ರಕ್ತದಿಂದ ಬರೆದು ಕೊಡುವೆ ದಡೇಸೂಗುರು ಠೇವಣಿ ಕಳೆದುಕೊಳ್ಳುವುದು ನಿಶ್ಚಿತ : ರೆಡ್ಡಿ ಶ್ರೀನಿವಾಸ

ರಕ್ತದಿಂದ ಬರೆದು ಕೊಡುವೆ ದಡೇಸೂಗುರು ಠೇವಣಿ ಕಳೆದುಕೊಳ್ಳುವುದು ನಿಶ್ಚಿತ : ರೆಡ್ಡಿ ಶ್ರೀನಿವಾಸ I will write it in blood and Dadesuguru will definitely lose his deposit: Reddy Srinivas

ಕೊಪ್ಪಳ 19:  ಮುಂಬರುವ ಕನಕಗಿರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ್ ದಡೇಸೂಗುರು ಸ್ಪರ್ಧಿಸಿದರೆ ಠೇವಣಿ ಕಳೆದುಕೊಳ್ಳುವುದು ನಿಶ್ಚಿತ ಎಂದು ಕೊಪ್ಪಳ ಜಿಲ್ಲಾ ಗ್ಯಾರೆಂಟಿ ಯೋಜನೆ ಪ್ರಾಧಿಕಾರ ಅನುಷ್ಠಾನದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್ ಹೇಳಿದರು.ಅವರು ಗುರುವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ, ಉದ್ದೇಶಿಸಿ ಮಾತನಾಡಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಿಗಿ ಅವರು ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ ಅವರ ಅಭಿವೃದ್ಧಿ ಕಾರ್ಯಗಳು ಅವರ ಗೆಲುವಿಗೆ ಶ್ರೀರಕ್ಷೆ ಯಾಗಲಿವೆ ಎಂದು ಅವರು ಗ್ಯಾರೇಂಟಿ ಕಾರ್ಯಾಗಾರ ಮತ್ತು ಗ್ಯಾರೇಂಟಿ ಉತ್ಸವ ಕೊಪ್ಪಳದಲ್ಲಿ ಅದ್ದೂರಿಯಾಗಿ ಯಶಸ್ವಿಯಾಗಿ ಜರುಗಿದ್ದು ರಾಜ್ಯ ಗ್ಯಾರಂಟಿ ಅಧ್ಯಕ್ಷ ರೇವಣ್ಣ ಅವರೇ ಸಂತೋಷಗೊಂಡಿದ್ದಾರೆ ಅದರಲ್ಲಿ ಪಾಲ್ಗೊಂಡ ಎಲ್ಲರು, ಗ್ಯಾರೇಂಟಿ ಯೋಜನೆಯ ಫಲಾನುಭವಿಗಳು, ಅಲ್ಲಿ ಯಾರನ್ನು ಹಣ, ವಾಹನ ಕೊಟ್ಟು ಕರೆದುಕೊಂಡು ಬಂದಿಲ್ಲ ಎಲ್ಲಾ ಫಲಾನುಭಿಗಳಿಗೆ ಆಸನಗಳ ವ್ಯವಸ್ಥೆ ಮಾಡಿದ್ದು, ಸಭಾಂಗಣ ಫಲಾನುಭವಿಗಳಿಂದ ಭರ್ತಿಯಾಗಿದ್ದು, ಅದಕ್ಕೆ ಸಂಬಂಧಸಿದ ಪೋಟೋಗಳು ಮತ್ತು ವಿಡಿಯೋಗಳನ್ನು ಬಸವರಾಜ್ ದಡೇಸೂಗೂರು ಅವರಿಗೆ ಕಳಿಸಿಕೊಡುತ್ತೇವೆ ಗ್ಯಾರೇಂಟಿ ಉತ್ಸವ ಸಂಪೂರ್ಣ ಯಶಸ್ವಿಯಾಗಿದ್ದು, ಇದನ್ನು ಗಮನಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಡೇಸೂಗುರು ಅವರಿಗೆ  ಸಹಿಸಿಕೊಳ್ಳಲು ಆಗುತ್ತಿಲ್ಲ,  

