ನುಡಿದಂತೆ ನಡೆಯದಿದ್ದರೆ, ನಾವು ಪೂಜಿಸುವ ಲಿಂಗವೇ ಘಟಸರಾ್ವಗಿ ಕಚ್ಚಲಿದೆ. ಶ್ರೀ ರಂಬಾಪುರಿ ಜಗದ್ಗುರು
If we do not do as we are told, the very Linga we worship will be bitten by the Ghatasaraga. Shri R
ಬಂಕಾಪುರ 14 : ಸರ್ವ ಸಮೂದಾಯದವರನ್ನು ಪ್ರೀತಿ ವಿಶ್ವಾಸ ಅಂತ:ಕರಣದಿಂದ ಕಂಡು ಸಂಸ್ಕಾರವನು ನೀಡಿ ಶಿವದೀಕ್ಷೆ ಅನುಗ್ರಹಿಸಿ ಶಿವ ಪಂಚಾಕ್ಷರ ಮಹಾ ಮಂತ್ರವನು ಭೋದಿಸಿ ಭಕ್ತ ಸಮೂಹವನ್ನು ಧರ್ಮದ ದಾರಿಯಲ್ಲಿ ನಡೆಯುವಂತೆ ಮಾಡಿದ ಕೀರ್ತಿ ಲಿಂ.ರುದ್ರಮುನಿ ಶಿವಾಚಾರ್ಯರಿಗೆ ಸಲ್ಲುತ್ತದೆ ಎಂದು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಭಗವತ್ಪಾದರು ಹೇಳಿದರು. ಪಟ್ಟಣದ ಅರಳೆಲೆ ಹಿರೇಮಠದ ಲಿಂ. ರುದ್ರಮುನಿ ಶಿವಾಚಾರ್ಯ ಲಿಂಗ ಬೆಳಕಿನ 52 ನೇ ವರ್ಷದ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವನ್ನುದ್ದೇಸಿಸಿ ಆಶೀರ್ವಚನ ನೀಡಿದ ಜಗದ್ಗುರುಗಳು, ರಂಬಾಪುರಿ ಪೀಠದ ಲಿಂ.ವೀರಗಂಗಾಧರ ಜಗದ್ಗುರುಗಳು, ಹುಲ್ಯಾಳದ ಶಂಭುಲಿಂಗ ಶಿವಾಚಾರ್ಯರು ಹುಬ್ಬಳ್ಳಿ ಹನ್ನೆರಡು ಮಠದ ಮಡಿವಾಳ ಶಿವಾಚಾರ್ಯರು, ಮೂವರು ಅಮೋಘ ರತ್ನಗಳಿಗೆ ಲಿಂಗದೀಕ್ಷೆ ನೀಡಿ ನಾಡಿಗೆ ಕೊಡುಗೆ ನೀಡಿದ ಕೀರ್ತಿ ಲಿಂ. ಶ್ರೀ ರುದ್ರಮುನಿ ಶಿವಾಚಾರ್ಯರಿಗೆ ಸಲ್ಲುತ್ತದೆ. ಪ್ರಸ್ತುತ ಶ್ರೀಮಠದ ರೇವಣಸಿದ್ಧೇಶ್ವರ ಶಿವಾಚಾರ್ಯರೂ ಕೂಡಾ ಲಿಂ.ರುದ್ರಮುನಿ ಶಿವಾಚಾರ್ಯರು ಹಾಕಿಕೊಟ್ಟ ದಾರಿಯಲ್ಲಿ ಭಕ್ತಸಮೂಹವನ್ನು ಕರೆದೊಯ್ಯುತ್ತಿರುವುದು ಸಂತಸ ತಂದಿದೆ ಎಂದು ನುಡಿದರು.
