ತಲ್ಲೂರ ಗ್ರಾಮದಲ್ಲಿನ ವೈನ್ ಶಾಪ್ ಸ್ಥಗಿತಗೊಳಿಸುವಂತೆ ಗ್ರಾಮದ ನೂರಾರು ಮಹಿಳೆಯರು ವೈನ್ ಶಾಪ್ ಎದುರು ಪ್ರತಿಭಟನೆ
Hundreds of women from the village protest in front of the wine shop in Tallura village demanding i
ಯರಗಟ್ಟಿ 24 : ತಾಲೂಕಿನ ತಲ್ಲೂರ ಗ್ರಾಮದಲ್ಲಿರುವ ವೀರೆಶ ವೈನ್ ಶಾಪ್‌ನ್ನು ಕೂಡಲೇ ಬಂದ್ ಮಾಡಿಸಬೇಕು ಎಂದು ಆಗ್ರಹಿಸಿ ತಲ್ಲೂರ ಗ್ರಾಮದ ನೂರಾರು ಮಹಿಳೆಯರು ಗ್ರಾಮದ ಯುವಕ ನೇತೃತ್ವದಲ್ಲಿ ಮಂಗಳವಾರ ವೈನ್ ಶಾಪ್ ಎದುರು ಸುಮಾರು ಒಂದು ಗಂಟೆಗೂ ಅಧಿಕಕಾಲ ಪ್ರತಿಭಟನೆ ನಡೆಸಿದರು. ಪ್ರತಿದಿನ ಕೆಲಸಕ್ಕೆಂದು ಹೊಲ ಗದ್ದೆಗಳಿಗೆ ಹೋಗುವ ಕೂಲಿಕಾರ್ಮಿಕರಿಗೆ ಹಾಗೂ ಮಹಿಳೆಯರಿಗೆ ಮದ್ಯದ ಅಂಗಡಿ ಇರುವುದರಿಂದ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ.
ಮದ್ಯ ವ್ಯಸನಿಗಳು ರಸ್ತೆಯಲ್ಲಿ ಹೋಗುವ ಮಹಿಳೆಯರನ್ನು ಹಾಗೂ ಮಕ್ಕಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಶಾಲೆ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಯುವಕರು ಎಲ್ಲಿ ಮದ್ಯವೇಸನಕ್ಕೆ ಅಂಟಿಕೊಳ್ಳುತ್ತಾರೋ ಎಂಬ ಆತಂಕ ಈ ಭಾಗದ ಪಾಲಕರನ್ನು ಕಾಡುತ್ತಿದೆ. ಬೆಳಗ್ಗೆಯಿಂದ ರಾತ್ರಿವರೆಗೂ ಮದ್ಯವ್ಯಸನಿಗಳು ಕುಡಿದ ಬಾಟಲಿಗಳನ್ನು ರಸ್ತೆಯ ಮೇಲೆ ಎಸೆಯುತ್ತಿರುವುದರಿಂದ ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ತುಂಬಾ ಸಮಸ್ಯೆಯಾಗುತ್ತಿದೆ ಎಂದು ಪ್ರತಿಭಟನಾನಿರತ ಮಹಿಳೆಯರು ತಮ್ಮ ಅಳಲು ತೋಡಿಕೊಂಡರು.
ವೈನ್ ಶಾಪ್‌ನಿಂದ ಮದ್ಯ ಖರೀದಿಸುವ ಪುಂಡರು ತಲ್ಲೂರ ಗ್ರಾಮದ ಬಳಿಯ ರೈತರ ಜಮೀನುಗಳನ್ನೇ ಮದ್ಯಪಾನಕ್ಕೆ ಆಯ್ಕೆಮಾಡಿಕೊಂಡಿದ್ದಾರೆ. ಹೊಲಗಳಲ್ಲಿ ಕುಳಿತುಕೊಂಡು ಮದ್ಯ ಸೇವಿಸುತ್ತಿರುವುದರಿಂದ ಜಮೀನಿನಲ್ಲಿ ಗಾಜಿನ ಬಾಟಲಿಗಳನ್ನು ಅಲ್ಲೇ ಎಸೆಯುವುದು ಹಾಗೂ ಒಡೆಯುವುದು ಮಾಡುತ್ತಿದ್ದಾರೆ. ಅದರಿಂದ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗುವಾಗ ಕಾಲಿಗೆ ಗಾಯ ಮಾಡಿಕೊಳ್ಳುವಂತಾಗಿದೆ ಎಂದು ಅಳಲು ತೋಡಿಕೊಂಡರು.
