ಲೋಕದರ್ಶನ
ವರದಿ
ಶಿಗ್ಗಾವಿ 14
: ಶಿಗ್ಗಾವಿ ಮತ್ತು ಸವಣೂರ ತಾಲೂಕು ಸಜ್ಜನದಿಂದ ಕೂಡಿದ ತಾಲೂಕು ಒಳ್ಳೆಯ ಕೆಲಸ ಮಾಡುವ ಮನಸ್ಸು
ಇದ್ದರೆ ಭಗವಂತನು ಕೈ ಹಿಡಿಯುತ್ತಾನೆ ಎಂದು
ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ಶರನ್ನವರಾತ್ರಿಯ ಮೂರನೇಯ ದಿನದ ಪುರಾಣ ಪ್ರವಚನ
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ನಿತ್ಯ ದೇವಿ
ಸ್ತುತಿ ಹಾಗೂ ದೇವಿ ಪುರಾಣ
ಯಾರು ಓದುತ್ತಾರೆ ಮತ್ತು ಕೇಳುತ್ತಾರೆ ಅಂತವರಿಗೆ ದೇವಿಯು ಸಕಲ ಸಂಪತ್ತುಗಳನ್ನು ಕೊಟ್ಟು
ಹಾರೈಸುತ್ತಾಳೆ ಅಲ್ಲದೇ ನಾನು ಕಳೆದ ಇಪ್ಪತ್ತು
ವರ್ಷದಿಂದ ದೇವಿ ಪುರಾಣವನ್ನ ಓದುತ್ತಾ
ಬಂದಿದ್ದೇನೆ ಅದರ ಮಹತ್ವ ನನಗೆ
ಗೊತ್ತು ಎಂದರು.
ದೇವಿಯ ಪುರಾಣದ ಪ್ರತಿಯೊಂದು ಅಧ್ಯಾಯದಲ್ಲಿ ನೀತಿ ಪಾಠವಿದೆ ಅಲ್ಲದೇ
ರಾಕ್ಷಸ ಗುಣಗಳಾದ ಕಾಮ, ಕ್ರೋದ,ಮದ,
ಮತ್ಸರ ಗುಣಗಳನ್ನು ಹೊಡೆದು ಹಾಕಿದಾಗ ನಾವು ಮನುಷ್ಯನಿಂದ ಮಾನವನಾಗುತ್ತೇವೆ
ಎಂದರು.
2007
ರಲ್ಲಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಕರೆದು ನನಗೆ ಪ್ರೀತಿ ಮಮಕಾರ
ನೀಡಿದ್ದು ಅಂದು ನಾನು ಬಿಜ್ಞಾಸೆಯಿಂದ
ಕ್ಷೇತ್ರಗಳನ್ನು ಹುಡುಕುವಾಗ ಪ್ರೀತಿ ವಿಶ್ವಾಸವನ್ನು ನೀಡಿದ್ದು ಯಶೋಗಾಥೆಯಾಗಿದೆ. ಅಧಿಕಾರ, ಐಶ್ವರ್ಯ ಶಾಶ್ವತವಲ್ಲ ಸಾಧನೆಯ ಪಯಣದಲ್ಲಿ ಇನ್ನೂ ಬಹಳ ದೊಡ್ಡ ಮಟ್ಟದ
ಕನಸ್ಸುಗಳು ಇದೆ. ಆ ದೇವಿಯ
ಆಶರ್ಿವಾದದಿಂದ ಮಳೆ ಬೆಳೆ ಚೆನ್ನಾಗಿ
ಆಗಿದ್ದು ರೈತನ
ಬದಕು ಹಸನಾದರೆ ಭಾಗ್ಯದ ಬೆಳಕು ತೆರೆಯುತ್ತದೆ. ನನಗೆ ದೇವಿಯ ಆಶರ್ಿವಾದ
ಇರುವುದರಿಂದ ಎಲ್ಲ ಕಾರ್ಯಕ್ರಮಗಳು ಸರಾಗವಾಗಿ
ನೆಡೆದಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಾಸ್ತಾವಿಕವಾಗಿ
ಎಸ್.ವ್ಹಿ.ದೇಶಪಾಂಡೆ ಮಾತನಾಡಿದರು.
ಪ್ರವಚನಕಾರರಾದ ವೇದಮೂತರ್ಿ ಕುಮಾರಸ್ವಾಮಿ ಶಾಸ್ತ್ರೀ ಹಿರೇಮಠ, ಶರಣಬಸಯ್ಯ ಹಿರೇಮಠ, ಬಸವರಾಜ ಚಳಕೇರಿ, ಶಂಕರಗೌಡ ಪಾಟೀಲ, ಶಿವಪ್ರಸಾದ ಸುರಗೀಮಠ, ಶ್ರೀಕಾಂತ ಬುಳ್ಳಕ್ಕನವರ, ದೇವಣ್ಣಾ ಚಾಕಲಬ್ಬಿ, ಶಿವಾನಂದ ಮ್ಯಾಗೇರಿ, ಟಿ.ವ್ಹಿ.ಸುರಗಿಮಠ,
ಜಯಣ್ಣ ಹೆಸರೂರ,ದತ್ತಣ್ಣಾ ವೆಣರ್ೇಕರ, ಬಿ.ಎಮ್.ಹಿರೂಲಾಲ,
ಜಗದೀಶ ಬನ್ನಿಕೊಪ್ಪ, ಬಸವರಾಜ ಹೆಸರೂರ ಉಪಸ್ಥಿತರಿದ್ದರು.ಎಸ್.ವ್ಹಿ. ದೇಶಪಾಂಡೆ
ಗುರುಗಳು ಸ್ವಾಗತಿಸಿ ವಂದಿಸಿದರು.