ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ನಮ್ಮ ಪ್ರೌಢಶಾಲೆ ವಿದ್ಯಾರ್ಥಿ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದರೆ 1ಲಕ್ಷ ಬಹುಮಾನ.!! 1 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ ದೈಹಿಕ ಶಿಕ್ಷಣ ಶಿಕ್ಷಕ ಶಿವಾನಂದ

ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ನಮ್ಮ ಪ್ರೌಢಶಾಲೆ ವಿದ್ಯಾರ್ಥಿ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದರೆ 1ಲಕ್ಷ ಬಹುಮಾನ.!! 1 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ ದೈಹಿಕ ಶಿಕ್ಷಣ ಶಿಕ್ಷಕ ಶಿವಾನಂದ  If our high school student gets first place in the SSLC exam, he will get a prize of Rs 1 lakh.!! P

ಕೊಪ್ಪದ 04:  ಶಿವಾಜಿ ಮೇತ್ರಿ. ಪಾಲಬಾವಿ: ಇದೇ ತಿಂಗಳು ಜನವರಿ 18ರಿಂದ ಏಪ್ರಿಲ್ 02ರ ವರೆಗೆ ಜರಗಲಿರುವ ಎಸ್‌ಎಸ್‌ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಪರಮಾನಂದವಾಡಿ ಎಸ್‌.ಆರಿ​‍್ಡ ಪರೀಕ್ಷಾ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ 1 ಲಕ್ಷ ರೂಪಾಯಿ ನಗದು ಬಹುಮಾನ ಘೋಷಿಸಿದ ಅಪರೂಪದ ಪ್ರಸಂಗವೊಂದು ಪರವಾನಂದವಾಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದ ಶ್ರೀ ಹಾಲುಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಎಸ್‌.ಆರಿ​‍್ಡ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ಮುಗಳಖೋಡ ಪಟ್ಟಣದ ರೈತಾಪಿ ಕುಟುಂಬದ ಹೃದಯವಂತ ಶಿಕ್ಷಕರು ಶಿವಾನಂದ ಶ್ರೀಶೈಲ ಕೊಪ್ಪದ ಇವರು ಸನ್‌.2025-26ನೇ ಸಾಲಿನಲ್ಲಿ ಪರಮಾನಂದವಾಡಿ ಗ್ರಾಮದ ಎಸ್‌.ಆರಿ​‍್ಡ ಪ್ರೌಢಶಾಲೆಯಲ್ಲಿ ನಡೆಯುವ ಎಸ್‌ಎಸ್‌ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದ ನಮ್ಮ ಪ್ರೌಢಶಾಲೆಯ ವಿದ್ಯಾರ್ಥಿಗೆ ಒಂದು ಲಕ್ಷ ರೂಪಾಯಿ ನಗದು ಹಣವನ್ನು ಬಹುಮಾನದ ರೂಪದಲ್ಲಿ ನೀಡುತ್ತೇನೆಂದು ದೈಹಿಕ ಶಿಕ್ಷಣ ಶಿಕ್ಷಕ ಶಿವಾನಂದ ಕೊಪ್ಪದ ಇತ್ತೀಚಿಗೆ ಘೋಷಣೆ ಮಾಡಿದ್ದಾರೆ. 

ಬಾಕ್ಸ್‌ ಲೈನ್ ="ಪರಮಾನಂದವಾಡಿಯ ಎಸ್‌.ಆರಿ​‍್ಡ ಪ್ರೌಢಶಾಲೆಯ 10ನೇ ತರಗತಿ 44 ವಿದ್ಯಾರ್ಥಿಗಳಲ್ಲಿ ಕುಮಾರಿ ಜಾಸ್ಮಿನ್ ಹುಸೇನ್ ಡಾಂಗೆ ಒಬ್ಬಳು ಆ ವಿದ್ಯಾರ್ಥಿನಿ ತರಗತಿಗೆ ಟಾಪರ್  ಸ್ಥಾನದಲ್ಲಿದ್ದು. ಆ ಕುಟುಂಬವು ತೀರ ಬಡತನದಲ್ಲಿರುವುದು ಅವರ ತಂದೆ ಬೇಸಿಗೆಕಾಲದಲ್ಲಿ ಐಸ್ ಕ್ರೀಮ್ ಮಾರಾಟ ಮಾಡುತ್ತ ಕುಟುಂಬ ನಿರ್ವಹಣೆ ಮಾಡುತ್ತಿದ್ದು. ಬಡತನದಲ್ಲಿ ಹುಟ್ಟಿದ ಕುಮಾರಿ ಜಾಸ್ಮಿನ್ ಡಾಂಗೆ  ಅಂತಹ ಅನೇಕ ವಿದ್ಯಾರ್ಥಿಗಳ ಜೀವನವು ಕಷ್ಟಕರವಾಗಿದೆ ಬಡತನದಲ್ಲಿದ್ದು ಟಾಪರ್ ಆಗಿ ಬೆಳೆಯುವ ವಿದ್ಯಾರ್ಥಿಗಳಿಗೆ ನಾನು ಕೊಡುವಂಹ  ಹಣವು ಅವರ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಆಸೆಯಾಗಿದೆ"  

ಬಾಕ್ಸ್‌ = "ಪರಮಾನಂದವಾಡಿ ಗ್ರಾಮದ ಎಸ್‌.ಆರಿ​‍್ಡ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ಶಿವಾನಂದ ಕೊಪ್ಪದ ಗುರುಗಳು ರವರು ಸನ್‌.2025- 26ನೇ ಸಾಲಿನ ಎಸ್‌ಎಸ್‌ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ನಮ್ಮ ಪರೀಕ್ಷಾ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ನಗದು 1 ಲಕ್ಷ  ಹಣವನ್ನು  ಕೊಡುವುದಾಗಿ ಘೋಷಣೆ ಮಾಡಿದ್ದು ನಿಜಕ್ಕೂ ನಮಗೆ ಹೆಮ್ಮೆ ತಂದಿದೆ. ಅವರ ಈ ಘೋಷಣೆಯಿಂದ ನಮಗೆ ಪ್ರೇರಣೆಯಾಗಿದೆ. ನಾನು ಕೂಡ ಮುಂದಿನ ವರ್ಷ ಸನ್‌.2026-27ನೇಯ ಸಾಲಿನ ನಮ್ಮ  ಶಿಕ್ಷಣ ಸಂಸ್ಥೆಯಲ್ಲಿ ನಮ್ಮ ಎಸ್‌.ಆರಿ​‍್ಡ ಪ್ರೌಢ ಶಾಲೆಯಲ್ಲಿ 8ನೇ ತರಗತಿ ಯಿಂದ 10ನೇ ತರಗತಿಯ ವರೆಗೆ  ವಿಧ್ಯಾರ್ಥಿಗಳು ವ್ಯಾಸಾಂಗ ಮಾಡಿರಬೇಕು. ನಮ್ಮ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದರೆ ಅಂತ ವಿಧ್ಯಾರ್ಥಿಗಳಿಗೆ 1ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು"