ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ
Honoring the awardees
ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ
ಯರಗಟ್ಟಿ 13: ಸಮೀಪದ ಮುನವಳ್ಳಿ ಪಟ್ಟಣದ ಸಮಾಜ ಸೇವಾ ಸಂಸ್ಥೆಯಾದ ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ಶ್ರೀ ವಿ.ಪಿ.ಜೇವೂರ ಸ್ಮಾರಕ ಮೂಕ ಮತ್ತು ಕಿವುಡು ಮಕ್ಕಳ ವಸತಿ ಶಾಲೆಯಲ್ಲಿ ಪ್ರಶಸ್ತಿ ಪುರಸ್ಕೃತರಾದ ಎಂ.ಜಿ.ಹೊಸಮಠ, ಸುಜಾತಾ ರೇಣುಕಪ್ರಸಾದ ಜಂಬಗಿ, ಮೀನಾಕ್ಷಿ ಮುರನಾಳ, ಅನ್ನಪೂರ್ಣ ಲಂಬೂನವರ, ರಮೇಶ ಮುರಂಕರ, ಆರ್.ಎಚ್.ಪಾಟೀಲನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷೆ ಶಾರದಾ ದ್ಯಾಮನಗೌಡರ ಮಾತನಾಡಿ ಪ್ರಶಸ್ತಿಗಳಿಂದ ವೃತ್ತಿ ಗೌರವ ಹೆಚ್ಚುತ್ತದೆ, ಸಮಾಜ ಅವರಿಂದ ಹೆಚ್ಚಿನದನ್ನು ನೀರೀಕ್ಷಿಸುತ್ತದೆ, ಪ್ರಶಸ್ತಿ ಪುರಸ್ಕೃತರು ಇನ್ನಷ್ಟು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿ ಇನ್ನೂ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಸುಷ್ಮಾ ಗೋಮಾಡಿ, ಭಾರತಿ ಕಟಿಗೆನ್ನವರ, ಅಶ್ವಿನಿ ದಶಮನಿ, ವಿಜಯಲಕ್ಷ್ಮೀ ಮುರಂಕರ, ಅನುರಾಧಾ ಬೆಟಗೇರಿ, ಗೌರಿ ಜಾವೂರ, ಸುಮಾ ಯಲಿಗಾರ, ಶೀಲಾ ಕರೀಕಟ್ಟಿ, ಸಹನಾ ನಲವಡೆ, ಪ್ರೀತಿ ಕರೀಕಟ್ಟಿ, ಉಮಾ ಹಂಪಣ್ಣವರ, ಗೀತಾ ಜಿಡ್ಡಿಮನಿ, ಮುಕ್ತಾ ಪಶುಪತಿಮಠ, ಸುಜಾತಾ ಕೋರಿ, ಲಲಿತಾ ಕಾಮಶೆಟ್ಟಿ, ಪೂಜಾ ಗೋಪಶೆಟ್ಟಿ, ಸುಜಾತಾ ಪಾಟೀಲ, ವೈಷ್ಣವಿ ಶೆಟ್ಟರ, ಶೀತಲ ಗೋಮಾಡಿ, ಶಿವು ಕಾಟಿ, ಸುಜಾತಾ ಬಡ್ಲಿ, ಜಂಬಗಿ, ಮಂಜುನಾಥ ಮಾವಿನಕಟ್ಟಿ, ಶಿಕ್ಷಕರು ಸೇರಿದಂತೆ ಇನ್ನರ್‌ವ್ಹೀಲ್ ಕ್ಲಬ್‌ದ ಸದಸ್ಯೆಯರು ಇದ್ದರು.
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್ 