ಅಂಚೆ ಇಲಾಖೆಯ ಸಾಧಕರಿಗೆ ಸನ್ಮಾನ
Honours to achievers of the Postal Department
ಹಾವೇರಿ 19 : ಭಾರತೀಯ ಅಂಚೆ ಇಲಾಖೆಯ ಹಾವೇರಿ ವಿಭಾಗದಲ್ಲಿ ಕಳೆದ ಆರ್ಥಿಕ ವರ್ಷದಲ್ಲಿ ಉಳಿತಾಯ ಖಾತೆ , ಅಂಚೆ ಜೀವ ವಿಮೆ ಹಾಗೂ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ವಿಶೇಷ ಅಭಿಯಾನಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಸಿಬ್ಬಂದಿಗಳಿಗೆ ಸನ್ಮಾನ ಸಮಾರಂಭ ಇತ್ತೀಚೆಗೆ ಹಾವೇರಿ ನಗರದ ಜಿ.ಎಚ್.ಕಾಲೇಜ್ ಸಭಾಭವನದಲ್ಲಿ ಜರುಗಿತು.
ಹುಕ್ಕೇರಿಮಠ ಸದಾಶಿವ ಸ್ವಾಮೀಜಿಗಳು ಸಾನಿಧ್ಯವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಸತ್ರ ನ್ಯಾಯಾಧೀಶರಾದ ಬಿರಾದಾರ ದೇವೇಂದ್ರ್ಪ ಅವರು ಸಿಬ್ಬಂದಿಗಳಿಗೆ ಪ್ರಶಸ್ತಿ ವಿತರಿಸಿ, ದಿನನಿತ್ಯದ ಕೆಲಸದ ನಡುವೆ ಈ ಕಾರ್ಯಕ್ರಮವು ಸಿಬ್ಬಂದಿಗಳಲ್ಲಿ ನವಚೈತನ್ಯ ಮೂಡಿಸಲು ಸಹಕಾರಿಯಾಗಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಮಂಜುನಾಥ ಹುಬ್ಬಳ್ಳಿಯವರ ಮಾತನಾಡಿ, ಸಿಬ್ಬಂದಿಗಳು ಇನ್ನು ಹೆಚ್ಚಿನ ಸಾಧನೆ ಮಾಡಬೇಕೆಂದು ಸಲಹೆ ನೀಡಿದರು.
ರಿಜಿನಲ್ ಮ್ಯಾನೇಜರ್ ಜಗದೀಶ ಚಿಕ್ಕನರಗುಂದ, ಸೀನಿಯರ್ ಮ್ಯಾನೇಜರ್ ಗಣೇಶ್ ಕುಮಾರ್, ನೀರೀಕ್ಷಕ ಬಿ.ಎಚ್ ನಾಯ್ಕ್, ಪೋಸ್ಟ್ ಮಾಸ್ಟರ್ ರಮೇಶ ಕಾಳೆ ಇತರರು ಉಪಸ್ಥಿತರಿದ್ದರು. ಸಹಾಯಕ ಅಧೀಕ್ಷಕ ಸೋಮಶೇಖರ ಸಾರಪುರೆ ಸ್ವಾಗತಿಸಿದರು. ಮಂಜುನಾಥ ದೊಡ್ಡಮನಿ ವಂದಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 