ವೃದ್ಧ ದಂಪತಿಗಳ ಗೌರವಿಸಿ, ಸೇವೆ ಮಾಡಿ: ಶಿರಶ್ಯಾಡ ಪೂಜ್ಯರು

ವೃದ್ಧ ದಂಪತಿಗಳ ಗೌರವಿಸಿ, ಸೇವೆ ಮಾಡಿ: ಶಿರಶ್ಯಾಡ ಪೂಜ್ಯರು  Honor and serve elderly couples: Shirashyada Seer


ಇಂಡಿ 29: ವೃದ್ಧರನ್ನು ಗೌರವಿಸುವ ಮೂಲಕ ಯುವಕರಲ್ಲಿ ಹಿರಿಯರ ಬಗ್ಗೆ ಗೌರವ ಹಾಗೂ ಸೇವೆಯ ಮನೋಭಾವ ಬೆಳೆಸಬೇಕು ಎಂದು ಅಭಿನವ ಮುರುಘೇಂದ್ರ ಶಿವಾಚಾರ್ಯರು ಹೇಳಿದರು. ಶಿರಶ್ಯಾಡ ಶಾಖಾ ಮಠದಲ್ಲಿ ನಡೆದ 5ನೇ ಹುಣ್ಣಿಮೆ ಬೆಳದಿಂಗಳು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 60 ವರ್ಷ ಕುಟುಂಬದ ಹೊಣೆ ಹೊತ್ತ ವೃದ್ಧ ದಂಪತಿಗಳನ್ನು ಪ್ರತಿ ತಿಂಗಳು ಗೌರವಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ. ಬಳಬಟ್ಟಿ ಹಾಗೂ ಡಾ.ರಾಜಶೇಖರ ಕೋಳೇಕರ ದಂಪತಿಗಳನ್ನು ಸನ್ಮಾನಿಸಲಾಯಿತು.