ಬೆಂಗಳೂರು ಅರಮನೆಯಲ್ಲಿ ಹುಕ್ಕೇರಿ ಶ್ರೀಗಳಿಗೆ ಅದ್ದೂರಿ ಸನ್ಮಾನ
ಬೆಳಗಾವಿ, 22:ಬೆಂಗಳೂರಿನ ಅರಮನೆಯ ಕಾರ್ಯಕ್ರಮದಲ್ಲಿ ಶ್ರೀಮದ್ ರಂಭಾಪುರೀ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಸನ್ಮಾನಿಸಿ ಆಶೀರ್ವದಿಸಿ ಮಾತನಾಡುತ್ತಾ ಗಡಿಭಾಗದಲ್ಲಿ ಕನ್ನಡದ ಉಳಿವಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಮಠ ಹುಕ್ಕೇರಿಯ ಹಿರೇಮಠ ಗುರು ವಿರಕ್ತರ ನಡುವೆ ಸೇತುವೆಯಾಗಿ ನಿಂತು ಕಾರ್ಯವನ್ನ ಮಾಡುತ್ತಿರುವ ಮಠ ಹುಕ್ಕೇರಿ ಹಿರೇಮಠ. ಸರ್ವ ಜನಾಂಗದವರನ್ನು ಪ್ರೀತಿಯಿಂದ ಕಾಣುತ್ತಿರುವ ಮಠ ಹುಕ್ಕೇರಿ ಹಿರೇಮಠ. ಈ ಮಠ ರಂಭಾಪುರಿ ಪೀಠದ ಶಾಖಾ ಮಠ ಎಂದು ಹೇಳಲು ಅತೀವ ಸಂತೋಷವಾಗುತ್ತದೆ. ಇವರ ನಿರಂತರ ಶ್ರಮ ಇವತ್ತು ನಾಡು ಅಷ್ಟೇ ಅಲ್ಲ ದೇಶ ಹೊರದೇಶಗಳಲ್ಲಿ ಕೂಡ ಜನ ಮೆಚ್ಚುಗೆಯನ್ನು ಪಡೆಯುತ್ತಿದೆ. ಯುವ ಸ್ವಾಮಿಗಳು ಇಂಥ ಕಾರ್ಯವನ್ನು ನಿರಂತರವಾಗಿ ಮಾಡಲಿ ಎಂದು ಶುಭವನ್ನು ಹಾರೈಸಿದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಯುವ ವೇದಿಕೆಯ ಅಧ್ಯಕ್ಷರಾದ ಪ್ರಶಾಂತ್ ಕಲ್ಲೂರ್ ಅವರು ಮಾತನಾಡಿ ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ನಮ್ಮ ವೇದಿಕೆಯಿಂದ ನಡೆಯುತ್ತಿರುವ ಅರಮನೆ ಮೈದಾನದ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮಗೆಲ್ಲ ಸ್ಫೂತರ್ಿಯಾಗಿ ನಿಂತಿದ್ದಾರೆ. ನಮ್ಮವೇದಿಕೆಗೆ ನಿರಂತರವಾಗಿ ಹರಸುತ್ತ ಬಂದಿರುವ ಶ್ರೀಗಳನ್ನು ಸನ್ಮಾನಿಸುತ್ತಿರುವುದು ನಮಗೆ ಅತೀವ ಸಂತೋಷ ತಂದಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಭಾರತವನ್ನು ಇಡೀ ದೇಶ ವಿಶ್ವಗುರು ಎಂದು ಸ್ವೀಕರಿಸಿದೆ. ನಾವೆಲ್ಲರು ಈ ದೇಶದ ಸಂಸ್ಕ್ರತಿಗೆ, ಈ ದೇಶದ ಆಧ್ಯಾತ್ಮ ಶಕ್ತಿಗೆ ತಲೆಬಾಗಬೇಕು. ಆ ಕಾರ್ಯವನ್ನು ನಿರಂತರವಾಗಿ ಮಾಡುವಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಬೆಂಗಳೂರಿನ ಮೆಯರ್ ಗಂಗಾಂಬಿಕೆ ಮಲ್ಲಿಕಾಜರ್ುನ, ವೀರಶೈವ ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷರಾದ ಪರಮಶಿವಯ್ಯನವರು, ಕನರ್ಾಟಕ, ಮಹಾರಾಷ್ಟ್ರದಿಂದ ಆಗಮಿಸಿರುವ ಒಂದು 150 ಕ್ಕೂ ಹೆಚ್ಚು ಸ್ವಾಮಿಗಳು ಉಪಸ್ಥಿತರಿದ್ದರು
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 