ಅರಳೆಲೆಮಠದ ರೇವಣಸಿದ್ಧೇಶ್ವರ ಶಿವಾಚಾರ್ಯರು ಮಾತನಾಡಿ ಮನುಷ್ಯನ ಉಜ್ವಲ ಬದುಕಿಗೆ ಧರ್ಮವೇ ದಿಕ್ಸೂಚಿಯಾಗಿದೆ. ಮನುಷ್ಯ ಧರ್ಮದ ದಾರಿ ಮೀರಿ ನಡೆದರೆ ಸುಖ ಶಾಂತಿ ನೆಮ್ಮದಿ ಸಿಗಲಾರದು. ಲಿಂ. ರುದ್ರಮುನಿ ಶಿವಾಚಾರ್ಯರು ಮಹಾ ತಪಸ್ವಿಗಳಾಗಿ ಚಿಂತಕರಾಗಿ ವೀರಶೈವ ಧರ್ಮ ಸಂಸ್ಕೃತಿ ಬೆಳೆಸುವುದರಲ್ಲಿ ಶ್ರಮಿಸಿದವರಾಗಿದ್ದರು. ಅಂತಹ ಮಹನಿಯರ 52 ನೇ ವರ್ಷದ ಪುಣ್ಯಸ್ಮರಣೋತ್ಸವದಲ್ಲಿ ಸರ್ವಸಮೂದಾಯದ ಭಕ್ತರು ಆಗಮಿಸಿ ತಮ್ಮ ಸೇವೆ ಸಲ್ಲಿಸಿರುವುದು ಸಂತಸ ತಂದಿದೆ ಎಂದು ನುಡಿದರು.ಕೋಟ್ : ವೀರಶೈವ ಧರ್ಮ ಸಕಲರಿಗೂ ಒಳಿತನ್ನೇ ಬಯಸಿದೆ. ಗಂಡು ಹೆಣ್ಣು, ಉಚ್ಛ ನೀಚ, ಬಡವ ಶ್ರೀಮಂತ ಎಂಬ ತಾರತಮ್ಯವಿಲ ್ಲದೇ ಸಕಲರ ಶ್ರೇಯಸ್ಸನ್ನು ಬಯಸುತ್ತಾ ಬಂದಿದೆ.ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಕೋಟ್ : ನೀತಿ ಇಲ್ಲದ ಶಿಕ್ಷಣ, ಬೀತಿ ಇಲ್ಲದ ಶಾಸನ, ವಿಧಿ ಇಲ್ಲದ ಜೀವನ, ಕ್ಷೇಮಾತೀತ ಸ್ವಾತಂತ್ರ್ಯ ರಾಷ್ಟ್ರ ವಿವಾದಕಗಳಾಗಿವೆ. ನುಡಿದಂತೆ ನಡೆಯದಿದ್ದರೆ, ನಾವು ಪೂಜಿಸುವಂತ ಲಿಂಗವೇ ಘಟಸರಾ್ವಗಿ ಕಚ್ಚಲಿದೆ.
ಡಾ.ವೀರಸೋಮೇಶ್ವರ ಶಿವಾಚಾರ್ಯರು. ಸಭೆಯಲ್ಲಿ ಶಿವಾನಂದಯ್ಯ ಚರಂತಿಮಠ ರಚಿಸಿದ ವೀರಶೈವಾಮೃತ ತಾತ್ಪರ್ಯ ನವನೀತ ಗ್ರಂಥವನ್ನು ರಂಬಾಪುರಿ ಪೀಠದ ಡಾ.ವೀರಸೋಮೇಶ್ವರ ಭಗವತ್ಫಾದರು ಲೋಕಾರೆ್ಣ ಗೋಳಿಸಿದರು. ಡಾ.ಗುರುನಾಗಭೂಷಣ ಶಿವಾಚಾರ್ಯರು, ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಡಾ. ಶಿವಲಿಂಗ ಶಿವಾಚಾರ್ಯರು, ಶಿವಯೋಗಿ ಶಿವಾಚಾರ್ಯರು, ವಿಶ್ವಾರಾಧ್ಯ ಶಿವಾಚಾರ್ಯರು, ಶಿವಾನಂದ ಶಿವಾಚಾರ್ಯರು,ಡಾ.ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು, ಗುರುಮಹೇಶ್ವರ ಶಿವಾಚಾರ್ಯರು ಮಾಜಿ ಸಂಸದ ಎಂ.ಸಿ.ಕುನ್ನೂರ, ಡಾ.ಸುಖಿನ ಅರಳೆಲೆಮಠ, ಶಶಿಧರ ಯಲಿಗಾರ, ಶೇಖರಗೌಡ್ರು ಪಾಟೀಲ, ಪುರಸಭೆ ಅಧ್ಯಕ್ಷ ಶಿವಾನಂದ ಅಜ್ಜಣ್ಣವರ ಸೇರಿದಂತೆ ಇತರ ಗಣ್ಯಮಾನ್ಯ ಪ್ರತಿಷ್ಠಿತರು ಉಪಸ್ಥಿತರಿದ್ದರು. ಡಾ.ಆರ್.ಎಸ್.ಅರಳೆಲೆಮಠ ಸ್ವಾಗತಿಸಿದರು. ಡಾ.ಗುರುಪಾದಯ್ಯ ಸಾಲಿಮಠ ಎಂ.ಬಿ.ಉಂಕಿ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 