ನಗರದ ಶಾಸಕರ ಸ್ವ ಗೃಹದಲ್ಲಿ ಗೆಳೆಯರ ಬಳಗದ ವತಿಯಿಂದ ಸನ್ಮಾನ

ನಗರದ ಶಾಸಕರ ಸ್ವ ಗೃಹದಲ್ಲಿ ಗೆಳೆಯರ ಬಳಗದ ವತಿಯಿಂದ ಸನ್ಮಾನ  Honored by the group of friends at the city MLA's home

           ಸಿಂದಗಿ 02 : ಸಹಕಾರಿ ಕ್ಷೇತ್ರದಲ್ಲಿ ಅನೇಕ ಸಾಧನೆಗಳಿಗೆ ಮುಖಟ ಪ್ರೀಯರಾದ ಶಾಸಕ ಅಶೋಕ ಮನಗೂಳಿ ಅವರು ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳ ಬೆಂಗಳೂರು ಇದರ ಆಡಳಿತ ಮಂಡಳಿಗೆ ಸತತವಾಗಿ 4ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು ಈ ಕ್ಷೇತ್ರದ ಹಿರಿಮೆ ಹೆಚ್ಚಿಸಿದ್ದಾರೆ ಎಂದು ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ.ಎಂ.ಹಂಗರಗಿ ಅಭಿಮತ ವ್ಯಕ್ತಪಡಿಸಿದರು. 

     ನಗರದ ಶಾಸಕರ ಸ್ವ ಗೃಹದಲ್ಲಿ ಕರ್ನಾಟಕ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳ ಬೆಂಗಳೂರು ಇದರ ಆಡಳಿತ ಮಂಡಳಿಗೆ ಸತತವಾಗಿ 4ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಿ ಮಾತನಾಡಿದರು. 

      ಸನ್ಮಾನ ಸ್ವೀಕರಿಸಿದ ಶಾಸಕ ಅಶೋಕ ಮನಗೂಳಿ ಮಾತನಾಡಿ, ಭಾರತದಲ್ಲಿ ಸಹಕಾರಿ ಕ್ಷೇತ್ರದ ಪಿತಾಮಹ ಎಸ್‌.ಎಸ್‌.ಪಾಟೀಲ ಸಹಕಾರ ಕ್ಷೇತ್ರವನ್ನು ಸ್ಥಾಪನೆ ಮಾಡಿದ್ದರೆ ಕರ್ನಾಟಕದಲ್ಲಿ ಮೊಳವಳ್ಳಿ ಶಿವರಾಯರು ಈ ಕ್ಷೇತ್ರಕ್ಕೆ ಎಳ್ಳು ನೀರು ಎರಚಿ ಬೆಳಿಸಿದ್ದಾರೆ ಅಂತೆಯೇ ಸಣ್ಣ ಅತೀಸಣ್ಣ ವ್ಯಪಾರಸ್ಥರ ಸ್ಥಿತಿ  ಸುಧಾರಣೆ ಕಂಡಿದೆ. ಅವರ ಹಾದಿಯಲ್ಲಿ ಈ ಕ್ಷೇತ್ರವನ್ನು ಬೆಳೆಸಲು ಸಹಕಾರಿ ಮಂಡಳಿಗೆ ಸತತವಾಗಿ ನಾಲ್ಕನೇ ಬಾರಿಗೆ ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿ ಸಹಕಾರಿ ರಂಘದ ಭೀಷ್ಮರೆಂದೆ ಖ್ಯಾತಿ ಪಡೆದ ಸಚಿವ ಎಚ್‌.ಕೆ.ಪಾಟೀಲರಿಗೆ ಅಭಿನಂದನೆ ಸಲ್ಲಿಸುತ್ತೇನೆ ಅಲ್ಲದೆ ಈ ಬಾಗದಲ್ಲಿ ಸಹಕಾರಿ ಕ್ಷೇತ್ರದ ಬೆಳವಣಿಗೆಯಲ್ಲಿ ಜಿಲ್ಲೆಯ ಮತ್ತು ರಾಜ್ಯದ ಎಲ್ಲ ಪಟ್ಟಣ ಸಹಕಾರಿ ಬ್ಯಾಂಕುಗಳ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಎಲ್ಲ ಸದಸ್ಯರಿಗೆ ಸಹಕಾರಿ ಸಂಘಗಳ ಸಹಕಾರ ಅತ್ಯಗತ್ಯ ಎಂದರು.  

      ಈ ಸಂದರ್ಭದಲ್ಲಿ ಟಿಎಸ್‌ಪಿ ಮಂಡಳಿಯ ನಿರ್ದೆಶಕ ವ್ಹಿ.ಬಿ.ಕುರುಡಿ, ಗುತ್ತಿಗೆದಾರ ಆರ್‌.ಡಿ.ದೇಸಾಯಿ, ಸಂಗನಗೌಡ ಪಾಟೀಲ ಅಗಸಬಾಳ, ಶಿವು ಬಡಾನೂರ, ದೈಹಿಕ ಶಿಕ್ಷಣಾಧಿಕಾರಿ ರಮೇಶ ಬಿರಾದಾರ, ಮಹ್ಮದಪಟೇಲ ಬಿರದಾರ, ಸಾಹೇಬಪಟೇಲ ಅವಟಿ, ಹಾಸೀಂ ಆಳಂದ, ರಾಜು ಮದರಖಾನ, ಶಬ್ಬೀರಪಟೇಲ ಬಿರಾದಾರ ಗಣಿಹಾರ ಸೇರಿದಂತೆ ಅನೇಕರಿದ್ದರು.