ಉ. ಕರ್ನಾಟಕ ಮೇಲಾಗಿರುವ ಅನ್ಯಾಯದಿಂದ ಪ್ರತೇಕ ರಾಜ್ಯ ಕೇಳಿದ್ದೇನೆ : ಕಾಗೆ

ಉ. ಕರ್ನಾಟಕ ಮೇಲಾಗಿರುವ ಅನ್ಯಾಯದಿಂದ ಪ್ರತೇಕ ರಾಜ್ಯ ಕೇಳಿದ್ದೇನೆ : ಕಾಗೆ  I have asked for a separate state due to the injustice done to Karnataka said Kage

ಲೋಕದರ್ಶನ ವರದಿ 

ಬೆಳಗಾವಿ ಸುವರ್ಣ ಸೌಧ 11: ನನ್ನ ಮತಕ್ಷೇತ್ರ ಸೇರಿ ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯ ವಿರುದ್ದವಾಗಿ ನಾನು ಪ್ರತೇಕ ರಾಜ್ಯಕ್ಕಾಗಿ ಧ್ವನಿ ಎತ್ತಿರುವೆ. ಈ ಕುರಿತು ರಾಷ್ಟ್ರಪತಿ ಹಾಗೂ ಪ್ರಧಾನಿ ಮತ್ತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವದಿದ್ದು, ನಾನು ಯಾವದೇ ಪಕ್ಷ ಅಥವಾ ಸರಕಾರದ ವಿರುದ್ದ ಮಾತನಾಡಿಲ್ಲ ಎಂದು ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ವಿಧಾನ ಸಭೆಗೆ ಸ್ಪಷ್ಟಪಡಿಸಿದರು.   

ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನ ವೇಳೆ ಗುರುವಾರ ಮಧ್ಯಾಹ್ನ ವಿಧಾನ ಸಭೆಯ ಕಲಾಪದಲ್ಲಿ ಉತ್ತರ ಕರ್ನಾಟಕದ ಅಭಿವೃದ್ದಿಯ ವಿಶೇಷ ಚರ್ಚೆಯಲ್ಲಿ ಪಾಲ್ಗೋಂಡು ಮಾತನಾಡಿದ ಅವರು, ನಾನು ಉತ್ತರ ಕರ್ನಾಟಕದ ನೀಡಿ ಎಂದು ಕೇಳಿದಾಗ ಕೆಲ ಸಂಘಟನೆಗಳು ನನಗೆ ಬೆಂಬಲ ನೀಡಿದರೆ ಇನ್ನು ಕೆಲವು ವಿರೋಧ ವ್ಯಕ್ತ ಮಾಡಿದವು. ಆದರೆ ನಮ್ಮ ಭಾಗ ಈ ಸಮಸ್ಯೆಗಳನ್ನು ಯಾರ ಮುಂದೆ ಹೇಳಬೇಕು ಎಂದರು. ಅಲ್ಲದೆ ಉತ್ತರ ಕರ್ನಾಟಕದವರಾದ ನಾವು ಸರಕಾರ ಕಡೆಗೆ ಕೈ ಮುಗಿದು ಭೀಕ್ಷಕರ ರೀತಿ ಭೀಕ್ಷೆ ಬೇಡಿದರು ಅಲ್ಪ ಭೀಕ್ಷೆ ಹಾಕುವಂತಾ ಈ ಭಾಗದ ಶಾಸಕರ ಪರಿಸ್ಥಿತಿ ಆಗಿದೆ ಎಂದು ದೂರಿದರು.   

ನಮ್ಮ ಭಾಗವು ಕೃಷ್ಟಾ ನದಿ ತಟದಲ್ಲಿ ಬರುದರಿಂದ ಅಲ್ಲಿ ನೀರು ನಿಂತು ಕೃಷಿ ಭೂಮಿಯು ಸವಳು ಜವಳಾಗುತ್ತಿವೆ. ಇದಕ್ಕಾಗಿ ಸರಕಾರಕ್ಕೆ ಹಲವಾರು ಬಾರಿ ವಿನಂತಿಸಿದರು ಪ್ರಯೋಜನೆ ಆಗಿಲ್ಲ.  ಇದಕ್ಕಾಗಿ ಬಜೆಟ್‌ನಲ್ಲಿ ಅನುದಾನ ಕೂಡಾ ನೀಡಿಲ್ಲ. ಮೂಗಿಗೆ ತುಪ್ಪ ಸವರುವ ಕೆಲಸವನ್ನು ಸರಕಾರ ಮಾಡುತ್ತಿವೆ. ಈ ಸಮಸ್ಯೆಯು ಬೆಳಗಾವಿ, ಬಾಗಲಕೋಟ, ವಿಜಯಪುರ ಜಿಲ್ಲೆಗಳಲ್ಲೂ ಇದ್ದು, ಈ ಬಗ್ಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವಣೆ ಒಂದನ್ನು ಸಲ್ಲಿಸಿ ದುಡ್ಡು ತಂದರೆ ಈ ಭಾಗಕ್ಕೆ ಒಳ್ಳೆಯದಾಗುತ್ತದೆ ಎಂದರು.  

