ಜೀವನದಲ್ಲಿ ಆದರ್ಶ ಗುಣಗಳನ್ನು ಮತ್ತು ಜಾತ್ಯಾತೀತ ಮನೋಭಾವ ಬೆಳಸಿಕೊಂಡರೆ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಬಹುದು - ಪ್ರಾಚಾರ್ಯ ಜಿಗಬಡ್ಡಿ
If you cultivate ideal qualities and a secular attitude in life, you can be recognized as a great p
ಜೀವನದಲ್ಲಿ ಆದರ್ಶ ಗುಣಗಳನ್ನು ಮತ್ತು ಜಾತ್ಯಾತೀತ ಮನೋಭಾವ ಬೆಳಸಿಕೊಂಡರೆ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಬಹುದು - ಪ್ರಾಚಾರ್ಯ ಜಿಗಬಡ್ಡಿ
ಮುಧೋಳ 01: ಎಸ್.ಆರ್.ಕಂಠಿ ಮಹಾವಿದ್ಯಾಲಯಕ್ಕೆ ನ್ಯಾಕ್ ಎ ಗ್ರೇಡ್ ಬರುವದಕ್ಕೆ ಬಿವ್ಹಿವ್ಹಿ ಸಂಘದ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರು ಹಾಗೂ ಎಲ್ಲ ಸದಸ್ಯರುಗಳು, ಕಾಲೇಜಿನ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರ ಪ್ರಾಮಾಣಿಕ ಪ್ರಯತ್ನ ಮತ್ತು ಸಹಕಾರವೇ ಕಾರಣವಾಯ್ತು ಅದರಲ್ಲೂ ಪ್ರಮುಖವಾಗಿ ನಾನು ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕಾಲೇಜಿಗೆ ನ್ಯಾಕ್ ಎ ಗ್ರೇಡ್ ಬಂದಿರುವುದು ನನಗೆ ಅತೀವ ಸಂತಸ ತಂದಿದೆ ಎಂದು ಪ್ರೊ.ಮಲ್ಲಣ್ಣ ಜಿಗಬಡ್ಡಿ ಹೇಳಿದರು.
ಪ್ರಾಚಾರ್ಯ ಪ್ರೊ.ಮಲ್ಲಣ್ಣ ಜಿಗಬಡ್ಡಿ ಅವರ ಸೇವಾ ನಿವೃತ್ತಿಯಾದ ಪ್ರಯುಕ್ತ ಮುಧೋಳ ಎಸ್.ಆರ್. ಕಂಠಿ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರಿಂದ ಗುರುವಾರ ಕಾಲೇಜಿನ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಗೌರವಾಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿ ತಮ್ಮ ಸೇವಾ ಅವಧಿಯಲ್ಲಿ ನಡೆದ ಮಹತ್ತರ ಘಟನೆಗಳನ್ನು ನೆನಪಿಸಿ ಕೊಂಡಾಗ ಅವು ಪವಾಡಗಳಂತೆ ಆಗಿ ಹೋಗಿವೆ, ನನ್ನ 33 ವರ್ಷಗಳ ಸುದೀರ್ಘ ಸೇವಾ ಅವಧಿಯು ನನಗೆ ಸಂತೃಪ್ತಿ ತಂದಿದೆ, ವಾಣಿಜ್ಯ ವಿಭಾಗದ ಪ್ರಾದ್ಯಾಪಕರಾಗಿ, ಪ್ರಾಚಾರ್ಯರಾಗಿ, ಎಲ್ಲರ ವಿಶ್ವಾಸ, ನಂಬಿಕೆ, ಪ್ರಾಮಾಣಿಕತೆ, ನಿಷ್ಠೆಯಿಂದ ಕೆಲಸ ಮಾಡಿದ್ದೇನೆ ಇದರಿಂದ ಯಶಸ್ಸು ಸಿಕ್ಕಿದೆ, ಜೀವನದಲ್ಲಿ ಆದರ್ಶ ಗುಣಗಳನ್ನು ಮತ್ತು ಜಾತ್ಯಾತೀತ ಮನೋಭಾವ ಬೆಳಸಿಕೊಂಡರೆ ಸಮಾಜ ದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿ ಗುರುತಿಸಿಕೊಳ್ಳಬಹುದು, ಅಸಾಧ್ಯವಾದ ಕೆಲಸವನ್ನು ಸಾಧ್ಯವೆಂದು ಆತ್ಮ ವಿಶ್ವಾಸದಿಂದ ಮಾಡಿದ್ದಾದರೆ ಜಯಶಾಲಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ, ವಾಣಿಜ್ಯ ವಿಷಯದ ಬಿಓಇ ಅಧ್ಯಕ್ಷರಾಗಿ, ರೂಸಾ ಚೇರಮನ್ ರಾಗಿ, ಎನ್.ಎಸ್.ಎಸ್ ಕಾರ್ಯಾಕ್ರಮದ ಅಧಿಕಾರಿಯಾಗಿ ಕಾರ್ಯನಿರ್ವಹಿಸಿರುವ ಅನುಭವ ನಾನೇಂದಿಗೂ ಮರೆಯುವಂತಿಲ್ಲ, ಅದರಲ್ಲೂ ಮುಧೋಳ ಎಸ್.ಆರ್. ಕಂಠಿ ಕಾಲೇಜಿನಲ್ಲಿ 2 ವರ್ಷದವರೆಗೆ ಪ್ರಾಚಾರ್ಯರಾಗಿ ಸಲ್ಲಿಸಿರುವ ಸೇವೆ ಅಮೋಘವಾದದ್ದು ಇದನ್ನೂ ಮರೆಯುವಂತಿಲ್ಲ, ಬಿವ್ಹಿವ್ಹಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಸಿ. ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಎನ್. ಅಥಣಿ, ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಎಸ್. ಸೂಳಿಭಾವಿ, ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರ ಸಹಕಾರ, ಪಾಲಕ-ಪೋಷಕರ, ನಾಗರಿಕರ ಪ್ರೊತ್ಸಾಹ, ಪ್ರಸ್ತುತ ಮತ್ತು ಹಳೆಯ ವಿದ್ಯಾರ್ಥಿಗಳ ಪ್ರೀತಿ, ವಿಶ್ವಾಸವನ್ನು ನಾನೆಂದಿಗೂ ಮರೆಯುವದಿಲ್ಲ ಅದರಂತೆ ನನಗೆ ಕಲಿಸಿದ ಗುರುಗಳನ್ನು, ಸ್ನೇಹಿತರನ್ನು ಮತ್ತು ವಿದ್ಯಾರ್ಥಿಗಳನ್ನೂ ಸ್ಮರಿಸುತ್ತೇನೆ ಎಂದರು.
