ಎಂಟು ವರ್ಷ ಗತಿಸಿದ ಹುಲ್ಲತ್ತಿ ತಾಂಡಾ ರಸ್ತೆ : ಗ್ರಾಮಸ್ಥರ ಆರೋಪ
Hullathi Tanda Road, which has been closed for eight years: Villagers allege
ಎಂಟು ವರ್ಷ ಗತಿಸಿದ ಹುಲ್ಲತ್ತಿ ತಾಂಡಾ ರಸ್ತೆ : ಗ್ರಾಮಸ್ಥರ ಆರೋಪ
ರಾಣೇಬೆನ್ನೂರು 15 : ಜಿಲ್ಲಾಧಿಕಾರಿಗಳು ಆದೇಶಿಸಿ, ಸೂಚನೆ ಹೊರಡಿಸಿ ಎಂಟು ವರ್ಷ ಗತಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ ಹುಲ್ಲತ್ತಿ ಮತ್ತು ಹುಲ್ಲತ್ತಿ ತಾಂಡಾ ನಾಗರಿಕರು ಭಾರಿ ಪ್ರತಿಭಟನೆ ನಡೆಸಿ, ತಾಲೂಕಾ ಆಡಳಿತಕ್ಕೆ ಮನವಿ ಸಲ್ಲಿಸಿದರು. ಹುಲ್ಲತ್ತಿ ಮತ್ತು ತಾಂಡಾದ ನಾಗರಿಕರು, ರೈತರು, ವಿದ್ಯಾರ್ಥಿಗಳು ನಿತ್ಯವೂ ತಮ್ಮ ವ್ಯವಹಾರ, ವಹಿವಾಟು ಮತ್ತು ವಿದ್ಯಾರ್ಜನೆಗಾಗಿ ನಗರ ಪ್ರದೇಶಕ್ಕೆ ನಿತ್ಯವೂ ಸಂಚರಿಸಲೇಬೇಕು ಇದರ ಅಗತ್ಯ ಮನಗಂಡು ಅಂದು 2017-18ರಲ್ಲಿ ನಾಗರಿಕರು ಮತ್ತು ಗ್ರಾಮಸ್ಥರು ಪ್ರತಿಭಟನೆ ಹಮ್ಮಿಕೊಂಡು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದ ಫಲವಾಗಿ, ಅಧಿಸೂಚನೆ ಹೊರಡಿಸಿ 1 ಎಕರೆ, 22 ಗುಂಟೆ 3 ಆಣೆ ಫಲವತ್ತಾದ ಕೃಷಿ ಭೂಮಿಯನ್ನು ಭೂಸ್ವಾಧೀನ ಮಾಡಲಾಗಿತ್ತು. ಗ್ರಾಮಗಳ ರಸ್ತೆ ನಿರ್ಮಾಣಕ್ಕಾಗಿ 15, ಹಿಸ್ಸಾಗಳ ರೈತರು 1 ಎಕರೆ 22 ಗುಂಟೆ, 3 ಆಣೆ ಭೂಮಿಯನ್ನು ಮತ್ತು 20 ಹುಣಸೆ ಮರಗಳು ಕಳೆದುಕೊಂಡು ಇಂದಿಗೆ ಎಂಟು ವರ್ಷಗಳಾಗಿವೆ, ಆದರೆ ಇದುವರೆಗೂ ಭೂ ಪರಿಹಾರ ಮಾತ್ರ ಸಿಕ್ಕಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಭೂಪರಿಹಾರಕ್ಕಾಗಿ ಉಪ ವಿಭಾಗಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿ ಹಲವು ವರ್ಷಗಳು ಕಳೆದರೂ, ರೈತರಿಗೆ ನ್ಯಾಯ ಸಿಕ್ಕಿಲ್ಲ ಅದಕ್ಕಾಗಿ ಇದೀಗ ಭೂಪರಿಹಾರ ನೀಡದ ಪಿ. ಆರ್.ಇ. ಡಿ, ಇಲಾಖೆಯಿಂದ ನಿರ್ಮಾಣ ಹಂತದ ಜಂಗಲ್ ಕಟಾವು ಮತ್ತು ರಸ್ತೆ ದುರಸ್ತಿ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ಇಂದು ರೈತರಿಗೆ, ಸಾರ್ವಜನಿಕರಿಗೆ ಕುರಿಗಾರರಿಗೆ ವಾಹನ ಸವಾರರಿಗೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಕೂಡಲೇ ನ್ಯಾಯ ದೊರಕಿಸಿಕೊಡಬೇಕು ಎಂದು ಪ್ರಭುಸ್ವಾಮಿ ಕರ್ಜಿಮಠ ಅವರು ತಾಲೂಕ ದಂಡಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ವಿವರಿಸಿದರು. ಸದ್ಯ ಗ್ರಾಮದ 15 ಜನ ರೈತರಿಗೆ 8,11,178 ರೂಗಳ ಮೊತ್ತದ ಭೂ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಇಲ್ಲದೆ ಇದ್ದಲ್ಲಿ ಜಿಲ್ಲಾಡಳಿತದ ವಿಳಂಬ ನೀತಿ ಖಂಡಿಸಿ ಪುನ: ರೈತರು ಧರಣಿ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಪ್ರತಿಭಟನಾ ನಿರತರು ಎಚ್ಚರಿಸಿದರು. ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ಯುವ ಮುಖಂಡ ಜಗದೀಶ್ ಕೆರೊಡಿ, ಚನ್ನಬಸಪ್ಪ ಗುಗ್ಗರಿ, ರಾಜು ಓಲೇಕಾರ, ಹನುಮಂತ ದೊಡ್ಡಮನಿ, ಸಿದ್ದಪ್ಪ ಚಳಗೇರಿ, ಸತೀಶ್ ಹೋಳೇಬಾಗಿಲು, ಹನುಮಂತ ಗೋಣಿಮ್ಮನವರ, ಅಶೋಕ ಕೊಪ್ಪದ, ರವಿ ಕೆರೊಡಿ, ಸಂತೋಷ್ ವಡ್ಡರ ಸೇರಿದಂತೆ ಮತ್ತಿತರ ಗಣ್ಯರು ರೈತರು ರೈತ ಮುಖಂಡರು ಪಾಲ್ಗೊಂಡಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 