'ನೆರೆ ರಾಷ್ಟ್ರಗಳ ಜೊತೆ ಬಾಂಧವ್ಯ ಸುಧಾರಣೆ'


ಇಸ್ಲಾಮಾಬಾದ್ 20: ಪಾಕಿಸ್ತಾನವು ತನ್ನ ನೆರೆಹೊರೆಯ ಎಲ್ಲ ದೇಶಗಳೊಂದಿಗೆ ಉತ್ತಮ ಸಂಬಂಧಗಳನ್ನು ಹೊಂದಲು ಕಾರ್ಯನಿರ್ವಹಿಸಲಿದೆ ಎಂದು ಸಾರಿರುವ ನೂತನ ಪ್ರಧಾನಿ ಇಮ್ರಾನ್ ಖಾನ್, ಅಕ್ಕಪಕ್ಕದ ರಾಷ್ಟ್ರಗಳ ಜೊತೆ ಬಾಂಧವ್ಯ ಸುಧಾರಣೆಯಿಂದ ಪಾಕಿಸ್ತಾನದಲ್ಲಿ ಶಾಂತಿ ನೆಲೆಸುತ್ತದೆ ಎಂದು ಹೇಳಿದ್ದಾರೆ. 

ದೇಶದ ಜನತೆಯನ್ನು ಉದ್ದೇಶಿಸಿ ಚೊಚ್ಚಲ ಭಾಷಣ ಮಾಡಿದ ಅವರು, ನೆರೆಹೊರೆ ದೇಶಗಳೊಂದಿಗೆ ಸಂಬಂಧ ಸುಧಾರಣೆಯ ಮಾತುಕತೆ ನಡೆಸದ ಹೊರತು ಪಾಕಿಸ್ತಾನದಲ್ಲಿ ಶಾಂತಿ ಸ್ಥಾಪನೆ ಅಸಾಧ್ಯ ಎಂಬುದನ್ನೂ ಪ್ರತಿಪಾದಿಸಿದ್ದಾರೆ.

ಪಾಕಿಸ್ತಾನದ 22ನೇ ಪ್ರಧಾನಮಂತ್ರಿಯಾಗಿ ಮೊನ್ನೆಯಷ್ಟೇ ಪ್ರಮಾಣ ವಚನ ಸ್ವೀಕರಿಸಿದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್(ಪಿಟಿಐ) ಅಧ್ಯಕ್ಷ ಇಮ್ರಾನ್, ಒಂದು ಗಂಟೆಗೂ ಹೆಚ್ಚು ಕಾಲ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು. ಆಥರ್ಿಕ ಕ್ಷೇತ್ರದಲ್ಲಿ ಪಾಕಿಸ್ತಾನ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಪ್ರಸ್ತಾಪಿಸಿದ ಅವರು, ದೇಶದ ಅರ್ಥ ವ್ಯವಸ್ಥೆಯನ್ನು ಪುನ:ಶ್ಚೇತನಗೊಳಿಸಲು ಪರಿಣಾಮಕಾರಿ ಸುಧಾರಣೆಗಳನ್ನು ಜಾರಿಗೊಳಿಸುವುದಾಗಿ ಪ್ರಕಟಿಸಿದರು.

ಪಾಕಿಸ್ತಾನಕ್ಕೆ ಈಗ 28 ಲಕ್ಷ ಕೋಟಿ ಡಾಲರ್ಗಳಷ್ಟು ಸಾಲದ ಹೊರೆಗೆ ಹಿಂದಿನ ಪಿಎಂಎಲ್-ಎನ್ ಸಕರ್ಾರವೇ ಕಾರಣ ಎಂದು ಅವರು ಆರೋಪಿಸಿದರು. 

ಪಾಕಿಸ್ತಾನದ ನೂತನ ವಿದೇಶಾಂಗ ನೀತಿ ಕುರಿತು ಮಾತನಾಡಿದ ಇಮ್ರಾನ್, ಎಲ್ಲ ನೆರೆಹೊರೆ ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದಲು ಕಾಯರ್ೊನ್ಮುಖವಾಗುವುದಾಗಿ ತಿಳಿಸಿದರು.