ಗ್ರಾಮದಲ್ಲಿ ಉಳಿದಿರುವ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುತ್ತೇನೆ : ಶಾಸಕ ಪಠಾಣ
I will resolve the remaining problems in the village step by step: MLA Pathana
ಶಿಗ್ಗಾವಿ 18 : ಈ ಹಿಂದೆ ಕ್ಷೇತ್ರದಲ್ಲಿ ಅಧಿಕಾರದಲ್ಲಿದ್ದವರು ಕನಕದಾಸರನ್ನು ಕೇವಲ ಭಾಷಣಕ್ಕಾಗಿ ಸೀಮಿತಮಾಡಿಕೊಂಡಿದ್ದು, ಕನಕದಾಸರ ಜಯಂತಿಗೂ ಈ ಗ್ರಾಮಕ್ಕೆ ಬರುತ್ತಿರಲಿಲ್ಲ. ಗ್ರಾಮದಲ್ಲಿ ಇಪ್ಪತ್ತು ವರ್ಷಗಳಿಂದ ಉಳಿದಿರುವ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುತ್ತೇನೆ, ಸ್ವಲ್ಪ ಕಾಲಾವಕಾಶ ಕೊಡಿ. ಕನಕದಾಸರ ಜನ್ಮಸ್ಥಳದ ಅಭಿವೃದ್ಧಿಗಾಗಿ ಕನಕದಾಸ ಪ್ರಾಧಿಕಾರದಿಂದ 17 ಕೋಟಿ ಅನುದಾನ ತರಲು ಪಣತೊಟ್ಟು ಕುಳಿತಿದ್ದೇನೆ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು. ತಾಲೂಕಿನ ಬಾಡ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾಮಿಗಾರಿಗಳಿಗೆ ವಿವಿಧ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು ಬರುವ ದಿನಗಳಲ್ಲಿ ಪ್ರೌಢಶಾಲೆ ಪ್ರಾರಂಭಿಸಿ ವಸತಿ ಶಾಲೆ ತರುತ್ತೇನೆ. ಕನಕದಾಸರ ಆಶಯದಂತೆ ಬದುಕಲು ಪ್ರಯತ್ನಿಸುತ್ತೇನೆ.
ಬಾಡ ಗ್ರಾಮದ ಬಂಕನಾಥ ದೇವಸ್ಥಾನಕ್ಕೆ 50 ಲಕ್ಷ ರೂ ಶಿಬಾರಕ್ಕೆ 10 ಲಕ್ಷ ರೂ ಮಾತಂಗಿ ಸಭಾಭವನಕ್ಕೆ 10 ಲಕ್ಷ ಅನುದಾನ ನೀಡಿ ಅಭಿವೃದ್ಧಿ ಮಾಡಲಾಗುತ್ತಿದೆ. ಇಲ್ಲಿನ ಅರಮನೆಯನ್ನು 1 ಕೋಟಿ ವೆಚ್ಚದಲ್ಲಿ ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ಸಿಸಿ ರಸ್ತೆಗಳು ಗಟಾರ ಸೇರಿದಂತೆ ಸುಮಾರು 4 ಕೋಟಿ ವೆಚ್ಚದಲ್ಲಿ ಗ್ರಾಮ ಅಭಿವೃದ್ಧಿ ಮಾಡಲಾಗುತ್ತಿದೆ. ಈಶ್ವರಿ ಮರಿಯಮ್ಮ, ದೇವಸ್ಥಾನ, ಹನುಮಂತ ದೇವಸ್ಥಾನ ಸೇರಿದಂತೆ ದರ್ಗಾದ ಅಭಿವೃದ್ಧಿಗಾಗಿ ಈ ಗ್ರಾಮದ ಜನ ಬೇಡಿಕೆಗಳನ್ನು ಇಟ್ಟಿದ್ದು, ಮುಂಬರುವ ದಿನಗಳಲ್ಲಿ ಹಂತ ಹಂತವಾಗಿ ಅನುದಾನ ನೀಡಲಾಗುತ್ತದೆ. ಈ ಗ್ರಾಮದಲ್ಲಿ ಸುಮಾರು 40 ಮನೆಗಳಿಗೆ ಪಟ್ಟಾ ನೀಡುವ ಕಾರ್ಯ ಪೂರ್ಣವಾಗಿದೆ. 35 ಮನೆಗಳ ಪಟ್ಟಾ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗುಡ್ಡಪ್ಪ ಜಲದಿ, ಶಂಬು ಆಜೂರ, ಎಂ.ಎನ್. ವೆಂಕೋಜಿ, ಶಖಿನಾಭಿ ಮುಲ್ಲಾನವರ, ಸುರೇಶ ಚಿನ್ನಪ್ಪನವರ, ಬಂಕಪ್ಪ ಬಾರಿಗಿಡದ, ನಾಗರಾಜ ವೆಂಕೋಜಿ, ಜನ್ನತಬ್ಬಿ ಮುಲ್ಲಾ, ಗುರುನಗೌಡ್ರ ಪಾಟೀಲ, ಬಂಕಪ್ಪ ತೊಂಡೂರ, ಗುರುಪಾದಪ್ಪ ಕುಂದೂರ, ರಮೇಶ ಮಾಲತೇಶ ಕಮ್ಮಾರ, ಬಾರಿಗಿಡದ, ಮಜೀದಕಾನ ಮಾಸನಕಟ್ಟಿ, ಅನ್ವರ ಮಾಸನಕಟ್ಟಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 