ಹುಣಸಿಕಟ್ಟಿ ಜೋಡಿ ಬಸವೇಶ್ವರ ರಥೋತ್ಸವ ಶಾಂತಿ -ನೆಮ್ಮದಿಗೆ ಧರ್ಮದ ಆರಾಧನೆ ಅಗತ್ಯ- ಆನ್ವೇರಿ ಶ್ರೀಗಳು

ಹುಣಸಿಕಟ್ಟಿ   ಜೋಡಿ ಬಸವೇಶ್ವರ ರಥೋತ್ಸವ ಶಾಂತಿ -ನೆಮ್ಮದಿಗೆ ಧರ್ಮದ ಆರಾಧನೆ ಅಗತ್ಯ- ಆನ್ವೇರಿ ಶ್ರೀಗಳು  Hunasikatti Jodi Basaveshwara Rathotsava Peace - Religious worship is necessary for peace - Anveri

 ರಾಣೇಬೆನ್ನೂರು :23 ಭಾರತೀಯರು ಧರ್ಮದ ಆರಾಧಕರು, ಧರ್ಮವಿದ್ದಲ್ಲಿ ಸದಾಕಾಲ ಶಾಂತಿ ನೆಮ್ಮದಿ ಮತ್ತು ಭಾವೈಕ್ಯತೆ ಇರುತ್ತದೆ ಅಂತಹ ಧರ್ಮ ಸಂಸ್ಕೃತಿಯ ಮತ್ತು ಇತಿಹಾಸ ಹೊಂದಿರುವ ಗ್ರಾಮವು ಹುಣಸಿಕಟ್ಟಿ ಕ್ಷೇತ್ರವಾಗಿದೆ ಎಂದು ಗುಡ್ಡದ ಆನ್ವೇರಿ ವಿರಕ್ತ ಮಠದ ಮ.ನಿ.ಪ್ರ. ಶ್ರೀ ಶಿವಯೋಗಿಶ್ವರ ಮಹಾಸ್ವಾಮಿಗಳು ನುಡಿದರು.  ಅವರು ತಾಲೂಕಿನ ಇತಿಹಾಸ ಪ್ರಸಿದ್ಧ ಹುಣಸಿಕಟ್ಟಿ ಗ್ರಾಮದ   ಜೋಡಿ ಬಸವೇಶ್ವರ ಜಾತ್ರಾ ಮಹೋತ್ಸವ, ಹಾಗೂ 16ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಗ್ರಾಮೀಣ ಸಂಸ್ಕೃತಿ ಬಹು ದೊಡ್ಡ ಸಂಸ್ಕೃತಿ ದೇವರು ಮತ್ತು ಧರ್ಮ ಇವೆರಡರ ಮಧ್ಯೆ ಶಾಂತಿ ಸಮೃದ್ಧಿಯನ್ನು ಬಯಸುವವರು. 

ಭಾರತೀಯರ ಧರ್ಮ ಮತ್ತು ಧರ್ಮದ ಆಚರಣೆ  ಹಾಗೂ ಬಹುವಿಧ ಸಂಸ್ಕೃತಿಗೆ ವಿಶ್ವವೇ ನಮಿಸುತ್ತದೆ ಎಂದು ವಿವರಿಸಿ ಮಾತನಾಡಿದ ಅವರು, ಯಾವುದೇ ಗ್ರಾಮ, ನಾಡು ಮತ್ತು ದೇಶ  ಅಭಿವೃದ್ಧಿ ಕಾಣಬೇಕಾದರೆ, ಮಾನಸಿಕ ಶಾಂತಿ ಮತ್ತು ನೆಮ್ಮದಿಯಿಂದ ಮಾತ್ರ ಸಾಧ್ಯವಿದೆ ಎಂದರು.  ದಾವಣಗೆರೆ ಮತ್ತು ದೊಡ್ಡಪೇಟೆ ಅವರಗೊಳ್ಳದ ಮಠದ ಓಂಕಾರ  ಶಿವಾಚಾರ್ಯ ಮಹಾಸ್ವಾಮಿಗಳವರು ಮಾತನಾಡಿ, ಹುಣಸಿಕಟ್ಟಿ ಗ್ರಾಮವು ತನ್ನದೇ ಆದ ಧಾರ್ಮಿಕ ನಲೆಗಟ್ಟು ಹೊಂದಿದೆ. ಇಲ್ಲಿನ ಭಕ್ತರು ಸದಾ ಶಾಂತಿ ಪ್ರಿಯರು. ಹುಣಸಿಕಟ್ಟಿ  ವ್ಯಾಪ್ತಿಯ 15ಕ್ಕೂ ಹೆಚ್ಚು ಗ್ರಾಮಗಳ ನಾಗರಿಕರು ಅವರು ಎಲ್ಲೇ ಇದ್ದರೂ ತಮ್ಮ ಗ್ರಾಮದ ಯಾವುದೇ ಜಾತ್ರೆ ಉತ್ಸವ, ಹಬ್ಬ, ಹರಿದಿನಗಳಿರಲಿ ಗ್ರಾಮಕ್ಕೆ ಧಾವಿಸಿ, ಜಾತ್ರೋತ್ಸವದ ನಿಮಿತ್ತ ತೇರು ಎಳೆಯುವ ಸಂಪ್ರದಾಯ ಇಲ್ಲಿನ ವಿಶೇಷತೆಯಾಗಿದೆ ಎಂದು ತಮ್ಮ ಸಂದೇಶಾಮೃತ ನೀಡಿದರು.  

