ಕಾರವಾರ16 : ಮಾನವೀಯತೆ ಮತ್ತು ಕರುಣೆಯನ್ನು ತೋರುವುದರ ಮೂಲಕ ವಿಕಲಚೇತನರಲ್ಲಿ ಆತ್ಮವಿಶ್ವಾಸ ತುಂಬಬೇಕಿದೆ. ನಿರಂತರ ಸಂವಾದದಿಂದ ಅವರನ್ನು ಕ್ರಿಯಾಶೀಲರನ್ನಾಗಿ ಮಾಡಬಹುದು. ವಿಕಲಚೇತನರಿಗೆ ಅಗತ್ಯವಾದ ಸಾಧನ ಸಲಕರಣೆಗಳನ್ನು ನೀಡುವುದರಿಂದ ಅವರಲ್ಲಿ ನಾವು ಯಾರಿಗೂ ಹೊರೆಯಾಗಿಲ್ಲ ಎಂಬ ನಂಬಿಕೆ ತುಂಬಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೋಗೇರ ಅಭಿಪ್ರಾಯಪಟ್ಟರು.
ಶುಕ್ರವಾರ ಜಿಲ್ಲಾ ರಂಗಮಂದಿರದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಇಂಡಿಯನ್ ಆಯಿಲ್ ಕಾಪರ್ೋರೇಶನ್ ಲಿಮಿಟೆಡ್ ಮತ್ತು ಕೃತಕ ಅಂಗಾಂಗಳ ಭಾರತೀಯ ಉತ್ಪಾದನಾ ನಿಗಮ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾದ ವಿಕಲಚೇತನರಿಗೆ ಸಾಧನ ಸಲಕರಣೆಗಳ ವಿತರಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ದಿವ್ಯಾಂಗರಿಗೆಉಚಿತವಾಗಿ ಸಾಧನ ಸಲಕರಣೆ ನೀಡುತ್ತಿರುವುದು ಅತ್ಯುತ್ತಮ ಕಾರ್ಯವಾಗಿದೆ. ಸಾಧನ ಸಲಕರಣೆಗಳನ್ನು ಪಡೆದ ಫಲಾನುಭವಿಗಳು ಸದುಪಯೋಗಪಡಿಸಿಕೊಂಡು ಎಲ್ಲ ರಂಗದಲ್ಲೂ ಮುಂದೆ ಬರಬೇಕು ಎಂದು ಹೇಳಿದರು.
ಭಟ್ಕಳ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ವಿಕಲಚೇತರನ್ನು ಗುರುತಿಸುವ ಕಾರ್ಯ ಕೇವಲ ಅಧಿಕಾರಿಗಳದ್ದಲ್ಲ. ಸಾರ್ವಜನಿಕರ ಸಹಕಾರದೊಂದಿಗೆ ಜನಪ್ರತಿನಿಧಿಗಳು ಕೂಡಾ ವಿಕಲಚೇತರನ್ನು ಗುರುತಿಸಿ ಅವರನ್ನು ಮುಖ್ಯ ವಾಹಿನಿಗೆ ತರಬೇಕು. ಆಗ ಮಾತ್ರ ಸಮಾಜ ಸೇವೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ವಿಕಲಾಂಗರಿಗೆ ಅಂಗವೈಕಲ್ಯ ದೃಢೀಕರಣ ಪ್ರಮಾಣ ಪತ್ರ ನೀಡಲು ಅಧಿಕಾರಿಗಳು ವಿಳಂಬ ಮಾಡುವುದು ಅಥವಾ ಸತಾಯಿಸುವುದು ಸೂಕ್ತವಲ್ಲ. ಮುಂಬರುವ ದಿನಗಳಲ್ಲಿ ಕುಮಟಾ ಕ್ಷೇತ್ರದಲ್ಲಿ ಶಾಸಕರ ಅನುದಾನದಿಂದ ವಿಕಲಚೇತನರಿಗೆ ಸಾಧನ ಸಲಕರಣೆಗಳನ್ನು ನೀಡಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಕಾರ್ಯನಿವರ್ಾಹಣಾಧಿಕಾರಿ ಮೊಹಮ್ಮದ್ ರೋಶನ್ ಮಾತನಾಡಿ ವಿಕಲ ಚೇತನರಿಗೆ ಸಕರ್ಾರ ಸಾಧ್ಯವಿರುವ ಎಲ್ಲಾ ನೆರವು ನೀಡುತ್ತಿದೆ. ಸಾಮಾಜಿಕ ಸಂಸ್ಥೆಗಳು ಸಹ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಲು ಆರಂಭಿಸಿವೆ. ಇದು ಉತ್ತಮ ಬೆಳವಣಿಗೆ ಎಂದರು.
ಇಂಡಿಯನ್ ಆಯಿಲ್ ಕಾಪರ್ೋರೇಶನ್ ಲಿಮಿಟೆಡ್ ಕನರ್ಾಟಕ ರಾಜ್ಯ ಕಚೇರಿ ಕಾರ್ಯನಿವರ್ಾಹಕ ನಿದರ್ೇಶಕ ಡಿ.ಎಲ್.ಪ್ರಮೋದ ಮಾತನಾಡಿ ಐಒಸಿಎಲ್ ವಿಕಲಾಂಗ ವ್ಯಕ್ತಿಗಳ ಸಬಲೀಕರಣದ ಕಡೆಗೆ ತನ್ನ ಆರಂಭಿಕ ಹೆಜ್ಜೆಯನ್ನು ಇಟ್ಟಿದ್ದು, ಇಂದು ಕಾರವಾರದಲ್ಲಿ 363 ಫಲಾನುಭವಿಗಳಿಗೆ 35 ಲಕ್ಷ ಮೌಲ್ಯದ ವಿವಿಧ ಪರಿಕರಗಳನ್ನು ವಿತರಿಸಲಾಗುತ್ತಿದ.ೆ ಇದೇ ರೀತಿ ಮುಂಬರುವ ದಿನಗಳಲ್ಲಿ ಶಿವಮೊಗ್ಗ ಮತ್ತು ಗುಲ್ಬರ್ಗದಲ್ಲಿ ಶಿಬಿರ ಆಯೋಜಿಸಲಾಗುವುದು. ಇಂತಹ ಶಿಬಿರಗಳನ್ನು ಆಯೋಜಿಸುವ ಮುಖ್ಯ ಉದ್ದೇಶವು ಸಿ.ಎಸ್.ಆರ್. (ಸಾರ್ವಜನಿಕ ಜವಾಬ್ದಾರಿ ನಿರ್ವಹಣೆ) ಅನುದಾನದ ಹಣವನ್ನು ಪಾರದರ್ಶಕ ರೀತಿಯಲ್ಲಿ ಬಳಸುವುದು ಮತ್ತು ದೇಶಾದ್ಯಂತ ವಿಕಲಚೇತನರಿಗೆ ಜಾಗೃತಿ ಮೂಡಿಸುವುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಸ್ವಾಗತಿಸಿದರು. ಸುರೇಶ ಶೆಟ್ಟಿ ನಿರೂಪಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿದರ್ೇಶಕ ರಾಜೇಂದ್ರ ಬೇಕಲ್ ವಂದನಾರ್ಪಣೆ ಸಲ್ಲಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಎಮ್. ರೋಶನ್, ಸಹಾಯಕ ಕಮಿಷನರ್ ಅಭಿಜೀನ್ ಮತ್ತು ಇತರರು ಉಪಸ್ಥಿತರಿದ್ದರು.