ಜಮಖಂಡಿ ರಾಜಾ ಗಣೇಶನ ಮೂರ್ತಿ ವಿಸರ್ಜನೆ
Immersion of the idol of Jamkhandi Raja Ganesha
ಜಮಖಂಡಿ ರಾಜಾ ಗಣೇಶನ ಮೂರ್ತಿ ವಿಸರ್ಜನೆ
ಜಮಖಂಡಿ 05: ನಗರದ ಮಹಾಗಣಪತಿ ಉತ್ಸವ ಸಮಿತಿ ಸಹಯೋಗದಲ್ಲಿ 9ನೇ ದಿನದ ಜಮಖಂಡಿ ರಾಜಾ ಗಣೇಶನ ಮೂರ್ತಿ ವಿಸರ್ಜನೆಯಲ್ಲಿ ಚಾಂಡಿ ವಾದ್ಯದ ಮೂಲಕ ಭವ್ಯ ಮೆರವಣೆಯೊಂದಿಗೆ ವಿಸರ್ಜನೆಯನ್ನು ಮಾಡಲಾಯಿತು.
ಇಲ್ಲಿನ ಐತಿಸಿಕ ಪೋಲೋ ಮೈದನದ ಬಳಿ ಜಮಖಂಡಿ ರಾಜಾ ಗಣೇಶನ ಮೂರ್ತಿ ಪ್ರತಿಷ್ಠಾನ ಮಾಡಲಾಗಿತು. 9ನೇ ದಿನದ ವಿಸರ್ಜನೆಯಲ್ಲಿ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ನೇತೃತ್ವದಲ್ಲಿ ಚಾಂಡಿ ವಾದ್ಯದ ಯುವತಿಯೊಬ್ಬರು ವಾಲಿನ್ ವಾದ್ಯವನ್ನು ನುಡಿಸುವ ಮೂಲಕ ಅವರ ತಂಡದವರು ಹೆಜ್ಜೆಯನ್ನು ಹಾಕುತ್ತಾ ವಾದ್ಯಗಳನ್ನು ಬಾರಿಸುವ ಜೊತೆಗೆ ನೇರದಿದ್ದ ಸಾವಿರಾರ ಜನರ ಗಮನವನ್ನು ಸೆಳೆದರು. ಚಾಂಡಿ ವಾದ್ಯದೊಂದಿಗೆ ಭವ್ಯವಾದ ಮೆರೆವಣಿಗೆ ಪ್ರಾರಂಭಗೊಂಡಿತು.
ಎಜಿ,ದೇಸಾಯಿ ಸರ್ಕಲನಲ್ಲಿ ಲಕ್ಷ್ಮೀ ಇನ್ನವೇಂಟ್ ಹುನ್ನೂರ ಅವರ ಸ್ಟ್ಯಾಂಡಿಗ್ ಡಿಜೆ ಸೌಂಡಗಳನ್ನು ಅಳವಡಿಸಲಾಗಿತು. ಡಿಜೆ ಹಾಡುಗಳಲ್ಲಿ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ಕುಣಿದು ಕುಪ್ಪಳಿಸಿದರು. ಅವರ ಜೊತೆಯಲ್ಲಿ ಬೇರೆ ಜಿಲ್ಲೆಗಳಿಂದ ಆಗಮಿಸಿದ ಚಾಂಡಿ ವಾದ್ಯ ಮೇಳದವರು ಡಿಜೆ ಹಾಡುಗಳಿಗೆ ಕುಣಿದು ಕುಪ್ಪಳಿಸಿದ್ದರು. ನಂತರ ಲಕ್ಷಾಂತ ರೂ,ಗಳ ವಿವಿಧ ಬಗ್ಗೆಯ ಪಟ್ಟಾಕಿ ಮದ್ದುಗಳನ್ನು ಮಾಜಿ ಶಾಸಕ ಆನಂದ ನ್ಯಾಮಗೌಡ ಅವರ ಅಭಿಮಾನಿ ಬಳಗದವರು ಸಿಡಿಸಿ ಸಂಭ್ರಮಿಸಿದರು. ವಿವಿಧ ಬಗ್ಗೆಯ ಪಟ್ಟಾಕಿಯ ಸಿಡಿಮದ್ದುಗಳನ್ನು ಸಿಡಿಸಲು ಬೇರೆ ತಂಡ ಆಗಮಿಸಿತು. ಮಾಹಾ ಗಣಪತಿ ಜಮಖಂಡಿ ರಾಜಾ ಗಣೇಶನ ಮೂರ್ತಿಯ ವಿಸರ್ಜನೆಯಲ್ಲಿ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರ ಸಹೋದರ ಬಸವರಾಜ ನ್ಯಾಮಗೌಡ ಸೇರಿದಂತೆ ಗಣೇಶನ ನೋಡಲು ಸಾವಿರಾರು ಜನರು ಆಗಮಿಸಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 