ಪಕ್ಷಿ ಸಂಕುಲದಿಂದ ಮಾನವನ ಜೀವನ ಸಮತೋಲನದಲ್ಲಿದೆ - ಡಾ.ಅಜಿತ ಪ್ರಸಾದ
Human life is in balance with the birdlife - Dr. Ajit Prasad
ಪಕ್ಷಿ ಸಂಕುಲದಿಂದ ಮಾನವನ ಜೀವನ ಸಮತೋಲನದಲ್ಲಿದೆ - ಡಾ.ಅಜಿತ ಪ್ರಸಾದ
ಧಾರವಾಡ 15 : ಮಾನವನ ಜೀವನಕ್ಕೂ ಪಕ್ಷಿಗಳಿಗೂ ಅವಿನಾಭಾವ ಸಂಭಂದವಿದೆ. ಸಾಹಿತ್ಯ, ಸಂಸ್ಕೃತಿ, ಸಂಗೀತ, ನೃತ್ಯವಷ್ಟೆ ಅಲ್ಲದೇ ವಿಮಾನ ಹಾರಾಟದಲ್ಲೂ ಪಕ್ಷಿಗಳ ಬದುಕು ಮಾನವನ ಜೀವನಕ್ಕೆ ಪ್ರೇರಣೆಯಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆಯಲ್ಲಿ ಮಾನವ ತನ್ನ ಸ್ವಾರ್ಥಕ್ಕಾಗಿ ಎಲ್ಲವನ್ನೂ ನಾಶಪಡಿಸುತ್ತಾ ಸಾಗುತ್ತಿದ್ದು, ಮಾನವನ ನೆಮ್ಮದಿಯ ಜೀವನಕ್ಕೆ ಪ್ರಕೃತಿಯೇ ಮೂಲ ಕಾರಣ ಎಂಬುದನ್ನು ಮೆರೆಯುತ್ತಿದ್ದಾನೆ ಎಂದು ನಗರದ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಶ್ರೀ ಶಾರದಾಬಾಯಿ ಕೊಪ್ಪಳ ಇವರ ಸ್ಮರಣಾರ್ಥ ಶ್ರೀ ಕೊಪ್ಪಳ ಪಾಂಡುರಂಗ ವಿಠ್ಠಲ ಇವರ ಪ್ರಾಯೋಜತ್ವದಲ್ಲಿ ಆಯೋಜಿಸಲಾಗಿದ್ದ ಪಕ್ಷಿಗಳು ನಿಸರ್ಗದ ಆಧಾರ ಸ್ಥಂಭಗಳು ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಜೆ.ಎಸ್.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಮಾತನಾಡುತ್ತಿದ್ದರು. ಪ್ರಕೃತಿ ಮಾನವನ ಜೀವನಕ್ಕೆ ಸಹಾಯಕವಾಗುವಂತೆ ಪ್ರಾಣಿ-ಪಕ್ಷಿ, ಸಸ್ಯ ಸಂಕುಲವನ್ನು ಕೊಟ್ಟಿದೆ. ಅವುಗಳೊಂದಿಗೆ ಸರಿಯಾಗಿ ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸಿದಾಗ ಮಾತ್ರ ಮಾನವ ಕುಲ ಉಳಿಯುತ್ತದೆ. ಇಲ್ಲವಾದರೇ ಮುಂದಿನ ದಿನಮಾನಗಳಲ್ಲಿ ಮಾನವ ತನ್ನ ಅಳಿವಿಗೆ ತಾನೇ ಕಾರಣನಾಗುತ್ತಾನೆ. ಇಂತಹ ಉಪನ್ಯಾಸಗಳು ವಿದ್ಯಾರ್ಥಿಗಳಲ್ಲಿ ನಿಸರ್ಗದ ಮೇಲೆ ಪ್ರೀತಿಯನ್ನು ಬೆಳೆಸಿ ಉಳಿಸಲು ಪ್ರಮುಖ ಪಾತ್ರವಹಿಸುತ್ತವೆ. ಮೊಬೈಲ್‌ನಲ್ಲಿ ಮಾತ್ರ ಮಕ್ಕಳಿಗೆ ನಾವು ಪ್ರಾಣಿ-ಪಕ್ಷಿಗಳನ್ನು ತೋರಿಸುತ್ತಿದ್ದು, ಅವುಗಳು ನಿಜವಾದ ಸ್ವರೂಪ ಹೇಗಿದೆ ಎಂಬುದು ಇಂದಿನ ಪೀಳಿಗೆಗೆ ಗೊತ್ತೆ ಇಲ್ಲ ಎಂಬುದು ವಿಷಾದನೀಯ ಸಂಗತಿ ಎಂದು ಹೇಳಿದರು.
