ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸನ್ಮಾನ
ಹೊಸಪೇಟೆ 06: ಹೊಸಪೇಟೆ ತಾಲೂಕು ಕಛೇರಿ, ಕಂದಾಯ ಇಲಾಖೆಯಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ (ಜೆ.ಕಾರ್ತಿಕ್ ಬಣದ) ವತಿಯಿಂದ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜರುಗಿಸಲಾಯಿತು. ಈ ಸಂದರ್ಭದಲ್ಲಿ ಅನೀಲ್ ಕುಮಾರ್, ಕಂದಾಯ ನೀರೀಕ್ಷಕರು ಭೂಮಿ, ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿಲೇವಾರಿ ಮಾಡುವುದರಲ್ಲಿ ಮತ್ತು ಖಾತಾ ಬದಲಾವಣೆ ಮಾಡುವ ಪ್ರಕ್ರಿಯೆಯಲ್ಲಿ ಭೂ ಕಂದಾಯ ದಾಖಲಾತಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರಲ್ಲಿ ವಿಜಯನಗರ ಜಿಲ್ಲೆ, ಹೊಸಪೇಟೆ ತಾಲೂಕಿನಲ್ಲಿ ರಾಜ್ಯಕ್ಕೆ ಪ್ರಥಮಸ್ಥಾನ ಪಡೆದಿರುತ್ತಾರೆ. ಆದ್ದರಿಂದ ಇವರಿಗೆ ವಿಜಯನಗರ ಜಿಲ್ಲಾಧಿಕಾರಿಗಳು ರಂದು ಸನ್ಮಾನಿಸಿ ಗೌರವ ಸಲ್ಲಿಸಿರುತ್ತಾರೆ. ಮತ್ತು ಅದೇ ರೀತಿಯಾಗಿ ಪಾಪಿನಾಯಕನಹಳ್ಳಿ ಕಂದಾಯ ಇಲಾಖೆಗೆ ಗ್ರಾಮ ಲೆಕ್ಕಾಧಿಕಾರಿಯಾಗಿ ಗಣೇಶ್ ಇವರು ನೇಮಕವಾಗಿರುತ್ತಾರೆ. ಆದ್ದರಿಂದ ಈ ಕುರಿತು ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಇವರಿಬ್ಬರಿಗೂ ಸನ್ಮಾನಿಸಿ ಇನ್ನು ಹೆಚ್ಚಿನ ಮಟ್ಟದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಮತ್ತು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ನಿರ್ವಹಿಸಲು ಎಂದು ಶುಭಹಾರೈಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರು ಕೆ.ಹೇಮರೆಡ್ಡಿ, ತಾಲೂಕು ಅಧ್ಯಕ್ಷರು ಮಲ್ಲಿಕಾರ್ಜುನ, ತಾಲೂಕು ಕಾರ್ಯಧ್ಯಕ್ಷರು ಮಹಾಂತೇಶ್.ಕೆ.ಹೆಚ್, ತಾಲೂಕು ಪ್ರಧಾನ ಕಾರ್ಯದರ್ಶಿ ನಲ್ಲಾಪುರ ನಾಗರಾಜ, ತಾಲೂಕು ಉಪಾಧ್ಯಕ್ಷರು ಎಲ್.ಎಸ್.ರುದ್ರ್ಪ, ತಾಲೂಕು ಗೌರವಾಧ್ಯಕ್ಷರು ಜ್ಯೋತಿ ಕೊಟ್ರ್ಪ, ಮತ್ತು ರೈತ ಮುಖಂಡರಾದ ದೇವೇಂದ್ರ್ಪ ವಡ್ಡರಹಳ್ಳಿ, ತಿಮ್ಮಾರೆಡ್ಡಿ, ಯು.ರಮೇಶ್, ಧರ್ಮಸಾಗರ, ಸಂತೋಶ್ ನಾಯ್ಕ್ ಸೀತಾರಾಮ್ ತಾಂಡ, ಹಂಪಯ್ಯ ವಡ್ಡರಹಳ್ಳಿ ಮತ್ತು ಇನ್ನು ಮುಂತಾದವರು ಉಪಸ್ಥಿತರಿದ್ದರು.