ಸಂಘದ ಕಾಲೇಜುಗಳ ಆಡಳಿತ ಮಂಡಳಿ ಸದಸ್ಯ ರವೀಂದ್ರ ಎಸ್. ಸಾವಳಗಿಮಠ, ಗುಳೇದಗುಡ್ಡದ ಭಂಡಾರಿ ಆಂಡ್ ರಾಠಿ ಕಾಲೇಜಿನ ಗಣಿತಶಾಸ್ತ್ರದ ಮುಖ್ಯಸ್ಥ ಡಾ.ಎಮ್.ಎಸ್.ಪಾಟೀಲ ಅತಿಥಿ ಸ್ಥಾನವಹಿಸಿ ಮಾತನಾಡಿ ವಿಶ್ವದಲ್ಲಿ ಗುರುಗಳಿಗೆ ಇರುವ ಗೌರವ ಬೇರೆ ಯಾರಿಗೂ ಇಲ್ಲ ಎಂದು ಗುರುವಿನ ಮಹತ್ವ ತಿಳಿಸಿಕೊಟ್ಟು ಕಾಲೇಜಿಗೆ ನ್ಯಾಕ್ ಎ ಗ್ರೇಡ್ ಬಂದಿರುವದಕ್ಕೆ ಅಭಿನಂದಿಸಿದರು.
ಬಾಗಲಕೋಟ ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎಸ್.ಆರ್. ಮುಗನೂರ ಮಠ, ಬಾಗಲಕೋಟ ವಿದ್ಯಾಗಿರಿಯ ಬಿವ್ಹಿವ್ಹಿ ಸಂಘದ ಬಸವೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಬಿ.ಆರ್.ಪಾಟೀಲ, ಪ್ರೊ.ಪಿ.ಬಿ.ಬಡಿಗೇರ, ಡಾ.ಎಮ್.ಆರ್.ಜರಕುಂಟಿ, ಪ್ರೊ.ಎಸ್.ಎಸ್.ಬಿರಾದಾರ, ಪ್ರೊ.ಎ.ಆರ್.ಕಡೂರ, ಸುಪ್ರಿಡೆಂಟ್ ಬಸಪ್ಪ ಮೇತ್ರಿ ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರು ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ಹೇಳಿ ವಿದ್ಯಾರ್ಥಿಗಳಿಗೆ ಒಳ್ಳೆಯ ಗುರು ಬೇಕು, ಅವರಿಗೆ ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ತಿಳಿಸಿಕೊಡಬೇಕೆಂದರು.
ಪ್ರಾಚಾರ್ಯ ಪ್ರೊ.ಎಮ್.ವ್ಹಿ.ಜಿಗಬಡ್ಡಿ ಅವರ ತಾಯಿ ಕಮಲಮ್ಮ, ಪತ್ನಿ ರೂಪಾ, ಪುತ್ರರಾದ ಸೌರಭ ಮತ್ತು ವಿಜಯ ಕುಮಾರ, ಸಹೋದರಿ ಸುಮಂಗಲಾ ಈ ಸಾಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರೊ.ಶಾರದಾ ಬಿರಾದಾರ ಪ್ರಾರ್ಥನೆ ಹೇಳಿದರು, ಪ್ರೊ.ಎ.ಎಚ್.ಹಿರೇಮಠ ಸ್ವಾಗತಿಸಿದರು, ಡಾ.ಎಸ್.ಎಸ್.ಸಬರದ ಅತಿಥಿಗಳನ್ನು ಪರಿಚಯಿಸಿದರು, ಡಾ.ಆರ್.ವೈ.ಕತ್ತಿ ನಿರೂಪಿಸಿದರು, ಡಾ.ಎಮ್.ಕೆ.ಗವಿಮಠ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 