ಉಪನ್ಯಾಸಕಾರಾಗಿ ಆಗಮಿಸಿದ್ದ ಪಕ್ಷಿಪ್ರೇಮಿ, ಪಕ್ಷಿಮಿತ್ರ ಶ್ರೀ ಪ್ರಕಾಶ ಗೌಡರ ಉಪನ್ಯಾಸ ನೀಡುತ್ತ ಪ್ರತಿಯೊಂದು ಪ್ರಾಣಿ-ಪಕ್ಷಿಗಳಿಗೆ ಅವುಗಳದ್ದೇ ಆದ ಜೀವನ ಶೈಲಿ ಇದೆ. ಇವುಗಳ ಧ್ವನಿ, ಆಹಾರ ಪದ್ಧತಿ, ದೈಹಿಕ ರಚನೆಗಳು ಪ್ರಕೃತಿಗೆ ಒಂದಿಲ್ಲ ಒಂದು ರೀತಿಯಲ್ಲಿ ಉಪಯೋಗವಾಗುವಂತಹ ಮತ್ತು ಮಾನವ ಸಂಕುಲದ ಏಳ್ಗೆಗೆ ಪೂರಕವಾಗಿ ರಚನೆಯಾಗಿವೆ. ಪ್ರಕೃತಿಯಲ್ಲಿ ಮಾನವನ ಆರೋಗ್ಯ ಹಾಳು ಮಾಡುವ ಕ್ರಿಮಿ, ಕೀಟಗಳಿವೆ ಅವುಗಳನ್ನು ತಮ್ಮ ಆಹಾರವನ್ನಾಗಿ ಸೇವಿಸಿ ಮಾನವನ ಜೀವವನ್ನು ರಕ್ಷಣೆ ಮಾಡುವಂತ ಪಕ್ಷಿಗಳು ನಮ್ಮೋದಿಗೆ ಬದುಕುತ್ತಿವೆ. ಕೆಲವು ಸಮಸ್ಯೆಗಳು ಬಂದಾಗ ಜೀವ ಸಾಕಾಗಿದೆ ಎಂದು ಹೇಳುವ ಮಾನವರು ಪಕ್ಷಿಗಳಿಂದ ಜೀವನಶೈಲಿಯಿಂಂದ ಜೀವನದ ಪಾಠ ಕಲಿಬೇಕಾಗಿದೆ. ತಮಗೆ ಎಷ್ಟೆ ಕಷ್ಟವಾದರೂ, ಎಷ್ಟೂ ಮೈಲಿಗಳಷ್ಟು ದೂರ ಸಾಗಿ ಬದುಕು ಕಟ್ಟಿಕೊಳ್ಳುವ, ಆಹಾರ ಸಂಗ್ರಹಣೆ ಮಾಡುವ ಪರಿಯಂತು ವರ್ಣನಾತೀತ. ಮುಂಜಾನೆ ಕೂಗುವ ಹುಂಜದಿಂದ, ಗುಬ್ಬಿ, ಕಾಗೆ, ಮರಕುಟಿಕ, ಕೋಗಿಲೆ, ರತ್ಮ ಪಕ್ಷಿಗಳಂತಾ ಹಕ್ಕಿಗಳೆಲ್ಲ ಮಾನವನ ಪ್ರತಿ ನಿತ್ಯ ಜೀವನಕ್ಕೆ ಅವಶ್ಯಕವಾಗಿವೆ. ಮರಗಿಡಗಳು ಬೆಳೆಯಲು, ಅವುಗಳ ಪರಾಗ ಸ್ಪರ್ಶದಲ್ಲಿ ಪಕ್ಷಿಗಳ ಕೊಡುಗೆ ಆಪಾರ. ನಾವು ನೋಡುತ್ತಿರುವ ದಟ್ಟ ಕಾಡುಗಳ ಬೆಳವಣಿಗೆಗೆ ಪಕ್ಷಿಗಳೆ ಮುಖ್ಯ ಕಾರಣ. ಮಾನವ ಕೇವಲ ಹಣದಾಸೆ, ಆಧುನೀಕರಣ ಹಾಗೂ ನಾಲಿಗೆ ರುಚಿಯ ಆಹಾರಕ್ಕಾಗಿ ಅವುಗಳನ್ನು ಬಳಸಿಕೊಂಡು ತನ್ನ ಅವನತಿಗೆ ತಾನೇ ಕಾರಣವಾಗುತ್ತಿದ್ದಾನೆ. ಜೆ.ಎಸ್.ಎಸ್ ಸದಾ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು, ಮಕ್ಕಳಲ್ಲಿ ನೈತಿಕ ಶಿಕ್ಷಣ ಹಾಗೂ ಸಂಸ್ಕಾರ ಬೆಳೆಸುತ್ತಿದೆ. ಪಕ್ಷಿ ಸಂಕುಲ ಉಳಿದರೆ, ಪ್ರಕೃತಿ ಉಳಿಯುತ್ತದೆ. ಪ್ರಕೃತಿ ಉಳಿದರೆ ಮಾತ್ರ ಮಾನವನ ಜೀವನ ಉಳಿಯಲು ಸಾಧ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀ ಪ್ರಕಾಶ ಗೌಡರರವರನ್ನು ಜನತಾ ಶಿಕ್ಷಣ ಸಮಿತಿ ಪರವಾಗಿ ಸನ್ಮಾನಿಸಲಾಯಿತು. ವೇದಿಕೆಯ ಮೇಲೆ ವಿವೇಕ ಲಕ್ಷ್ಮೇಶ್ವರ, ಭಲಬೀಮ ಹಾವನೂರ, ಉಮೇಶ ಅಂಬಿಗೇರ ಇದ್ದರು. ಮಂಜನಾಥ ಚಟ್ಟೇರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 