ಶಾಸಕ ಸವದಿ ನೇತೃತ್ವದಲ್ಲಿ ಜನಪರ ಕಾರ್ಯಗಳ ಅನುಷ್ಠಾನ

ಶಾಸಕ ಸವದಿ ನೇತೃತ್ವದಲ್ಲಿ ಜನಪರ ಕಾರ್ಯಗಳ ಅನುಷ್ಠಾನ Implementation of pro-people works under the leadership of MLA Savadi

ಶಾಸಕ ಸವದಿ ನೇತೃತ್ವದಲ್ಲಿ ಜನಪರ ಕಾರ್ಯಗಳ ಅನುಷ್ಠಾನ 

ಅಥಣಿ, 05 ; ಅಥಣಿ ಪಟ್ಟಣ ಸೇರಿದಂತೆ ಇಡೀ ಮತಕ್ಷೇತ್ರದಲ್ಲಿ ಶಾಸಕರಾದ ಲಕ್ಷ್ಮಣ ಸವದಿಯವರ ನೇತೃತ್ವದಲ್ಲಿ ಶೈಕ್ಷಣಿಕ ಕ್ರಾಂತಿಯ ಜೊತೆಗೆ ಜನಪರ, ಅಭಿವೃದ್ಧಿ ಪರ ನೂರಾರು ಯೋಜನೆಗಳು ಅನುಷ್ಠಾನ ಗೊಳ್ಳುತ್ತಿವೆ ಎಂದು ಕಾಂಗ್ರೆಸ್ ಪಕ್ಷದ ಯುವ ಧುರೀಣ ಚಿದಾನಂದ ಸವದಿ ಹೇಳಿದರು. ಅವರು ವಿವಿಧ ಸರಕಾರಿ ಶಾಲೆಗಳಲ್ಲಿ ಶೌಚಾಲಯ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದರು.    

     ಅಥಣಿ ತಾಲೂಕಿನ ಪೂರ್ವ ಭಾಗದ ಗ್ರಾಮಗಳಿಗೆ ನೀರಾವರಿ ಕಲ್ಪಿಸುವ ಕರಿ ಮಸೂತಿ ಏತ ನೀರಾವರಿ ಯೋಜನೆ ಅನೇಕ ವರ್ಷಗಳ ಹಿಂದೆಯೇ ಅನುಷ್ಠಾನಗೊಂಡಿದೆ. ಈ ಯೋಜನೆಯಿಂದ ಹೊರಗೆ ಉಳಿದ ಕಕಮರಿ, ಕೊಟ್ಟಲಗಿ, ಹಾಲಳ್ಳಿ, ತೆಲಸಂಗ, ಬನ್ನೂರ ಸೇರಿದಂತೆ ಎತ್ತರ ಪ್ರದೇಶದಲ್ಲಿರುವ ಏಳು ಗ್ರಾಮಗಳಿಗೆ ನೀರಾವರಿ ಕಲ್ಪಿಸುವ ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಕಾರ್ಯ ಪ್ರಗತಿಯಲ್ಲಿದ್ದು, ಬರುವ ಜನೇವರಿಗೆ ಮೊದಲ ಹಂತ ಪೂರ್ಣಗೊಳ್ಳಲಿದೆ ಎಂದರು.         ಅಥಣಿ ಪಟ್ಟಣದಲ್ಲಿರುವ ಜೋಡು ಕೆರೆಗಳ ಅಭಿವೃದ್ಧಿಗಾಗಿ 15 ಕೋಟಿ  ಹಾಗೂ ಭಾಗೀರಥಿ ನಾಲಾ ಅಭಿವೃದ್ಧಿಗಾಗಿ 10 ಕೋಟಿ ಅನುದಾನದಲ್ಲಿ ಯೋಜನೆ ಸಿದ್ಧಗೊಂಡಿದ್ದು, ಟೆಂಡರ್ ಪ್ರಕ್ರಿಯೆ ಕೆಲವೇ ದಿನಗಳಲ್ಲಿಯೇ ಪೂರ್ಣಗೊಳ್ಳುವುದು ಎಂದ ಅವರು ಅಥಣಿ ಪಟ್ಟಣದಲ್ಲಿ ಹಸೀರು ಕರಣಗೊಳಿಸುವ ಸಂಬಂಧ ಪುರಸಭೆ ಆಡಳಿತ ಮಂಡಳಿ ನೇತೃತ್ವದಲ್ಲಿ ಸಾವಿರಾರು ಸಸಿಗಳನ್ನು ನೆಡುವ ಯೋಜನೆ ಪ್ರಗತಿಯಲ್ಲಿದೆ ಎಂದರು.       

     ಈ ಸಂದರ್ಭದಲ್ಲಿ ಜಿ.ಪಂ ಅಧಿಕಾರಿ ವೀರಣ್ಣಾ ವಾಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಮ್‌.ಆರ್‌.ಮುಂಜೆ, ಪುರಸಭಾ ಸದಸ್ಯರಾದ ರಿಯಾಜ ಸನದಿ, ಮಲ್ಲೇಶ ಹುದ್ದಾರ, ರಾಜಶೇಖರ ಗುಡೋಡಗಿ, ಬೀರ​‍್ಪ ಯಕ್ಕಂಚಿ, ಆಸೀಫ ತಾಂಬೋಳಿ, ಬಸವರಾಜ ಹಳ್ಳದಮಳ, ಮಲ್ಲಿಕಾರ್ಜುನ ಬುಟಾಳಿ, ರಮೇಶ ಪವಾರ, ಸೈಯ್ಯದಮೀನ್ ಗದ್ಯಾಳ, ವೀಲೀನ್ ರಾಜ ಯಳಮೇಲಿ, ಸಂತೋಷ ಸಾವಡಕರ, ಕಲ್ಲೇಶ ಮಡ್ಡಿ, ಎಸ್‌.ಡಿ.ಎಮ್‌.ಸಿ  ಅಧ್ಯಕ್ಷ ರಾಕೇಶ ಮೈಗೂರ, ಧುರೀಣರಾದ ಮಹಾಂತೇಶ ಬಾಡಗಿ, ರಾಜು ಢಾಲೆ, ರಾಘವೇಂದ್ರ ಗಾಡಿವಡ್ಡರ, ರಾಘವೇಂದ್ರ ಹಾದಿಮನಿ, ಶ್ರೀಮತಿ, ನಿರ್ಮಲಾ ಗುರವ, ರಾಹುಲ ಬಳ್ಳೊಳ್ಳಿ, ವಿರೇಶ ಶೇಡಬಾಳ, ಶಾಲಾ ಮುಖ್ಯಾಧ್ಯಾಪಕ ಎಸ್‌.ಎ.ಚೌಗಲೆ, ಶಿಕ್ಷಕ ಎಸ್‌.ಎಸ್‌.ಮುಗಳಖೋಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.      

      ಯುವ ಧುರೀಣ ಚಿದಾನಂದ ಸವದಿ, ಪುರಸಭಾ ಸದಸ್ಯರು  ಅಥಣಿ ಪಟ್ಟಣದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ,  ಪಟ್ಟಣದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ,  ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಕೃಷ್ಣಾ ಬಡಾವಣೆಯ   ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ,  ಪಟ್ಟಣದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ-1 ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮೋಟಗಿ ತೋಟದ ಶಾಲೆಗಳಲ್ಲಿ ಶೌಚಾಲಯ ಮತ್ತು ಸಿದ್ಧೇಶ್ವರ ದೇವಸ್ಥಾನದ ಹತ್ತಿರ  ಹಾಲಿನ ಗರಡಿ ಮನೆ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.