ಮನೆ ಓಪನಿಂಗ್ ಕಾರ್ಯಕ್ರಮ: ಪೆಂಡಾಲ್ ತೆರವು ವೇಳೆ ವಿದ್ಯುತ್ ಸ್ಪರ್ಶ: ಕಾರ್ಮಿಕ ಸಾವು

ಮನೆ ಓಪನಿಂಗ್ ಕಾರ್ಯಕ್ರಮ:  ಪೆಂಡಾಲ್ ತೆರವು ವೇಳೆ ವಿದ್ಯುತ್ ಸ್ಪರ್ಶ: ಕಾರ್ಮಿಕ ಸಾವು Home opening event: Worker dies after being electrocuted while clearing out pavilion

ಕಾರವಾರ 18 : ಹೊಸ ಮನೆ ಓಪನಿಂಗ್ ಗಾಗಿ ಹಾಕಿದ  ಪೆಂಡಾಲ್ ತೆರವು  ವೇಳೆ ವಿದ್ಯುತ್ ಶಾಕ್ ತಗುಲಿ ಕಾರ್ಮಿಕ ಭರತ್ ಗೌಡ ಸಾವನ್ನಪ್ಪಿದ ಘಟನೆ ಕಾರವಾರ ನ್ಯೂ ಕೆಎಚ್ಬಿ ಕಾಲೋನಿಯಲ್ಲಿ  ಗುರುವಾರ ನಡೆದಿದೆ.  ಪದ್ಮನಾಭ ನಗರದ ಭರತ್ ಗೌಡ (30) ಸಾವನ್ನಪ್ಪಿದ ದುರ್ದೈವಿ. ಕೆ.ಎಚ್‌.ಬಿ ಕಾಲೋನಿಯಲ್ಲಿರುವಜ್ಞಾನ ಮಂದಿರ ಶಾಲೆ ಸನಿಹದ ರಸ್ತೆಯಲ್ಲಿ ನೂತನವಾಗಿ ಕಟ್ಟಿರುವ  ಮನೆಯ ಓಪನಿಂಗ್ ಕಾರ್ಯಕ್ರಮಕ್ಕೆ ಪೆಂಡಾಲ್ ಹಾಕಲಾಗಿತ್ತು. ಪೆಂಡಾಲಿನ ಮೇಲೆ ತಗಡಿನ ಶೀಟು ಅಳವಡಿಸಿದ್ದರು. ಅದನ್ನು ತೆರವುಗೊಳಿಸುವಾಗ ಶೀಟು ಪಕ್ಕದಲ್ಲಿದ್ದ ವಿದ್ಯುತ್ ತಂತಿಗೆ ತಗುಲಿ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ನಗರಸಭೆ ಮಾಜಿ ಸದಸ್ಯ ಹಾಗೂ ಶಾಮಿಯಾನಾದ ಮಾಲಿಕ ಪ್ರೇಮಾನಂದ ಗುನಗಾ ಅವರ ಬಳಿ ಮೃತ ವ್ಯಕ್ತಿ ದುಡಿಯುತ್ತಿದ್ದ ಎನ್ನಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.