ತಲ್ಲೂರ ಗ್ರಾಮದಲ್ಲಿನ ವೈನ್‌ಶಾಪ್ ಇರುವುದರಿಂದ ಹೆಚ್ಚಾಗಿ ಗ್ರಾಮದ ಹಾಗೂ ಸುತ್ತ-ಮುತ್ತಲಿನ ಊರಿನ ಯುವಕರು ಮತ್ತು ರೈತರು ಮದ್ಯ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ವೆ?ನ್ ಶಾಪ್‌ನಿಂದ ಮದ್ಯ ಸೇವಿಸಿದ ಅನೇಕ ಯುವಕರು ಹಾಗೂ ರೈತರು ನಶೆಯಲ್ಲಿಯೇ ವಾಹನ ಸಂಚಾರ ಮಾಡಿದಕ್ಕೆ ಅನೇಕರು ಬೆ?ಪಾಸ್ ರಸ್ತೆಯಲ್ಲಿ ಅಪಘಾತಕ್ಕೆ ಬಲಿಯಾಗಿದ್ದಾರೆ. ಇದರಿಂದ ಈಗಾಗಲೇ ಅನೇಕ ಬಡ ಕುಟುಂಬಗಳು ಬೀದಿ ಪಾಲಾಗಿವೆ. ಆದ್ದರಿಂದ ಕೂಡಲೇ ತಾಲೂಕಾಡಳಿತ ಬಡವರ-ರೈತರ ಹಾಗೂ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ವೈನ್‌ಶಾಪ್‌ನ್ನು ಬಂದ್ ಮಾಡಿಸಬೇಕು.
ಈಗಾಗಲೇ ಈ ವಿಷಯವನ್ನು ಅನೇಕ ಬಾರಿ ಗ್ರಾಮ ಪಂಚಾಯತ ಅಧಿಕಾರಿಗಳಿಗೆ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಒಂದು ವೇಳೆ ಇದೇ ರೀತಿ ತನ್ನ ನಿರ್ಲಕ್ಷ? ಭಾವನೆ ಮುಂದುವರಿಸಿದ್ದಲ್ಲಿ ಉಗ್ರಹೋರಾಟ ಅನಿವಾರ್ಯವಾಗಲಿದೆ. ವಾರದೊಳಗೆ ಅಬಕಾರಿ ಅಧಿಕಾರಿಗಳು ಹಾಗೂ ತಾಲೂಕಾಡಳಿತ ಸೂಕ್ತ ಕ್ರಮಕೈಗೊಳ್ಳದೇ ಇದ್ದಲ್ಲಿ ಮೊದಲ ಹಂತದಲ್ಲಿ ಗ್ರಾಮ ಪಂಚಾಯತ ಪಿಡಿಓ, ತಹಶೀಲ್ದಾರ ಕಚೇರಿ, ಅಬಕಾರಿ ಇಲಾಖೆ ಹಾಗೂ ಮುರಗೋಡ ಪೊಲೀಸ್ ಠಾಣೆಯ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು. ತಹಶೀಲ್ದಾರ ಹಾಗೂ ಮುರಗೋಡ ಠಾಣೆಯ ಮನವಿ ಸಲ್ಲಿಸಿದರು.
ಗ್ರಾಮದ ಮಹಿಳೆಯರಾದ ಸಕ್ಕುಬಾಯಿ ಉಗರಗೋಳ, ದ್ರೌಪದಿ ಪಾಟೀಲ, ಮಲ್ಲವ್ವ ಉಗರಗೋಳ, ದೀಪಾ ಮನ್ನಿಕೇರಿ, ಶಾಂತವ್ವ ಉಪ್ಪಾರ, ರಾಜೇಶ್ವರಿ ಮನ್ನಿಕೇರಿ, ಹನಮವ್ವ ಉಪ್ಪಾರ, ತವನವ್ವ ಜೊಲಾಪುರಿ, ಗೌರವ್ವ ಉಪ್ಪಾರ, ತಾಯವ್ವ ಉಗರಗೋಳ, ಸತ್ಯವ್ವ ಉಪ್ಪಾರ, ರಾಮವ್ವ ಮನ್ನಿಕೇರಿ, ರತ್ನವ್ವ ಕೋಟೂರ, ಮಾಸಿವ್ವ ಬಾಗವಾನ, ರಾಜವ್ವ ಬೇಟಗೇರಿ, ಮೀರಾಮಾ ಬಾಗವಾನ, ಬಸವ್ವ ಚಿಲಕಂಡಿ, ಮಹಾದೇವಿ ಮುಕ್ಕಾಣಿ, ಕಲ್ಲವ್ವ ಗಡ್ಮನವರ, ಮಾಬೂಬಿ ಬೈರಕದಾರ, ರತ್ನವ್ವ ಮಾದರ, ಕಾಶವ್ವ ಹೂಗಾರ, ಶೋಭಾ ಈಟಿ, ಲಕ್ಷ್ಮೀ ಮಾದರ, ಅನಸೂಯಾ ಉಗರಗೋಳ, ಅರುಣ್ ವನ್ನೂರ್,ಮಂಜು ಬಂದಕನವರ, ಫೇಕ್ಕಿರಾ್ಪ ಭಜಂತ್ರಿ ಮತ್ತಿತರರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 