   ಧಾರ್ಮಿಕ  ಸಾಂಪ್ರದಾಯಕವಾಗಿ  ಜರುಗಿದ ವಿವಿಧ ವಿಧಾನಗಳ  ಕಾರ್ಯಕ್ರಮದಲ್ಲಿ, ಚನ್ನಗಿರಿ ಪಾಂಡೋಮಟ್ಟಿ  ವಿರಕ್ತ ಮಠದ ಡಾ. ಗುರುಬಸವ ಮಹಾಸ್ವಾಮಿಗಳು, ಹೂವಿನ ಕ್ಷೇತ್ರ ಹುಣಸಿಕಟ್ಟಿ ಸಿದ್ದಾಶ್ರಮದ ಜಯಾನಂದ ಸ್ವಾಮಿಗಳು ಸೇರಿದಂತೆ ಅನೇಕ ಮಠ -ಪೀಠಗಳ ಹರ-ಗುರು-ಚರಮೂರ್ತಿಗಳು ತಮ್ಮ ದಿವ್ಯ ಸಂದೇಶಾಮೃತ ನೀಡಿದರು. ತೇರು ಎಳೆಯುವ ಉತ್ಸವದಲ್ಲಿ ನಾಡಿನ ಸಾವಿರಾರು ಭಕ್ತರು ಪಾಲ್ಗೊಂಡು, ತಮ್ಮ ಭಕ್ತಿ ಸೇವೆಯನ್ನು ಸಲ್ಲಿಸಿದರು. ಜೋಡಿ ಬಸವೇಶ್ವರ ದೇವಸ್ಥಾನ ಸಮಿತಿ  ಅಧ್ಯಕ್ಷ ಮಲ್ಲೇಶಪ್ಪ ಭರಮಪ್ಪ ಬಾಳೆಮರದ ಅವರು ಅಧ್ಯಕ್ಷತೆ ವಹಿಸಿದ್ದರು. 

 ಹುಣಸಿಕಟ್ಟಿ ಸಿದ್ದಾಶ್ರಮದ ಅಧ್ಯಕ್ಷ ದೇವೇಂದ್ರ​‍್ಪ ಹ ಐರಣಿ, ಕೋಶಾಧ್ಯಕ್ಷ  ಸೋಮಶೇಖರ​‍್ಪ ನಾ ಜಂಗಳೇರ, ಉಪಾಧ್ಯಕ್ಷ ಮಲ್ಲಿಕಾರ್ಜುನ ಮಾ. ಜಂಗಳೇರ, ಡಾ. ಪ್ರವೀಣ ಖನ್ನೂರ, ಷಣ್ಮುಖಪ್ಪ ನಿಂ.ಕಂಬಳಿ, ಬಸವರಾಜ ಗು.ಕಂಬಳಿ, ಜಯಣ್ಣ ರಾಮನಗೌಡ್ರ, ರುದ್ರ​‍್ಪ ನಾ. ಬಾಳಿಕಾಯಿ, ಬಸವಕುಮಾರ ಜಂಗಳೇರ, ಎಸ್‌. ಹೆಚ್‌. ಹಿರೇಗೌಡರ, ಗ್ರಾಮದ ಮುಖಂಡರಾದ  ಗಿರಿಯಪ್ಪ ಚವಾಣ, ಧರ್ಮಪ್ಪ ಐರಣಿ, ಹನುಮಂತಪ್ಪ ಗೌಡ್ರ, ರಾಮಣ್ಣ ಗುತ್ತಲ, ಅಶೋಕ ಶಿ.ಜಂಗಳೇರ, ಬಸವರಾಜ ಮುಡದ್ಯಾವಣ್ಣನವರ, ಜಯಪ್ಪ ರಾಮನಗೌಡ್ರ, ಮಂಜಪ್ಪ ಕನಗೌಡ್ರ, ಚನ್ನಬಸಪ್ಪ ಮು. ಜಂಳೇರ, ಬಸಪ್ಪ ಹೊರಕೇರಿ, ಹೊನ್ನಪ್ಪ ಕರೂರ, ಹೊನ್ನಪ್ಪ ಮುದ್ದಿ, ಸಿದ್ದಪ್ಪ ಜಂಗಳೇರ, ಕೆ ಹನುಮಂತಪ್ಪ, ಸಿದ್ದಪ್ಪ ಬಣಕಾರ, ಸಂಭಾಜಪ್ಪ ಅವತಾಡೆ, ನಾಗಪ್ಪ ನಾಗಪ್ಪನವರ, ಹೆಚ್ ನಾಗರಾಜ, ಸೇರಿದಂತೆ ನೂರಾರು ಗಣ್ಯರು ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ವಿವಿಧ ರೂಪದಲ್ಲಿ ತಮ್ಮ ಭಕ್ತಿ ಸೇವೆ ಸಲ್ಲಿಸಿದ ಧಾನಿಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು.