಕರೆಯುತ್ತಾರೆ ಇದೊಂದು ದೇಶದ ದೊಡ್ಡ ದುರಂತ ಎಂದರು ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾದಾಗ ಕುರುಬ ಮುಖ್ಯಮಂತ್ರಿ ಎನ್ನಲಿಲ್ಲ. ಬಂಗಾರಪ್ಪ ಮುಖ್ಯಮಂತ್ರಿಯಾದಾಗ ಈಡಿಗ ಮುಖ್ಯಮಂತ್ರಿ ಎನ್ನಲಿಲ್ಲ ಯಡಿಯೂರಪ್ಪನವರು ಈಗ ಮುಖ್ಯ ಮಂತ್ರಿಯಾಗಿದ್ದಾರೆ ಅವರಿಗೆ ಲಿಂಗಾಯತ ಮುಖ್ಯಮಂತ್ರಿ ಎನ್ನುತ್ತಿಲ್ಲ ಆದರೆ ಡಾ. ಮಲ್ಲಿಕಾಜರ್ುನ ಖಗರ್ೆಯವರು ಮುಖ್ಯಮಂತ್ರಿಯಾಗುವ ವಿಷಯ ಬಂದಾಗ ಮಾತ್ರ ದಲಿತ ಮುಖ್ಯಮಂತ್ರಿ ಎಂದು ಕರೆದು ಅವರ ಘನತೆ ಗೌರವಕ್ಕೆ ಮತ್ತು ಬಾಬಾಸಾಹೇಬ ಅಂಬೇಡ್ಕರ್ರವರ ವಿಚಾರಧಾರೆಗಳಿಗೆ ನಾವು ಅವಮಾನ ಮಾಡುತ್ತಿದ್ದೇವೆ ಕಾರಣ ರಾಜ್ಯದ ಜನತೆ ಎಚ್ಚರಗೊಳ್ಳಬೇಕು ಬಸವಣ್ಣನವರ ಸಮಾನತೆಯ ತತ್ವವನ್ನು ಎತ್ತಿ ಹಿಡಿಯಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕನರ್ಾಟಕ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ. ಎ. ಎಸ್. ಶಿರಾಳಶೆಟ್ಟಿಯವರು ಡಾ. ಬಿ. ಆರ್. ಅಂಬೇಡ್ಕರ ಅಧ್ಯಯನ ಕೇಂದ್ರವು ಡಾ. ಅಂಬೇಡ್ಕರ, ಗೌತಮ ಬುದ್ಧ, ಜಗಜ್ಯೋತಿ ಬಸವಣ್ಣನವರ ಕುರಿತಾದ ಹಲವಾರು ಕಾರ್ಯಕ್ರಮಗಳನ್ನು ಪ್ರತಿ ವರ್ಷ ಏರ್ಪಡಿಸುತ್ತಿದೆ ಡಾ. ಬಿ. ಆರ್. ಅಂಬೇಡ್ಕರ್ರವರ ಚಿಂತನೆಗಳನ್ನು ಇಂದು ನಾವೆಲ್ಲರೂ ಮೈಗೊಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.
ಗಣ್ಯರನ್ನು ಸ್ವಾಗತಿಸಿ ಮಾತನಾಡಿದ ಕನರ್ಾಟಕ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಪ್ರೊ. ಶಿವರುದ್ರ ಕಲ್ಲೋಳಿಕರರವರು ವಿಶ್ವಕಂಡ ಶ್ರೇಷ್ಠ ಜ್ಞಾನಿ ಡಾ. ಬಿ. ಆರ್. ಅಂಬೇಡ್ಕರ್ರವರಾಗಿದ್ದಾರೆ. ಡಾ. ಬಿ. ಆರ್. ಅಂಬೇಡ್ಕರ್ರವರ ಹೋರಾಟಗಳು ಚಿಂತನೆಗಳು ಬಹುತೇಕವಾಗಿ ಎಲ್ಲ ಜಾತಿಯ ಹೆಣ್ಣು ಮಕ್ಕಳ ಪರ, ಎಲ್ಲ ಜಾತಿಯ ಕಾಮರ್ಿಕರ ಪರ, ಎಲ್ಲ ಜಾತಿಯ ಬಡವರ ಪರವಾಗಿತ್ತೇ ಹೊರತು ಕೇವಲ ದಲಿತರ ಪರವಾಗಿರಲಿಲ್ಲ ಈ ದೇಶದ ದುರಂತವೆಂದರೆ ಡಾ. ಬಿ. ಆರ್. ಅಂಬೇಡ್ಕರ್ರವರನ್ನು ದಲಿತ ನಾಯಕ ಎಂದು ಕರೆದು ಅಂಬೇಡ್ಕರ್ರವರ ಚಿಂತನೆಗಳಿಗೆ ಅವಮಾನಿಸುತ್ತಿದ್ದಾರೆ ಅದು ನಿಲ್ಲಬೇಕಾಗಿದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಡಾ. ಬಿ. ಆರ್. ಅಂಬೇಡ್ಕರ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಸುಭಾಸಚಂದ್ರ ಸಿ. ನಾಟೀಕಾರ ಅವರು ಬಾಬಾಸಾಹೇಬ ಡಾ. ಬಿ. ಆರ್. ಅಂಬೇಡ್ಕರ್ರವರು ಈ ದೇಶದಲ್ಲಿ ಹುಟ್ಟದಿದ್ದರೆ, ಸಂವಿಧಾನವನ್ನು ಬರೆಯದಿದ್ದರೆ ಈ ದೇಶದ ಬಹುಪಾಲು ಸಮುದಾಯದ ಜನರು ನಾಯಿ-ನರಿಗಳಂತೆ ಕೆಳಮಟ್ಟದ ಜೀವನವನ್ನು ಮಾಡಬೇಕಾಗಿತ್ತು. ನನ್ನಂತಹ ಸಾವಿರಾರು ಪ್ರಾಧ್ಯಾಪಕರು, ಡಾಕ್ಟರ್ಸ್ಗಳು, ಎಂಜನೀಯರ್ರು, ಆಯ್.ಎ.ಎಸ್ ಅಧಿಕಾರಿಗಳು ಇಂದು ಸೂಟು-ಬೂಟು ಹಾಕಿಕೊಂಡು ಮೇಲ್ಜಾತಿಯವರ ಸರಿ ಸಮನಾಗಿ ಬದುಕುತ್ತಿದ್ದಾರೆ ಎಂದರು.
ಡಾ. ಶ್ಯಾಮಲಾ ರತ್ನಾಕರ್ರವರು ವಂದಿಸಿದರು. ಡಾ. ಅನೀಲ ಮೇತ್ರಿ ಮತ್ತು ತಂಡದವರು ನಾಡಗೀತೆ ಹಾಡಿದರು. ವೇದಿಕೆಯ ಮೇಲೆ ಮೌಲ್ಯಮಾಪನ ಕುಲಸಚಿವ ಡಾ. ಎಂ. ಎನ್. ಸಾಲಿ, ಹಣಕಾಸು ಅಧಿಕಾರಿ ಡಾ. ಆರ್. ಎಲ್. ಹೈದ್ರಾಬಾದ್ದವರಿದ್ದರೆ, ಡಾ. ಶೀಲಾಧರ ಮುಗಳಿ, ಡಾ. ಎನ್. ವಾಯ್. ಮಟ್ಟಿಹಾಳ, ಡಾ. ಸಿ. ಕೃಷ್ಣಮೂತರ್ಿ, ಡಾ. ಟಿ. ಎಮ್. ಭಾಸ್ಕರ ಮುಂತಾದ ಪ್ರಾಧ್ಯಾಪಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಡಾ. ಎಂ. ಎನ್. ಚಲವಾದಿಯವರು ನಿರೂಪಿಸಿದರು.