ಮತ ಹಾಕಿದ ಗ್ರಾಮಸ್ಥರ ಋಣ ತೀರಿಸುವ ಕೆಲಸ ಮಾಡುತ್ತೇನೆ : ಶಾಸಕ ಪಠಾಣ
I will work to pay off the debts of the villagers who voted for me: MLA Pathana
ಮತ ಹಾಕಿದ ಗ್ರಾಮಸ್ಥರ ಋಣ ತೀರಿಸುವ ಕೆಲಸ ಮಾಡುತ್ತೇನೆ : ಶಾಸಕ ಪಠಾಣ
ಶಿಗ್ಗಾವಿ 19 : ಬರುವ ದಿನಗಳಲ್ಲಿ ಶಿಡ್ಲಾಪುರ ಗ್ರಾಮವನ್ನು ದತ್ತು ಪಡೆದು ಸಮಗ್ರ ಅಭಿವೃದ್ಧಿಪಡಿಸಿ ಮತ ಹಾಕಿದ ಗ್ರಾಮಸ್ಥರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕ ಯಾಸೀರಖಾನ್ ಪಠಾಣ ಹೇಳಿದರು. ತಾಲೂಕಿನ ಶಿಡ್ಲಾಪುರ ಗ್ರಾಮದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಸಮಾಜ ಏರಿ್ಡಸಿದ್ದ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಉದ್ಘಾಟಿಸಿ ಮಾತನಾಡಿದ ಅವರು30 ವರ್ಷದಿಂದ ತಮ್ಮ ವಶದಲ್ಲಿದ್ದ ಗ್ರಾಮವನ್ನು ಗೆಲ್ಲಲು ಬಿಜೆಪಿಗೆ ಆಗಿಲ್ಲ, 2024ರಲ್ಲಿ ನನ್ನ ಗೆಲ್ಲಿಸಿದ ಇಲ್ಲಿಯ ಜನರ ಕೆಲಸ ಮಾಡುತ್ತೇನೆ. ವಿಶೇಷ ಆದ್ಯತೆ ಮೇರೆಗೆ ಈ ಗ್ರಾಮವನ್ನು ದತ್ತು ಪಡೆದು ಸಮಗ್ರ ಅಭಿವೃದ್ದಿ ಕೈಗೊಂಡಿದ್ದಾಗಿ ತಿಳಿಸಿದರು. ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಈಗಾಗಲೇ ಗ್ರಾಮದಲ್ಲಿ 25 ಲಕ್ಷ ವೆಚ್ಚದ ಮನೆಗಳ ನಿರ್ಮಾಣ,ಆಂಜನೇಯಸ್ವಾಮಿ, ದುರ್ಗಾದೇವಿ ದೇವಸ್ಥಾನಗಳ ಜಿರ್ಣೋದ್ದಾರೆ. ರಸ್ತೆ, ಚರಂಡಿಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. 50 ಹಾಸಿಗೆ ಸಾರ್ವಜನಿಕ ತಾಲೂಕ ಆಸ್ಪತ್ರೆ ಕಟ್ಟಡ, ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳ ಬಗ್ಗೆ ಮಾತನಾಡುವ ಬಿಜೆಪಿಯವರ ಕಾಲದಲ್ಲಿ ಈ ಕಾಮಗಾರಿಗಳು ನಡೆದಿವೆ. ಒಂದೇ ಮಳೆಗಾಲದಲ್ಲಿ ಕಿತ್ತು ಹೋದ ರಸ್ತೆ ನೋಡಿದರೇ ಕಾಮಗಾರಿ ಗುಣಮಟ್ಟದ ಬಗ್ಗೆ ಊಹಿಸಬಹುದು. ಎಂತಹ ಮಹಾಶಯರು ಇಲ್ಲಿ ಕೆಲಸ ಮಾಡಿಲ್ಲ ಎಂಬ ಗಂಭೀರ ಆರೋಪ ಮಾಡಿದರು. ಅನಧಿಕೃತವಾಗಿ ಮನೆ ಕಟ್ಟಿ ಕೊಂಡವರಿಗೆ 20 ಸಾವಿರ ಜನರಿಗೆ ಹಕ್ಕುಪತ್ರ ವಿತರಿಸುತ್ತಿದ್ದೇನೆ. ಅಧಿ ಕಾರದಲ್ಲಿದ್ದಾಗ ಅವರು ಮಾಡಲಿಲ್ಲ. ದೇವರು ನನಗೆ ಅವಕಾಶ ಕೊಟ್ಟಿದ್ದಾನೆ ನಾನುಮಾಡುತ್ತಿದ್ದೇನೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಅವರು ಮಾಡಲಿಲ್ಲ. ನಾನು ಮಾಡುತ್ತಿದ್ದರೇ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಶಾಸಕ ಪಠಾಣ ದೂರಿದರು. ಇದೇ ಸಂದರ್ಭದಲ್ಲಿ .ಸಮಾಜದ ಅಧ್ಯಕ್ಷ ಮಂಜುನಾಥ ಮಲ್ಲಾಡದ, ಕೆಎಂಎಫ್ ನಿರ್ದೇಶಕ ಶಂಕರಗೌಡ ವಾಟೀಲ, ಗುಡ್ಡಪ್ಪ ಜಲದಿ, ಮಲ್ಲಮ್ಮ ಸೋಮನಕಟ್ಟಿ ರಮೇಶ ದುಗ್ಗತಿ, ಅಣ್ಣಪ್ಪ ಲಮಾಣಿ ಸೇರಿದಂತೆ ಸಮಾಜದ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 