ಈ ಉತ್ಸವಕ್ಕೆ ಜಿಲ್ಲೆಯ ಎಲ್ಲಾ ಫಲಾನುಭಿವಿಗಳು, ಸ್ವಯಂ ಪ್ರೇರಿತರಾಗಿ ಪಾಲ್ಗೊಂಡಿದ್ದಾರೆ,ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು, ಹಾಗೂ ಶಾಸಕ ಬಸವರಾಜ ರಾಯರೆಡ್ಡಿ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಕಾಂಗ್ರೇಸ ಜಿಲ್ಲಾಧ್ಯಕ್ಷರು, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ, ಸೇರಿದಂತೆ ಎಲ್ಲಾ ಮುಖಂಡರಿಗೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು, ಎಂದು ಗ್ಯಾರೇಂಟಿ ಯೋಜನೆಯ ಫಲಾನುಭವಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ,ಆದರೆ ಬೇರೆ ಬೇರೆ ಕೆಲಸಗಳ ನಿಮಿತ್ಯ ಪಾಲ್ಗೊಂಡಿಲ್ಲ, ಆದರೆ ಬಸವರಾಜ ದಡೇಸೂಗುರು ರವರು ಬಿಜೆಪಿಯ ಯಾವುದೇ ಕಾರ್ಯಕ್ರಮ ಆಯೋಜನೆ ಮಾಡಿದರೇ, ಜನರೇ ಇರುವುದಿಲ್ಲ, ಅದು ಬಿಟ್ಟು ಗ್ಯಾರೇಂಟಿ ಕಾರ್ಯಾಗಾರದ ಗ್ಯಾರೆಂಟಿ ಉತ್ಸವದಲ್ಲಿ ಜನ ಇರಲಿಲ್ಲ ಎಂದು ಹೇಳುವುದು ಸತ್ಯಕ್ಕೆ ದೂರವಾದದ್ದು,ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿಯವರ ಯಾವುದೋ ಹಳೆ ವಿಡಿಯೋವನ್ನು ಇಟ್ಟುಕೊಂಡು ಪ್ರಚಾರ ಪಡೆದುಕೊಳ್ಳಲು. ಬಸವರಾಜ ದಡೇಸೂಗುರು ಯತ್ನಿಸುತ್ತಿದ್ದಾರೆ, ಅವರ ವಿಡಿಯೋಗಳು ಸಹ ಬಹಳಷ್ಟು ಇದ್ದು, ಸಚಿವ ಶಿವರಾಜ ತಂಗಡಗಿಯವರ ಸಹ, ಶೀಘ್ರದಲ್ಲೆ ಬಿಡುಗಡೆಗೊಳಿಸುವವರು, ಬಸವರಾಜ ದಡೇಸೂಗುರು ನೀಡಿದ ವಿಡಿಯೋ ಭೋವಿ ಸಮಾಜದವರು, ಶ್ರೀ ಸಿದ್ದರಾಮೇಶ್ವರ ಜಯಂತಿ, ಜಾತ್ರೆ ಸಂಬಂಧ ದೇಣಿಗೆಗಾಗಿ ಬಂದಾಗ ಅವರಿಗೆ ದೇಣಿಗೆ ಕೊಡುವುದಾಗಿ ಹೇಳಿದ್ದಾರೆ,

ಅದರಲ್ಲಿ ಒಬ್ಬ ಯುವಕ ಸಚಿವರಿಗೆ ಏಕ ವಚನದಲ್ಲಿ ಮಾತನಾಡಿದಾಗ ಸಚಿವರಿಗೆ ಸಿಟ್ಟು ಬಂದ ಕಾರಣ ಸಹಜವಾಗಿ ಆ ಯುವಕನಿಗೆ, ಸಿಟ್ಟಿನಿಂದ ಮಾತನಾಡಿದ್ದಾರೆ, ಈ ಹಿಂದೆ ಬಸವರಾಜ ದಡೇಸೂಗುರು ಶಾಸಕರಾಗಿದ್ದಾಗ, ಪಿಎಸ್‌ಐ ನೌಕರಿ ವಿಚಾರವಾಗಿ ದೂರವಾಣಿಯಲ್ಲಿ ಯುವಕನಿಗೆ, ತಾವು ಹೇಗೆ ಮಾತನಾಡಿದ್ದಿರಿ ಎಂಬುವುದು, ಇಡೀ ರಾಜ್ಯದ ಜನತೆ ನೋಡಿದ್ದಾರೆ ಅದನ್ನು ನಾನು ಹೇಳಬೇಕಾಗಿಲ್ಲ ಆಗ ನಿಮಗೆ ಸಂಸ್ಕೃತಿ ಇರಲಿಲ್ಲವಾ?ಕನಕಗಿರಿ ವಿಧಾನ ಸಭೆ ಕ್ಷೇತ್ರದಲ್ಲಿ ತಾವು ಶಾಸಕರಾಗಿದ್ದಾಗ, ಎಷ್ಟು ಜಾತಿ ನಿಂದನೆ ಪ್ರಕರಣಗಳು, ದಾಖಲಾಗಿದ್ದವು ಎಂಬುದನ್ನು ಶೀಘ್ರದಲ್ಲಿ ದಾಖಲೆ ಸಮೇತ ನೀಡುತ್ತೇವೆ, ವಿನಾಕಾರಣ ಸಚಿವ ಶಿವರಾಜ ತಂಗಡಗಿಯವರ ಮೇಲೆ ಆರೋಪ ಮಾಡುವುದು ಸೂಕ್ತವಲ್ಲ,  ಅವರು ಎಷ್ಟೋ ಪ್ರಕರಣಗಳನ್ನು ಅವರವರಿಗೆ ಮಾತುಕತೆ ಮೂಲಕ ಬಗಿಹರಿಸಿಕೊಳ್ಳಲು ತಿಳಿಸಿದ್ದಾರೆ  ವಿನಾಕಾರಣ ಆರೋಪಗಳನ್ನು ಮಾಡುವುದನ್ನು ದಡೇಸುಗೂರು ನಿಲ್ಲಿಸಲಿ ಎಂದರು.ಸುದ್ದಿಗೋಷ್ಠಿಯಲ್ಲಿ ಕೊಪ್ಪಳ ತಾಲೂಕು ಗ್ಯಾರಂಟಿ ಯೋಜನೆ ಪ್ರಾಧಿಕಾರ ಅನುಷ್ಠಾನದ ಸದಸ್ಯರು ಹಾಗೂ ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಗೊಂಡಬಾಳ, ಕೊಪ್ಪಳ ತಾಲೂಕು ಸದಸ್ಯರಾದ ಅಶೋಕ ಗೋರಂಟ್ಲಿ, ಅನ್ನದಾನಸ್ವಾಮಿ, ಕಾರಟಗಿ ಅಧ್ಯಕ್ಷ ದೇವಪ್ಪ ಭಾವಿಕಟ್ಟಿ ಉಪಸ್ಥಿತರಿದ್ದರು.