ಪ್ರತಿಪಕ್ಷಗಳ ಆರೋಪಗಳಿಗೆ ನನ್ನಲ್ಲಿ ಉತ್ತರವಿಲ್ಲ: ಉತ್ತರ ಏನಿದ್ದರೂ ನನ್ನ ಕೆಲಸ ಕಾರ್ಯಗಳು ಹೇಳುತ್ತಿವೆ- ಕೋಳಿವಾಡ
I have no answer to the opposition's allegations: Whatever the answer, my actions speak for themsel
ರಾಣೆಬೆನ್ನೂರು 16 : ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ. ಹಾವೇರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಆರು ಶಾಸಕರು ಇದ್ದಾರೆ ನನಗಿಂತಲೂ ಹಿರಿಯರು ಅವರಾಗಿದ್ದಾರೆ. ಆದ್ದರಿಂದ ಸಚಿವನಾಗುವ ಆಸೆ ನನಗೆ ಸದ್ಯಕ್ಕಂತೂ ಇಲ್ಲ ಎಂದು ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಶಾಸಕ ಪ್ರಕಾಶ್ ಕೆ ಕೋಳಿವಾಡ ಸ್ಪಷ್ಟಪಡಿಸಿದರು. ಅವರು ಶುಕ್ರವಾರ ಇಲ್ಲಿನ ಮೃತ್ಯುಂಜಯ ನಗರದ ಶ್ರೀ ಚನ್ನೇಶ್ವರ ಮಠದ ಆವರಣದಲ್ಲಿ ನಡೆದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನಂತರ ಮಾಧ್ಯಮದವರ ( ತಾವು ಸಚಿವ ಸ್ಥಾನದ ಆಕಾಂಕ್ಷಿಯೇ ) ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆಸಿದರು. ಮಂತ್ರಿ ಮಂಡಲ ವಿಸ್ತರಣೆಯಲ್ಲಿ ತಮ್ಮ ಹೆಸರು ಸಹ ಕೇಳಿ ಬರುತ್ತಲ್ಲಿದೆ ತಮಗೆ ಅವಕಾಶ ಇದೆಯೇ?. ಸದ್ದೆ ಇಲ್ಲ.. ಜಿಲ್ಲೆಯ ಯಾರು ಶಾಸಕರಲ್ಲಿ 4 ಶಾಸಕರ ಹೆಸರುಗಳು ಬಲವಾಗಿ ಕೇಳಿ ಬರುತ್ತಲ್ಲಿವೆ. ಯಾರು ಎನ್ನುವುದು ಇಲ್ಲಿಯವರೆಗೂ ಸ್ಪಷ್ಟವಿಲ್ಲ. ಯಾರಿಗೆ ನೀಡಿದರೂ ಸಹ ತಮಗೆ ಸಂತೋಷವಿದೆ ಎಂದು ಉತ್ತರಿಸಿದರು.
ಮಂತ್ರಿ ಮಂಡಲ ವಿಸ್ತೀರ್ಣ ಕಾರ್ಯ ಶೀಘ್ರದಲ್ಲಿ ಆಗಬಹುದು ಎನ್ನುವ ನಂಬಿಕೆಯು ನನ್ನದು ಆಗಿದೆ. 9 ಬಾರಿ ಸಿ ಎಲ್ ಸಿ ಸಮಿತಿ ಸಭೆ ನಡೆದರೂ, ಈ ಕುರಿತು ಇಲ್ಲಿವರೆಗೂ ಯಾವುದೇ ಚರ್ಚೆಗಳಾಗಿಲ್ಲ. ಎಂದರು. ರಾಣೆಬೆನ್ನೂರು ಮತ್ತು ರಾಣೆಬೆನ್ನೂರು ತಾಲೂಕಿನಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಿದೆ. ಈಗಾಗಲೇ ಕಳೆದ ತಿಂಗಳನಿಂದ ಹಲವು ಕೋಟಿಗಳ ಅಭಿವೃದ್ಧಿ ಕಾರ್ಯಗಳು ನಡೆದಿರುವುದು ತಮ್ಮ ಗಮನಕ್ಕೆ ಇದೆ. ಈ ಕುರಿತು ಯಾವುದೇ ಜಾತಿ, ಮತ, ಪಕ್ಷ, ಭೇದ,ಭಾವ, ತಾರತಮ್ವಿಲ್ಲ. ಪ್ರತಿಯೊಂದು ವಾರ್ಡಗಳಲ್ಲಿ ಅಲ್ಲಿ ಆಗಬೇಕಾದ, ಆಗಬಹುದಾದ, ಅಗತ್ಯ ಮತ್ತು ಅವಶ್ಯ ಅಭಿವೃದ್ಧಿ ಕಾರ್ಯಗಳು ಕುರಿತು ತಾವು ಪಟ್ಟಿ ಮಾಡಿದ್ದು ಹಂತ, ಹಂತವಾಗಿ ಎಲ್ಲವೂ ನೆರವೇರಿಸುವ ಸಂಕಲ್ಪ ತೊಟ್ಟಿದ್ದೇನೆ, ಪ್ರತಿಪಕ್ಷದವರು ಮಾಡುವ ಆರೋಪಗಳಿಗೆ ನನ್ನಲ್ಲಿ ಯಾವುದೇ ಉತ್ತರವಿಲ್ಲ. ಉತ್ತರ ಏನಿದ್ದರೂ ನಾವು ನಡೆಸುತ್ತಿರುವ ಆಡಳಿತ ಮತ್ತು, ಅಭಿವೃದ್ಧಿ ಕಾರ್ಯಗಳೇ ಹೇಳುತ್ತಿವೆ ಎಂದು ಸ್ಪಷ್ಟಪಡಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 