ಲೋಕಾಪುರದಿಂದ ಧಾರವಾಡ ರೈಲ್ವೆ ಮಾರ್ಗ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ: ಸಂಸದ ಶೆಟ್ಟರ

ಲೋಕಾಪುರದಿಂದ ಧಾರವಾಡ ರೈಲ್ವೆ ಮಾರ್ಗ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ: ಸಂಸದ ಶೆಟ್ಟರ I will sincerely try to implement the Lokapura-Dharwad railway line: MP Shettar

            ಬಾಗಲಕೋಟೆ 18:  ಸಮಗ್ರ ಉತ್ತರ ಕರ್ನಾಟಕದ ರೈಲ್ವೆ ಯೋಜನೆಗಳ ಅನುಷ್ಠಾನ ಮತ್ತು ಅಭಿವೃದ್ಧಿ ಕುರಿತು ಸೋಮವಾರ ಹುಬ್ಬಳ್ಳಿಯ ಜನರಲ್ ಮ್ಯಾನೇಜರ್ ಅವರ ಕಚೇರಿಯಲ್ಲಿ ರೈಲ್ವೆ ಜನರಲ್ ಮ್ಯಾನೇಜರ್ ಮುಕುಲ್ ಶರಣ ಮಾತೂರ ಅವರ ಅಧ್ಯಕ್ಷತೆಯಲ್ಲಿ ಸಂಸದರಾದ ಜಗದೀಶ ಶೆಟ್ಟರ ಮತ್ತು ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷರಾದ ಕುತ್ಬುದ್ದಿನ್ ಕಾಜಿ ಹಾಗೂ ರಾಮದುರ್ಗ ರೈಲು ಹೋರಾಟ ಕ್ರಿಯಾ ಸಮಿತಿ ಮುಖಂಡರುಗಳು ಸಭೆ ನಡೆಸಿ ಸಮಗ್ರವಾಗಿ ಚರ್ಚಿಸಿದರು.  

             ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷರಾದ ಕುತ್ಬುದ್ದಿನ್ ಕಾಜಿಯವರು “ಬಾಗಲಕೋಟೆಯಿಂದ ಲೋಕಾಪುರಕ್ಕೆ ಪ್ಯಾಸೆಂಜರ್ ರೈಲು ಓಡಿಸಬೇಕು. ಮುಂಬೈ ಬೆಂಗಳೂರು ಸೂಪರ ಫಾಸ್ಟ್‌ ಎಕ್ಸಪ್ರೆಸ್ ರೈಲನ್ನು ಬಾಗಲಕೋಟ ವಿಜಯಪುರ ಮಾರ್ಗದಲ್ಲಿ ಓಡಿಸಬೇಕು. ಸೊಲ್ಲಾಪುರ-ತಿರುಪತಿ ಹೊಸ ರೈಲನ್ನು ವಿಜಯಪುರ ಗುಂಠಕಲ ಮತ್ತು ಹುಬ್ಬಳ್ಳಿ ಬೀದರ ಗೆ ನೇರವಾಗಿ ರೈಲು ಪ್ರಾರಂಭಿಸಬೇಕು. ಸೋಲಾಪುರ - ಹುಬ್ಬಳ್ಳಿ ಇಂಟರ್ ಸಿಟಿ ರೈಲನ್ನು ವಾಸ್ಕೋಡಿಗಾಮಾ ವರೆಗೆ ವಿಸ್ತರಣೆ ಮಾಡಬೇಕು. ಅದರ ಜತೆ ಲೋಕಾಪೂರ ಟು ಧಾರವಾಡ ನೂತನ ರೈಲ್ವೆ ಮಾರ್ಗ ಯೋಜನೆಯನ್ನು ಕೂಡಲೇ ಅನುಷ್ಠಾನಗೊಳಿಸ ಬೇಕೆಂದು ಆಗ್ರಹಿಸಿ ಕುತ್ಬುದ್ದಿನ್ ಕಾಜಿಯವರು ರೈಲ್ವೆ ಮಹಾಪ್ರಬಂಧಕರಿಗೆ ಹಾಗೂ ಸಂಸದ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದರು.ನಂತರ ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದರಾದ ಜಗದೀಶ ಶೆಟ್ಟರ ಅವರು ಮಾತನಾಡಿ “ಲೋಕಾಪುರದಿಂದ ಧಾರವಾಡ ನೂತನ ರೈಲು ಮಾರ್ಗ ಯೋಜನೆಯು ಅತ್ಯಂತ ಲಾಭದಾಯಕ ಯೋಜನೆಯಾಗಿದೆ.

          ಲೋಕಾಪುರದಿಂದ ಧಾರವಾಡ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಅಗತ್ಯ ಅನುಮೋದನೆ ಕೋರಿ ಈಗಾಗಲೇ ರೈಲ್ವೆ ಬೋರ್ಡ್‌ ಗೆ ಪತ್ರ ಬರೆದಿರುವುದಾಗಿ ರೈಲ್ವೆ ಅಭಿಯಂತರರು ಮಾಹಿತಿ ನೀಡಿದರು.ಈ ಬಗ್ಗೆ ರೈಲ್ವೆ ಬೋರ್ಡ್‌ ನಿಂದ ಅನುಮೋದನೆ ಪಡೆಯಲು ನಿರಂತರ ಪ್ರಯತ್ನ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದು ಹೇಳಿದರು.ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷರಾದ ಕುತ್ಬುದ್ದಿನ ಕಾಜಿ, ರೈತ ಮುಖಂಡ ಸುಭಾಸ್ ಶಿಬರೂರ್, ಶಾಲಿನಿ ಈಳಗೇರ, ರೂಪಾ ಅರಮನಿ, ಮೈನುದ್ದಿನ್ ಖಾಜಿ, ರಾಮದುರ್ಗ ರೈಲು ಹೋರಾಟ ಕ್ರಿಯಾ ಸಮಿತಿ ಮುಖಂಡರುಗಳಾದ ಶಫಿ ಬೆಣ್ಣಿ, ಗೈಬು ಜೈನೆಖಾನ, ಎಂ ಕೆ ಯಾದವಾಡ, ಚಂದ್ರು ಮಾಳದಕರ್, ಪಡಿಯಪ್ಪ ಕ್ವಾರಿ ಸೇರಿದಂತೆ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.