ಸಹಕಾರ ರಂಗ ಸಕ್ರೀಯವಾದರೆ ಎಲ್ಲರಿಗೂ ಸಮಾನ ಸಹಕಾರ
If the cooperative arena is active, there will be equal cooperation for all.
ಹಾನಗಲ್ಲ 16: ಬಡವರು ಇನ್ನು ಜೀತದಾಳಿನಂತೆ ಜೀವಿಸುವುದು ಬೇಡ, ಸಹಕಾರ ರಂಗ ಸಕ್ರೀಯವಾದರೆ ಶಾಶ್ವತವಾಗಿ ಧನವಂತರ ಕಪಿಮುಷ್ಟಿಯಿಂದ ಬಡವರು ಹೊರಗುಳಿಯಲು ಸಾಧ್ಯ ಏಷ್ಯಾ ಖಂಡದಲ್ಲಿಯೇ ದೇಶದ ಸಹಕಾರಿ ಸಂಘ ಮುಂಚೂಣಿಯಲ್ಲಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.
ಹಾನಗಲ್ಲಿನ ಸದಾಶಿವ ಮಂಗಲ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಹಾವೇರಿ ಜಿಲ್ಲಾ ಸಹಕಾರ ಯುನಿಯನ್ ಸೇರಿದಂತೆ ವಿವಿಧ ಸಂಘಟನೆಗಳು ಆಯೋಜಿಸಿದ 72 ನೇ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಅವರು, ಸಹಕಾರ ಕ್ಷೇತ್ರದಲ್ಲಿ ನಮ್ಮದೇಶದ ಸಹಕಾರ ರಂಗ ಏಷ್ಯಾಖಂಡದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಬಡವರ ಬದುಕು ಹಸನಾಗಲು ಸಹಕಾರ ಸಂಘದ ಪಾಲು ದೊಡ್ಡದಿದೆ.ಪಡಿತರ, ಕೃಷಿ ಸೌಲಭ್ಯ ಸೇರಿದಂತೆಎಲ್ಲ ಸೌಲಭ್ಯಗಳು ದೇಶದಕಟ್ಟಕಡೆಯ ವ್ಯಕ್ತಿಗೂ ಸರಿಯಾಗಿ ತಲುಪಿಸುವಲ್ಲಿ ಈ ಕ್ಷೇತ್ರದ ಸಹಕಾರಅತ್ಯವಶ್ಯವಾಗಿದೆ. ಸುರಾಸೆಗೆ ಸಹಕಾರಿ ಸಂಘ ಬಲಿಯಾಗುವುದು ಬೇಡ. ಸರಕಾರವನ್ನು ಅಲುಗಾಡಿಸುವ ಶಕ್ತಿ ಈ ರಂಗಕ್ಕಿರುವಾಗ ಸಂಘಟಿತವಾಗಿ ಕೆಲಸ ಮಾಡಿದರೆಎಲ್ಲವೂ ಸುಸೂತ್ರವಾಗಿ ನಡೆಯಬಲ್ಲವು ಎಂದರು.
ಮುಖ್ಯಅತಿಥಿಯಾಗಿ ಮಾತನಾಡಿದ ಕರ್ನಾಟಕರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಸವರಾಜಅರಬಗೊಂಡ, ಹಳ್ಳಿಯಿಂದ ದಿಲ್ಲಿಯವರೆಗೆ ನಮ್ಮ ಸಮಸ್ಯೆಗಳಿಗೆ ಸ್ಪಂಧಿಸುವ ಸಹಕಾರರಂಗಕ್ಕೆ ಶಕ್ತಿ ತುಂಬುವ ಅಗತ್ಯವಿದೆ. ಯುವಕರು ಈ ರಂಗದಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳಬೇಕು. ರೈತರಉತ್ಪಾದನೆಗೆ ಸರಿಯಾದ ಬೆಲೆ ಸಿಗುವಂತಾಗಬೇಕು. ಹಾವೇರಿಜಿಲ್ಲೆಯಲ್ಲಿಒಂದು ಸಾವಿರ ಸಹಕಾರಿ ಸಂಘಗಳಿವೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರದೂರದೃಷ್ಟಿಯಿಂದ ಸಹಕಾರ ಸಂಘಕ್ಕೆ ಈಗ ಬಲ ಬಂದಿದೆಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಕೆಸಿಸಿ ಬ್ಯಾಂಕ ನಿರ್ದೇಶಕಅದಾನಂದ ಮೆಳ್ಳಿಹಳ್ಳಿ, 2019 ರಲ್ಲಿ ಸಹಕಾರ ಇಲಾಖೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶಕ್ತಿಯಾದರು.ದೇಶದಲ್ಲಿ ಸಹಕಾರ ಇಲಾಖೆಗೆ ಮಂತ್ರಿ ಸ್ಥಾನವೂ ದೊರೆತಿದೆ. ಹಾನಗಲ್ಲತಆಲೂಕಿನಲ್ಲಿಯೇ 33 ಸಂಘಗಳ ಕಂಪ್ಯೂಟೀಕರಣದ ಭಾಗ್ಯ ಲಭಿಸಿದ್ದು ಇದು ಪಾರದರ್ಶಕ ಆಡಳಿತಕ್ಕೆ ಅವಶ್ಯವಾಗಿದೆ. ಸಹಕಾರ ಸಂಘಗಳ ವಿಷಯದಲ್ಲಿರಾಜಕೀಯ ಸಲ್ಲದು.ಎಲ್ಲರೂಒಟ್ಟಾಗಿ ಬಡವರ ಹಿತಕ್ಕೆ ಮುಂದಾಗೋಣ.ಕೃಷಿ ಸೇರಿದಂತೆಎಲ್ಲ ರಂಗಗಳ ಅಭಿವೃದ್ಧಿಗೆಇದು ಸಹಕಾರಿಎಂದರು.
ತಾಲೂಕು ಗ್ಯಾರಂಟಿ ಸಮಿತಿಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಷಣ್ಮುಖಪ್ಪ ಮುಚ್ಚಂಡಿ, ನೀಶೀಮಗೌಡ್ರು ಪಾಟೀಲ, ವೀರಭದ್ರ್ಪ ಉಪ್ಪಿನ, ಚಂದ್ರ್ಪ ಜಾಲಗಾರ, ಕಲ್ಯಾಣಕುಮಾರ ಶೆಟ್ಟರ, ಮಹೇಶ ಬಣಕಾರ, ವಿಜಯೇಂದ್ರ ಕನವಳ್ಳಿ, ಪದ್ಮಪ್ಪ ಮಂತಗಿ, ಗಣೇಶಪ್ಪ ಕೋಡಿಹಳ್ಳಿ, ಎಸ್.ಜಿ.ಸುಣಗಾರ, ಜಿಲ್ಲಾ ಸಹಕಾರಯುನಿಯನ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಸವಿತಾ ಹಿರೇಮಠ, ಹಾನಗಲ್ಲ ಸಹಕಾರಅಭಿವೃದ್ಧಿಅಧಿಕಾಋಇ ಬಿ.ಪುಷ್ಪಾವತಿ, ಹಿರಿಯ ನೀರೀಕ್ಷಕಆರ್.ನಟರಾಜ, ಕಿರಿಯ ನೀರೀಕ್ಷಕ ಶಿವಶಂಕರ ದುಮ್ಮೇರಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಿರು. ಡಾ.ಎಚ್.ಎಫ್.ನದಾಫಉಪನ್ಯಾಸ ನೀಡಿದರು.ನಿಸ್ಸೀಮಗೌಡ ಪಾಟೀಲ ಸ್ವಾಗತಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 