ಇಲ್ಲಿ ಬಿತ್ತನೆಗೆ ಬರಲಾರದೆ ಬರಡು ಭೂಮಿ ಆಗುತ್ತಿದೆ. ಇದರಿಂದ ನಮ್ಮ ಭಾಗದ ಜನರು ಮಹಾರಾಷ್ಟ್ರ, ಗೋವಾ ಸೇರಿ ಬೇರೆ ಕಡೆಗೆ ಕೆಲಸವನ್ನು ಆರಿಸಿ ಹೋಗುತ್ತಿದ್ದಾರೆ. ಇದರ ಕುರಿತು ಸರಕಾರ ಚಿಂತನೆ ಮಾಡಬೇಕಿದೆ ಎಂದು ಒತ್ತಾಯಿಸಿದರು. ಇದರನ್ನು ಸರಿಪಡಿಸಲು ಈ ಭಾಗದ ಪ್ರತಿ ಮತ ಕ್ಷೇತ್ರಕ್ಕೆ ಪ್ರತಿವರ್ಷ 10 ಕೋಟಿ ಕೊಟ್ಟರೆ ಈ ಸಮಸ್ಯೆ ಪರಿಹರಿಸಬಹುದಾಗಿದೆ. ಅಲ್ಲದೆ ನನ್ನ ಕ್ಷೇತ್ರದಲ್ಲಿ ಬರುವ ಜೂಗುಳ, ಮಂಗಾವತಿ ಶಾಹಾಪೂ ಈ ಮೂರು ಗ್ರಾಮಗಳನ್ನು ಮೊದಲು ಸ್ಥಳಾಂತರಿಸಬೇ ಎಂದು ಹೇಳಿದರು. 

ಉಗಾರ ಕುಡಚಿ ಸೇತುವೆ ಕಾರ‌್ಯ ಕಳೆದ 2005ರಿಂದ ಈ ವರೆಗೆ ಪೂರ್ಣ ಆಗಿಲ್ಲ. ಕಲ್ಯಾಣ ಕರ್ನಾಟಕಕ್ಕೆ 5000 ಕೋಟಿ ಕೋಡತಾರೆ ಆದರೆ ನಮಗೆ ತಾರತಮ್ಯ ಮಾಡತಾರೆ. ನಮಲ;ಲಿ ಕೂಡಾ ನೀರಾವರಿ ಯೋಜನೆಗಳು, ಶಿಕ್ಷಣ, ಆರೋಗ್ಯ ಕ್ಷೇತ್ರಗಳು ಹಿಂದುಳಿದಿವೆ ಎಂದರು. ಇದಕ್ಕೆ ಧ್ವನಿಗೂಡಿಸಿದ ವಿಪಕ್ಷ ಶಾಸಕ ಸಿಸಿ ಪಾಟೀಲ ಅವರು ಕಾಗೆ ಅವರ ಬಹದಿನಗಳ ಬೇಡಿಗಳು ಇವೆ. ಅವನ್ನು ಪರಿಹರಿಸಲು ಒಂದು ಕಮಿಟಿ ಮಾಡಿ ಪರಿಹಾರ ಮಾಡಿ ಎಂದರು. ಇದಕ್ಕೆ ಪ್ರತಿಕ್ರಿಯೆಸಿದ ಶಾಸಕ ಅರಗ ಜ್ಞಾನೇಂದ್ರ ಅವರು, ಆಡಳಿತ ಪಕ್ಷದ ಸದಸ್ಯರ ಪರಿಸ್ಥಿತಿ ಹೀಗಾದರೆ, ನಮ್ಮ ವಿಪಕ್ಷ ಸದಸ್ಯರ ಪರಿಸ್ಥಿತಿ ಎನು ಎಂದು ಪ್ರಶ್ನಿಸಿದರು.  

ಹಕ್ಕುಚ್ಯುತಿ ಮಂಡನೆ ಮಾಡಿ ವರ್ಷ ಕಳೆದರು ಕ್ರಮ ಇಲ್ಲ  

ಉತ್ತನ್ನ ಅಧಿಕಾರಿ ಕಟಾರಿಯಾ ಅವರ ವಿರುದ್ದ ಒಂದು ವರ್ಷದ ಹಿಂದೆ ಹಕ್ಕುಚ್ಯುತಿ ಮಂಡನೆ ಮಾಡಿದ್ದರೂ ಈ ವರೆಗೆ ಕ್ರವಾಗಿಲ್ಲ. ಇಂತ ಪರಿಸ್ಥಿತಿ ನಾವು ಯಾರಿಗೆ ಹೇಳಬೇಕು ಹೇಳಿ ಎಂದು ವಿಧಾನ ಸಭೆಯಲ್ಲಿ ತಮ್ಮ ಅಳನ್ನು ತೋಡಿಕೊಂಡರು. ಇದಕ್ಕೆ ಮಧ್ಯ ಪ್ರವೇಶ ಮಾಡಿದ ವಿಪಕ್ಷ ನಾಯಕ ಆರ್‌. ಅಶೋಕ ಅವರು ಓರ್ವ ಶಾಸಕರ ಸ್ಥಿತಿ ಈ ರೀತಿಯಾದರೇ ಹೇಗೆ ಸರಜಕಾರ ಏನು ಮಾಡುತ್ತಿದೆ ಎಂದು ಸರಕಾರದ ವಿರುದ್ದ ಹಾಗೂ ಅಧಿಕಾರಿ ವರ್ಗದ ವಿರುದ್ದ ಕಿಡಿ ಕಾರಿದರು.