ಬಡವರ ಸೇವೆಯಲ್ಲಿ ಹೆತ್ತವರನ್ನು ಕಾಣಬಯಸುತ್ತೇನೆ: ಮನಿಯಾರ
I want to see my parents serving the poor: Maniyara
ಬಡವರ ಸೇವೆಯಲ್ಲಿ ಹೆತ್ತವರನ್ನು ಕಾಣಬಯಸುತ್ತೇನೆ: ಮನಿಯಾರ
ತಾಳಿಕೋಟಿ 10; ಕಳೆದ 12 ವರ್ಷಗಳಿಂದ ನನ್ನ ಹೆತ್ತವರ ಸ್ಮರಣಾರ್ಥವಾಗಿ ನಮ್ಮ ಟ್ರಸ್ಟ್ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಗಳೊಂದಿಗೆ ಇಂತಹ ಉಚಿತ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇನೆ. ಇದರಲ್ಲಿ ಯಾವ ರಾಜಕೀಯ ದುರುದ್ದೇಶವೂ ಇಲ್ಲ. ಇದು ಕೇವಲ ಬಡವರ ಸೇವೆಯಾಗಿದೆ ಎಂದು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಖ್ಯಾತ ಉದ್ಯಮಿ ಅಯ್ಯೂಬ ಮನಿಯಾರ ಹೇಳಿದರು.
ಶನಿವಾರ ಪಟ್ಟಣದ ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ ತಂದೆ ಮದನಸಾಬ ಹಾಗೂ ತಾಯಿ ಅಮೀನಾಬಿ ಮನಿಯಾರ ಇವರ ಸ್ಮರಣಾರ್ಥವಾಗಿ ಹಮ್ಮಿಕೊಂಡ ಕಣ್ಣಿನ ಉಚಿತ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರಕ್ಕೆ ಚಾಲನೆ ಕೊಟ್ಟು ಅವರು ಮಾತನಾಡಿದರು.
ಈ ಬಾರಿ ಮನಿಯಾರ ಚಾರಿಟೇಬಲ್ ಟ್ರಸ್ಟ್‌ನಿಂದ ಶ್ರಾವಣ ಸೌಹಾರ್ದ ಕೂಟವನ್ನು ಆಗಸ್ಟ್ 20ರಂದು ಮುದ್ದೇಬಿಹಾಳ ಪಟ್ಟಣದಲ್ಲಿ ಏರಿ್ಡಸಿದ್ದೇನೆ. ಈ ಪವಿತ್ರ ಮಾಸದ ಸಂಭ್ರಮದ ಭಾಗವಾಗಿ ನನ್ನ ಹೆತ್ತವರ ಸ್ಮರಣಾರ್ಥ ಎರಡೂ ತಾಲೂಕುಗಳಲ್ಲಿ ಈ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದ್ದೇನೆ. ನನಗೆ ಈ ಸೇವಾ ಕಾರ್ಯದಲ್ಲಿ ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥ ಡಾ.ಪ್ರಭುಗೌಡ ಲಿಂಗದಳ್ಳಿ ಅವರು ನಿರಂತರ ಸಹಕಾರ ನೀಡುತ್ತಾ ಬಂದಿದ್ದಾರೆ ಅವರಿಗೆ ನಾನು ಋಣಿಯಾಗಿದ್ದೇನೆ. ಈ ಶಿಬಿರದಲ್ಲಿ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದವರನ್ನು ಸಂಪೂರ್ಣ ಉಚಿತವಾಗಿ ಅವರ ಶಸ್ತ್ರ ಚಿಕಿತ್ಸೆಯನ್ನು ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ ಮಾಡಿಸಿ ಅವರ ಮನೆಗಳಿಗೆ ತಲುಪಿಸುವ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದರು.
ಅನುಗ್ರಹ ಕಣ್ಣಿನ ಆಸ್ಪತ್ರೆ ನೇತೃತ್ವದಲ್ಲಿ ನಡೆದ ನೇತ್ರ ತಪಾಸಣೆಯಲ್ಲಿ ಒಟ್ಟು 256 ಜನರ ತಪಾಸಣೆ ಮಾಡಲಾಗಿದ್ದು ಅದರಲ್ಲಿ 103 ಜನಕ್ಕೆ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಗಿದೆ. ಈ ಉಚಿತ ಆರೋಗ್ಯ ಶಿಬಿರದಲ್ಲಿ ಅನುಗ್ರಹ ಆಸ್ಪತ್ರೆಯ ನೇತ್ರ ತಜ್ಞರು ತಪಾಸಣೆ ನಡೆಸಿದರು.
ಸ್ಥಳೀಯ ಲೋಟಸ್ ಕಾಲೇಜ್ ವಿದ್ಯಾರ್ಥಿಗಳು ಹಾಗೂ ಅನುಗ್ರಹ ಆಸ್ಪತ್ರೆಯ ಸಿಬ್ಬಂದಿಗಳು ಸಹಾಯಕರಾಗಿ ಕಾರ್ಯನಿರ್ವಸಿದರು. ಗಣ್ಯರಾದ ರೋಷನ್ ಡೋಣಿ, ಎಂ.ಎ. ಮೇತ್ರಿ, ದಾದಾ ಎತ್ತಿನಮನಿ, ಕಾಸಿಂ ಅಲಿ ಮನ್ಸೂರ, ಮೈನು ಕೊರ್ತಿ, ಶಫೀಕ ಇನಾಮದಾರ, ಪರವೀನ ಮನಿಯಾರ, ಸದ್ದಾಮ್ ಗುರುಗುಂಟಾ, ಬಾಬಾ ಎಕೀನ, ಮಹೆಬೂಬ ಎಕೀನ, ಆಪ್ತಾಬ್ ಮನಿಯಾರ, ನೂರ ನಮಾಜಕಟ್ಟಿ ಮತ್ತಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 