ಗೃಹ ಸಚಿವ ಅಮಿತ್ ಶಾ ತಕ್ಷಣ ಕ್ಷಮೆ ಕೇಳಬೇಕು: ಪ್ರಕಾಶ ಬಡೆಣ್ಣವರ
Home Minister Amit Shah should apologize immediately: Prakash Badennavara
ಗೃಹ ಸಚಿವ ಅಮಿತ್ ಶಾ ತಕ್ಷಣ ಕ್ಷಮೆ ಕೇಳಬೇಕು: ಪ್ರಕಾಶ ಬಡೆಣ್ಣವರ
ಶಿರಹಟ್ಟಿ 24 : ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಅವಹೇಳನಾ ಹೇಳಿಕೆಯನ್ನು ಖಂಡಿಸಿ ಶಿರಹಟ್ಟಿ ಪಟ್ಟಣದ ನೆಹರು ವೃತ್ತದಲ್ಲಿ ತಾಲೂಕಾ ಎಸ್‌ಡಿಪಿಐ ಕಾರ್ಯಕರ್ತರು ದೀಡೀರನೆ ಪ್ರತಿಭಟನೆಗೆ ಮುಂದಾದರು.ಈ ಸಂದರ್ಭದಲ್ಲಿ ಎಸ್‌ಡಿಪಿಐ ಮುಖಂಡ ಪ್ರಕಾಶ್ ಬಡೆಣ್ಣವರ ಮಾತನಾಡಿ, ಇಡೀ ರಾಷ್ಟ್ರಕ್ಕೆ ಸಂವಿಧಾನವನ್ನು ನೀಡಿದ ಸಂವಿಧಾನ ಪಿತಾಮಹ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದ ಮಾತುಗಳು ನಮ್ಮೆಲ್ಲರಿಗೂ ಬಹಳ ನೋವನ್ನುಂಟು ಮಾಡಿದೆ, ತಕ್ಷಣವೇ ಗೃಹ ಸಚಿವ ಅಮಿತ್ ಶಾ ಅವರು ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ರಾಷ್ಟ್ರ ವ್ಯಾಪಿ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ವಕೀಲರಾದ ಎಎ ಬೇವಿನಮರದ, ಅಬ್ದುಲ್ ಕಾಗದಗಾರ, ಹಜರತಲಿ ತಹಸೀಲ್ದಾರ, ಸಯ್ಯದ್ ಮಂಡಳ, ಇಸ್ಮಾಯಿಲ್ ನದಾಫ, ದಸ್ತಗೀರ ಜಂಗಿ, ಇಜಾಜ್ ಮುಕಾನದಾರ, ಮಂಜುನಾಥ ಗುಡಿಮನಿ, ಗೌಸ್ ಮಕಾನದಾರ, ಇಮಾಮಹುಸೇನ ಹಮ್ಮಗಿ, ಮಿನಾಜ ಬಳಿಗೇರ, ಬಾಬುಸಾಬ ಢಾಲಾಯುತ, ಬಾಬುಸಾಬ ಕನಕವಾಡ ಸೇರಿದಂತೆ ನೂರಾರು ಎಸ್ ಡಿ ಪಿ ಐ ಕಾರ್ಯಕರ್ತರು ಭಾಗವಹಿಸಿದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 