ಮನಸ್ಸಿನ ಜಡತ್ವ ಹೊಡೆದೋಡಿಸಿ ಪರಸ್ಪರ ಬಣ್ಣ ಎರಚಿ ಶುಭ ಕೋರುವ ಹೋಳಿ

 ಮನಸ್ಸಿನ ಜಡತ್ವ ಹೊಡೆದೋಡಿಸಿ ಪರಸ್ಪರ ಬಣ್ಣ ಎರಚಿ ಶುಭ ಕೋರುವ ಹೋಳಿ Holi is a time to throw colors at each other and wish each other good luck by breaking the inertia

ತಾಂಬಾ  01 : ಈ ಭಾಗದಲ್ಲಿ ವಿಶಿಷ್ಠವಾಗಿ ಆಚರಿಸುವ ಬಣ್ಣದ ಹಬ್ಬ ಹೋಳಿ ಕಾಲಿಟ್ಟಿದೆ ಕಾಮ ಸತ್ತಾನ, ಭೀಮ ಅಳತಾನ ಕುಳ್ಳು ಹಾಕ್ರವೋ.. ಲಬೋ.. ಲಬೋ.. ಎಂದು ಬಾಯಿ ಬಡಿಯುತ್ತ ಮನೆ ಮನೆಗೆ ತೆರಳಿ ಮನಸ್ಸಿನ ಕಾಮನೆಗಳನ್ನೆಲ್ಲ ಹೊರ ಹಾಕುವ ಹಬ್ಬ ಮತ್ತೆ ಬಂದಿದ.ೆ  ಪರಸ್ಪರ ಬಣ್ಣ ಎರಚಿ ಶುಭ ಕೋರಿ ಹೋಳಿ ಮನಸ್ಸಿನ ಜಡತ್ವ ಹೊಡೆದೋಡಿಸಿ ಸೌಹಾರ್ದ ವಾತಾವರಣ ಮೂಡಿಸುತ್ತಿತ್ತು ಆದರೆ ಈಗ ಕಾಲ ಬದಲಾಗಿದೆ. ಹೋಳಿ ಬಂದರೆ ಯಾಕಾದರೂ ಬಂತೋ ಎಂದು ಆಂತಕ ಪಡುವಂತಾಗಿದೆ ಪೊಲೀಸರ ಸರಾ​‍್ಗವಲಿನಲ್ಲಿ ಹಬ್ಬ ಆಚರಿಸಬೇಕಾದ ಸ್ಥಿತಿ ಎಲ್ಲೆಡೆ ನಿರ್ಮಾಣವಾಗಿದೆ.

ನಾನಾ ಭಾಷೆ, ಧರ್ಮ ಹಾಗೂ ಜಾತಿಗಳಿರುವ ಊರುಗಳಲ್ಲಿ ಇಂದು ಹಬ್ಬಗಳಿಗೆ ಪೊಲೀಸ್ ಕಾವಲು ಅನಿವಾರ್ಯ ಎನ್ನುವಂತಾಗಿದೆ. ಪೋಲೀಸರು ಸಹ ಹೋಳಿ ಹಬ್ಬ ಯಾವಾಗ ಮುಗಿಯುತ್ತೋ ಎಂದು ದಿನ ಎಣಿಸುತ್ತಿರುತ್ತಾರೆ . ಹೋಳಿ ಹಬ್ಬದ ಬಣ್ಣದ ದಿನ ಬಹುತೇಕ ಯುವಕರು ಕುಡಿದು ಕುಣಿದು ಕುಪ್ಪಳಿಸುತ್ತಾರ.ೆ ಎಷ್ಟೋ ಬಾರಿ ಬಣ್ಣ ಎರಚುವಾಗ ಸಂಭವಿಸುವ ಜಗಳ ವಿಕೋಪಕ್ಕೆ ತಿರುಗಿದ ಉದಾರಣೆಗಳು ಉಂಟು.  

ಪ್ರವಾಸಕ್ಕೆ ಯುವಕರು ಸಜ್ಜು: ಹೋಳಿ ಹಬ್ಬ ಬಂದರೆ ಸಾಕು ನಾನಾ ಭಾಗಗಳಿಂದ ಯುವಕರು ಮತ್ತು ವಲಸಿಗರು ತಮ್ಮೂರಿಗೆ ಆಗಮಿಸುತ್ತಿದ್ದರು. ಈಗ ಆ ದಿನವೇ ಊರಿನ ಜನ ಬೇರೆಡೆ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಗೋವಾ ಮುಂಬೈ, ಮಂಗಳೂರಿನಂಥ ನಗರಗಳಲ್ಲಿ ಎರಡು ಮೂರು ದಿನ ಕಾಲ ಕಳೆದು ಹಬ್ಬ ಮುಗಿದು ನಂತರ ಮರಳುತ್ತಿದ್ದಾರೆ. "ಹೋಳಿ ಹಬ್ಬದ ದಿನ ಜಗಳ ಆಗ್ತಾವ್ರೀ ಯಾಕ ಕಿರಿಕಿರಿ ಅಂತ ಟೂರ್ ಹೊರಟೇವ್ರಿ"ಎಂದು ಯುವಕರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.  

ಕ್ಷೀಣಿಸಿದ ಹಲಗೆ ನಾದ: ಹೋಳಿ ಹುಣ್ಣಿಮೆ ಮುಂಚಿನ 15 ದಿನ ಗಳಿದ ಆರಂಭವಾಗುತ್ತಿದ್ದ ಹಲಗೆ ಶಬ್ದ ಇತ್ತಿಚಿನ ದಿನಗಳಲ್ಲಿ ಕ್ಷೀಣಿಸುತ್ತಿದೆ. ಗುಂಪು ಗುಂಪಾಗಿ ಹಲಗೆ ಬಾರಿಸುತ್ತಿದ್ದ ಯುವ ಸಮುದಾಯ ಈಗ ಹಲಗೆ ಬಾರಿಸುವುದನ್ನು ನಿಲ್ಲಿಸಿದೆ. ಇದೇ ವೇಳೆ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಗಳು  ಆರಂಭವಾಗುವುದರಿಂದ ಪಾಲಕರು ಮಕ್ಕಳನ್ನು ಹೊರಗೆ ಬಿಡದಿರುವುದು ಸೇರಿದಂತೆ ಹಲವು ಕಾರಣಗಳಿಂದಾಗಿ ಹಲಗೆ ಬಾರಿಸುವವರ ಸಂಖ್ಯೆ ಕಡಿಮೆಯಾಗಿದೆ. ಐದಾರು ವರ್ಷದ ಹಿಂದೆ ಹೋಳಿ ಹಬ್ಬದ ಸಂದರ್ಭದಲ್ಲಿ ಸಾವಿರಾರು ಹಲಗೆ ಮಾರಾಟವಾಗುತ್ತಿದ್ದವು. ಆದರೆ ಈಗ 10 ಹಲಗೆ ಕೂಡಾ ಮಾರಾಟವಾಗಿಲ್ಲ ಎನ್ನುತ್ತಾರೆ ಹಲಗೆ ವ್ಯಾಪಾರಿಗಳು. ಈ ಸಲದ ಹೋಳಿ ಹಬ್ಬ ಹಳೇ ವೈಭವ ಕಂಡುಕೊಳ್ಳಲಿ ಎನ್ನುವುದು ಎಲ್ಲರ ಆಶಯವಾಗಿದೆ.